ಸ್ವಾತಂತ್ರ್ಯ ಬಂದರೂ ಸಮಾನತೆ, ಸಹೋದರತೆ ಧರ್ಮಾಧಾರಿತವಾಗುತ್ತಿದೆ – ಸಿದ್ದರಾಮಯ್ಯ

Public TV
2 Min Read
Siddaramaiah

ಬೆಂಗಳೂರು: 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮೋತ್ಸವದ ಅಂಗವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ತಮ್ಮ ಮನೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ನಮ್ಮದು ವೈವಿಧ್ಯತೆಯ ದೇಶ. ಇಲ್ಲಿ ಎಲ್ಲರಿಗೂ ಸಾಮಾಜಿಕವಾಗಿ ಒಂದೇ ಮೌಲ್ಯ ಸಿಗಬೇಕು. ಆರ್ಥಿಕ, ಸಾಮಾಜಿಕ ಪ್ರಭುತ್ವ ಸಿಗಬೇಕು. ಯಾರು ಅಸಮಾನತೆ ಇದೆ ಅವರು ತಿರುಗಿ ಬೀಳ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ ಮಾಡಿಸಿದ ಸಿ.ಟಿ ರವಿ

ಸಮಾಜದಲ್ಲಿ ಯಾವಾಗಲೂ ಸಮಾನತೆ ಮುಖ್ಯ. ಅದಕ್ಕಾಗಿಯೇ ಸಂವಿಧಾನದಲ್ಲಿ ಎಲ್ಲವನ್ನೂ ಹೇಳಲಾಗಿದೆ. ಎಲ್ಲರಿಗೂ ಸಮಾನತೆ ಸಹೋದರತೆ ಸಿಗಬೇಕು. ಆದರೆ ಇಂದು ಧರ್ಮಾಧಾರಿತವಾಗುತ್ತಿದೆ. ಕೋಮುವಾದಿ ತನದಿಂದ ಪ್ರಜಾಪ್ರಭುತ್ವ ನಾಶವಾಗುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ÷್ಯಕ್ಕೆ ಧಕ್ಕೆ ಬರುತ್ತಿದೆ. ಅದಕ್ಕಾಗಿ ನಾವು ಮತ್ತೆ ಹೋರಾಟ ಮಾಡಬೇಕಿದೆ ಕರೆ ನೀಡಿದ್ದಾರೆ.

ಸಂವಿಧಾನ, ಸಮಾನತೆ, ಭ್ರಾತೃತ್ವ ಎಲ್ಲವನ್ನೂ ನಾವು ಒಪ್ಪಿಕೊಂಡಿದ್ದೇವೆ. ಇಂದು ಪ್ರಜಾಪ್ರಭುತ್ವ, ಸಂವಿಧಾನ ಎರಡನ್ನೂ ಉಳಿಸುವ ಕೆಲಸ ಆಗಬೇಕಿದೆ. ಆಗ ಮಾತ್ರ ನಮಗೆ ನ್ಯಾಯ ಸಿಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಾರಿಗೆ ಬೈಕ್ ಡಿಕ್ಕಿ- ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ ಪುತ್ರ ದುರ್ಮರಣ

Siddaramaiah 5

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಿನ್ನೆ ನೀವೆಲ್ಲ ಜಾಹಿರಾತು ನೊಡಿದ್ದೀರಲ್ಲಿ ನೆಹರು ಅವರ ಭಾವಚಿತ್ರ ತೆಗೆದು ಹಾಕಿದ್ದಾರೆ. ಅಂಬೇಡ್ಕರ್ ಅವರನ್ನ ಕೊನೆಯಲ್ಲಿ ಹಾಕಿದ್ದಾರೆ, ಸಾವರ್ಕರ್ ಮೊದಲಿಗೆ ಹಾಕಿದ್ದಾರೆ. ಇದರಿಂದ ಆರ್‌ಎಸ್‌ಎಸ್ ಕಪಿಮುಷ್ಠಿಯಲ್ಲಿ ಈ ಸರ್ಕಾರವಿದೆ ಎಂಬುದು ತಿಳಿಯುತ್ತದೆ. ಆರ್‌ಎಸ್‌ಎಸ್ ಸ್ವಾತಂತ್ರ÷್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಇದೇ ಸಾರ್ವಕರ್ ಬ್ರಿಟಿಷರಿಗೆ ನಾವು ಸಹಕರಿಸುತ್ತೇವೆಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಇವತ್ತು ಸಂದಿಗ್ಧತೆ ದೇಶದಲ್ಲಿದ್ದು, ಮತ್ತೊಮ್ಮೆ ಹೋರಾಟ ಅನಿವಾರ್ಯವಾಗಿದೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಹೆಜ್ಜೆ ಇಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

BASAVARJ BOMMAI

ಬೊಮ್ಮಾಯಿ ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿದ್ರಾ?
ಬಿಜೆಪಿಯ ರಾಜಕಾರಣ ಇದು ಖಂಡಿತವಾಗಿಯೂ ಆರ್‌ಎಸ್‌ಎಸ್ ಹಿಡನ್ ಅಜೆಂಡಾ ಅನ್ನೋದು ಗೊತ್ತಾಗುತ್ತದೆ. ಈಶ್ವರಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರಾ? ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರಾ? ಬಿಜೆಪಿ ರವಿಕುಮಾರ್ ಭಾಗಿಯಾಗಿದ್ರಾ? ಇವರಿಗೆ ಇತಿಹಾಸವೂ ಗೊತ್ತಿಲ್ಲ, ಅದನ್ನು ತಿರುಚುವುದು ಬೇರೆ ಮಾಡ್ತಾರೆ. ಈಶ್ವರಪ್ಪ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ರಾ? ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ರಾ?

Live Tv

 

Share This Article