ಯುವಜನರಿಗೆ ಪ್ಯಾನ್‌ಕೇಕ್ ಸಾಮಾನ್ಯವಾಗಿ ಗೊತ್ತಿರುತ್ತೆ. ಬೆಳಗ್ಗೆ ಯಾವುದಾದ್ರೂ ಫಟಾಫಟ್ ಅಂತ ತಿಂಡಿ ಮಾಡಬೇಕಾಗಿ ಬಂದಾದ ವೆಸ್ಟರ್ನ್ ಸ್ಟೈಲ್‌ನ ಪ್ಯಾನ್‌ಕೇಕ್ ನೀವೂ ಮಾಡಿರುತ್ತೀರಿ. ಆದರೆ ನೀವು ಎಂದಾದ್ರೂ ಡ್ಯಾನಿಶ್ ಪ್ಯಾನ್‌ಕೇಕ್ (Danish Pancake) ಮಾಡಿದ್ದೀರಾ? ನಮ್ಮಲ್ಲಿ ಪಡ್ಡು ಮಾಡೋ ರೀತಿಯಲ್ಲೇ ಇದನ್ನೂ ಮಾಡಲಾಗುತ್ತದೆ. ಆದರೆ ಇದಕ್ಕೆ ಬಳಸುವ ಸಾಮಾಗ್ರಿಗಳು ಭಿನ್ನ. ಚಾಕ್ಲೇಟ್ ಸಿರಪ್, ನುಟೆಲ್ಲಾ, ಅಥವಾ ಯಾವುದೇ ಜ್ಯಾಮ್ ಬಳಸಿ ಈ ಪ್ಯಾನ್‌ಕೇಕ್‌ಗಳಿಗೆ ಫಿಲ್ ಮಾಡಲಾಗುತ್ತದೆ. ಒಮ್ಮೆ ಈ ರುಚಿಯಾದ ಡ್ಯಾನಿಶ್ ಪ್ಯಾನ್‌ಕೇಕ್ ನೀವೂ ಮಾಡಿ ಸವಿದು ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮೈದಾ ಹಿಟ್ಟು – 1 ಕಪ್
ಸಕ್ಕರೆ – 3 ಟೀಸ್ಪೂನ್
ಬೇಕಿಂಗ್ ಪೌಡರ್ – 1 ಟೀಸ್ಪೂನ್
ಜಾಯಿಕಾಯಿ/ದಾಲ್ಚಿನಿ ಮಸಾಲೆ – ಅರ್ಧ ಟೀಸ್ಪೂನ್
ಒಣ ಕಿತ್ತಳೆ ಸಿಪ್ಪೆಯ ತುರಿ – ಅರ್ಧ ಟೀಸ್ಪೂನ್
ಮೊಟ್ಟೆ – 2
ಹಾಲು – ಮುಕ್ಕಾಲು ಕಪ್
ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
ಬೆಣ್ಣೆ – 3 ಟೀಸ್ಪೂನ್
ನುಟೆಲ್ಲಾ – ಅರ್ಧ ಕಪ್ (ಚಾಕ್ಲೇಟ್ ಸಿರಪ್ ಅಥವಾ ಹಣ್ಣಿನ ಜ್ಯಾಮ್ ಕೂಡಾ ಬಳಸಬಹುದು) ಇದನ್ನೂ ಓದಿ: ಮನೆಯಲ್ಲೇ ಮಾಡಿ ಸ್ಟ್ರಾಬೆರಿ ಓಟ್ಸ್ ಕುಲ್ಫಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಸಕ್ಕರೆ, ಬೇಕಿಂಗ್ ಪೌಡರ್, ಜಾಯಿಕಾಯಿ, ಮತ್ತು ಕಿತ್ತಳೆ ಸಿಪ್ಪೆಯ ತುರಿಯನ್ನು ಹಾಕಿ ಮಿಶ್ರಣ ಮಾಡಿ.
* ಇನ್ನೊಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ, 1 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಹಾಲು ಮತ್ತು ವೆನಿಲ್ಲಾ ಸಾರವನ್ನು ಮೊಟ್ಟೆಗೆ ಹಾಕಿ ಮಿಶ್ರಣ ಮಾಡಿ.
* ಈಗ ಹಿಟ್ಟಿನ ಮಿಶ್ರಣಕ್ಕೆ ಮೊಟ್ಟೆಯ ಮಿಶ್ರಣವನ್ನು ಸುರಿಯಿರಿ. ಬಳಿಕ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಕರಗಿಸಿದ ಬೆಣ್ಣೆಯನ್ನು ಸೇರಿಸಿ, ಮಿಕ್ಸ್ ಮಾಡಿ.
* ಈಗ ಪಡ್ಡು ತಯಾರಿಸುವ ಪ್ಯಾನ್ ಅನ್ನು ಬಿಸಿ ಮಾಡಿ, ಗುಳಿಗಳಿಗೆ ಸ್ವಲ್ಪ ಸ್ವಲ್ಪವೇ ಎಣ್ಣೆಯನ್ನು ಗ್ರೀಸ್ ಮಾಡಿ.
* ಪ್ಯಾನ್ ಬಿಸಿಯಾದ ಬಳಿಕ ಗುಳಿಗಳ ಅರ್ಧ ಭಾಗದಷ್ಟು ಹಿಟ್ಟನ್ನು ಸುರಿಯಿರಿ. ಅದರ ಮೇಲೆ ಮುಕ್ಕಾಲು ಭಾಗಕ್ಕೆ ಬರುವಂತೆ ನುಟೆಲ್ಲಾವನ್ನು ಸೇರಿಸಿ. ನಂತರ ಅದರ ಮೇಲೆ ಗುಳಿಯ ಪೂರ್ಣ ಭಾಗ ತುಂಬುವಂತೆ ಮತ್ತೆ ಹಿಟ್ಟನ್ನು ಹಾಕಿ.
* ಈಗ ಪ್ಯಾನ್‌ಕೇಕ್‌ಗಳನ್ನು ಬೇಯಲು ಬಿಡಿ. ತಳಭಾಗ ಗೋಲ್ಡನ್ ಬ್ರೌನ್ ಬಣ್ಣ ಬಂದಂತೆ ಅವುಗಳನ್ನು ನಿಧಾನವಾಗಿ ಸ್ಪೂನ್ ಸಹಾಯದಿಂದ ಮಗುಚಿ ಹಾಕಿ, ಇನ್ನೊಂದು ಬದಿಯೂ ಬೇಯಲು ಬಿಡಿ.
* ಪ್ಯಾನ್‌ಕೇಕ್‌ನ ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅವುಗಳನ್ನು ಪ್ಯಾನ್‌ನಿಂದ ತೆಗೆಯಿರಿ. ಉಳಿದ ಹಿಟ್ಟನ್ನೂ ಇದೇ ರೀತಿ ಮುಂದುವರಿಸಿ.
* ಡ್ಯಾನಿಶ್ ಪ್ಯಾನ್‌ಕೇಕ್ ಇದೀಗ ತಯಾರಾಗಿದ್ದು, ತಣ್ಣಗಾದ ಬಳಿಕ ಸವಿಯಿರಿ. ಇದನ್ನೂ ಓದಿ: ಬೇಕರಿಯಲ್ಲಿ ಸಿಗುವ ಡೋನಟ್ ಮನೆಯಲ್ಲೂ ಮಾಡ್ಬೋದು ತುಂಬಾ ಸುಲಭವಾಗಿ