ಬೆಂಗಳೂರು/ನವದೆಹಲಿ: ಈ ದಬ್ಬಾಳಿಕೆಯಿಂದ ನಮ್ಮ ದೇಶವನ್ನು ಉಳಿಸಲು ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆ, ನಿಮಗೆ ಆತ್ಮೀಯ ಸ್ವಾಗತ ಎಂದು ಹೇಳುವ ಮೂಲಕ ಹಿರಿಯ ನಟ ಪ್ರಕಾಶ್ ರಾಜ್ (Prakash Raj), ರಾಹುಲ್ ಗಾಂಧಿ (Rahul Gandhi) ಅವರನ್ನು ಬೆಂಬಲಿಸಿದ್ದಾರೆ.
Dear @RahulGandhi .. every HOME who want to save our COUNTRY from these tyrants is your HOME .. .. INDIA is your HOME .. you are most WELCOME.. more power to you .. #justasking pic.twitter.com/OCOxnHW93w
— Prakash Raj (@prakashraaj) March 28, 2023
Advertisement
ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಲೋಕಸಭೆಯ ಕಾರ್ಯದರ್ಶಿ ಮೋಹಿತ್ ರಾಜನ್ ಸಂಸದರ ಅಧಿಕೃತ ನಿವಾಸ ಖಾಲಿ ಮಾಡುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದ್ದರು. ಇದನ್ನೂ ಓದಿ: ಧನ್ಯವಾದ, ಮನೆ ಖಾಲಿ ಮಾಡುವೆ – ಲೋಕಸಭೆಯ ವಸತಿ ಸಮಿತಿ ಪತ್ರಕ್ಕೆ ರಾಗಾ ಉತ್ತರ
Advertisement
ಇದಕ್ಕೆ ಪ್ರತ್ಯುತ್ತರ ನೀಡಿ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ನಾನು ಇಲ್ಲಿ ಸಂತೋಷದ ಸಮಯ ಕಳೆದಿದ್ದೇನೆ, ಅದರ ನೆನಪುಗಳಿವೆ. ಜನರ ಆದೇಶಕ್ಕೆ ಋಣಿಯಾಗಿರುವುದಾಗಿ ಹೇಳಿದ್ದಾರೆ. ನನ್ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ನಾನು ಖಂಡಿತವಾಗಿಯೂ ನಿಮ್ಮ ಪತ್ರದಲ್ಲಿರುವ ವಿವರಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು.
Advertisement
Advertisement
ಈ ಕುರಿತು #justasking ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ʻಪ್ರೀತಿಯ ರಾಹುಲ್ ಗಾಂಧಿ, ಈ ದಬ್ಬಾಳಿಕೆಯಿಂದ ನಮ್ಮ ದೇಶವನ್ನು ಉಳಿಸಲು ಬಯಸುವ ಪ್ರತಿಯೊಬ್ಬರ ಮನೆಯೂ ನಿಮ್ಮ ಮನೆ, ಇಡೀ ಭಾರತವೇ ನಿಮ್ಮ ಮನೆ, ನಿಮಗೆ ಆತ್ಮೀಯ ಸ್ವಾಗತ, ಇದುವೆ ನಿಮಗೆ ಹೆಚ್ಚಿನ ಶಕ್ತಿʼಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ರಾಹುಲ್ ಗಾಂಧಿ ಅವರು ಲೋಕಸಭಾ ಕಾರ್ಯದರ್ಶಿಗಳಿಗೆ ಬರೆದ ಪತ್ರವನ್ನೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕ್ಷಮೆ ಕೇಳದಿದ್ರೆ ಮತ್ತೊಂದು FIR ದಾಖಲಿಸುತ್ತೇನೆ: ರಂಜಿತ್ ಸಾವರ್ಕರ್