ಮುಂಬೈ: ʻನಾನು 15 ವರ್ಷದವಳಿದ್ದಾಗ ಫೇಸ್‌ಬುಕ್ (Facebook) ಪ್ರೊಫೈಲ್‌ನಲ್ಲಿ ಸಾಧಾರಣ ಫೋಟೋವೊಂದನ್ನ ಅಪ್ಲೋಡ್ ಮಾಡಿದ್ದೆ, ಯಾರೋ ಅದನ್ನ ಡೌನ್‌ಲೋಡ್ ಮಾಡಿಕೊಂಡು ಪೋರ್ನ್ ವೆಬ್‌ಸೈಟ್‌ನಲ್ಲಿ ಹಾಕಿದ್ದರು. ಈ ವಿಷಯ ನಿಧಾನವಾಗಿ ಎಲ್ಲಕಡೆ ಹರಡಿತ್ತು. ಇದರಿಂದ ಎಲ್ಲರೂ ನನ್ನನ್ನ ಪೋರ್ನ್ ಸ್ಟಾರ್ ಎಂದು ಕರೆಯಲು ಶುರು ಮಾಡಿದ್ದರು. ಈ ಬಗ್ಗೆ ನಾನು ನನ್ನ ತಂದೆಯೊಂದಿಗೆ ಹೇಳಿಕೊಂಡರೂ ಅವರು ನಂಬಲು ತಯಾರಿರಲಿಲ್ಲ. ಮೊದಲೇ ಬಾಯಿಗೆ ಬಂದಂತೆ ನಿಂದಿಸುತ್ತಿದ್ದ ಅವರು, ಕೊನೆಗೆ ನನ್ನನ್ನ ʻಇವಳು ಪೋರ್ನ್ ಸ್ಟಾರ್ʼ ಎಂದೂ ಕರೆದುಬಿಟ್ಟರು. ಅವರಿಂದ ಹಿಂಸೆ ತಾಳಲಾರದೇ ನನ್ನ 17ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋದೆʼ.. ಸಂದರ್ಶನವೊಂದರಲ್ಲಿ ಬಿಗ್‌ಬಾಸ್ (Bigg Boss) ಮಾಜಿ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ತನ್ನ ಬಾಲ್ಯದ ಕರಾಳ ನೆನಪುಗಳನ್ನು ಬಿಚ್ಚಿಟ್ಟ ರೀತಿ ಇದಾಗಿತ್ತು.
Advertisement
ಖಾಸಗಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಉರ್ಫೀ ಜಾವೇದ್, ನಾನು 17ನೇ ವಯಸ್ಸಿಗೆ ಮನೆಯಿಂದ ಓಡಿಹೋಗಲು ನಿರ್ಧರಿಸಿದೆ. ಏಕೆಂದರೆ ನನ್ನ ತಂದೆ ತುಂಬಾ ಹೊಡೆಯುತ್ತಿದ್ದರು, ಕಿರುಕುಳ ನೀಡುತ್ತಿದ್ದರು. ಒಮ್ಮೊಮ್ಮೆ ಮೂರ್ಛೆ ಹೋಗುವ ತನಕ ಹೊಡೆಯುತ್ತಿದ್ದರು. ಅಷ್ಟೇ ಅಲ್ಲ ನನ್ನ ಸಂಬಂಧಿಕರೂ ನನ್ನನ್ನ ತುಂಬಾ ಅವಮಾನಿಸುತ್ತಿದ್ದರು ಎಂದು ಉರ್ಫಿ ಭಾವುಕರಾಗಿದ್ದಾರೆ. ಇದನ್ನೂ ಓದಿ: ನಿಮ್ಮ ಉಪಸ್ಥಿತಿಗೆ ಬೆಲೆ ಕೊಡುವವರನ್ನು ಬಿಟ್ಟೋಗ್ಬೇಡಿ-ರಾಧಿಕಾ ಪಂಡಿತ್ ಹಿಂಗ್ಯಾಕಂದ್ರು?
Advertisement
Advertisement
ನಾನು 15 ವರ್ಷದವಳಿದ್ದಾಗ ಯಾರೋ ನನ್ನ ಫೋಟೋವನ್ನು ಪೋರ್ನ್ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಿದ್ದರು. ಅದು ನನ್ನ ಸಹಜವಾದ ಫೋಟೋ ಆಗಿತ್ತು. ಆ ಫೋಟೋವನ್ನು ನನ್ನ ಫೇಸ್‌ಬುಕ್ ಪ್ರೊಫೈಲ್ ಚಿತ್ರವಾಗಿ ಟ್ಯೂಬ್ ಟಾಪ್ ಧರಿಸಿ ಹಾಕಿದ್ದೆ. ಯಾರೋ ಅದನ್ನು ಡೌನ್‌ಲೋಡ್ ಮಾಡಿ ಯಾವುದೇ ಮಾರ್ಫಿಂಗ್ ಇಲ್ಲದೆ ಪೋರ್ನ್ ಸೈಟ್ಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಚಾರ ನಿಧಾನವಾಗಿ ಎಲ್ಲಕಡೆ ಹರಡಿತು. ಎಲ್ಲರೂ ನನ್ನನ್ನು ʻಪೋರ್ನ್ ಸ್ಟಾರ್ʼ ಎಂದು ಕರೆಯಲು ಪ್ರಾರಂಭಿಸಿದರು. ನಾನು ವೀಡಿಯೋ ಎಲ್ಲಿದೆ? ಸಾಕ್ಷಿ ತೋರಿಸಿ ಎಂದು ಕೇಳಿದರೂ ಪೋರ್ನ್ ಸ್ಟಾರ್ ಎಂದೇ ಅವಮಾನಿಸಿದರು. ನನ್ನ ತಂದೆ ಕೂಡ ನನ್ನನ್ನ ಪೋರ್ನ್ ಸ್ಟಾರ್ ಎಂದುಬಿಟ್ಟರು ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್‌ಬಿಗ್ ಅಪ್‌ಡೇಟ್- ಯುವನ ಯುಗಾರಂಭ
Advertisement
ಈ ಎಲ್ಲ ವಿಚಾರಗಳನ್ನ ನನಗೆ ನಂಬಲು ಆಗಿರಲಿಲ್ಲ. ಆದರೂ ಆ ಸಂದರ್ಭದಲ್ಲಿ ಅಸಹಾಯಕಳಾಗಿದ್ದರಿಂದ ಏನೂ ಮಾಡಲಾಗಲಿಲ್ಲ. ಅದಾದ 2 ವರ್ಷಗಳ ಕಾಲ ಎಲ್ಲವನ್ನೂ ಸಹಿಸಿಕೊಂಡೆ. ನಂತರ ನನಗೆ 17 ವರ್ಷವಿದ್ದಾಗ ನಾನು ಮನೆಯಿಂದ ಓಡಿಹೋದೆ. ಆ ನಂತರ ಮಕ್ಕಳಿಗೆ ಟ್ಯೂಷನ್ ಮಾಡುತ್ತಾ ಜೀವನ ಸಾಗಿಸುತ್ತಿದ್ದೆ. ಬಳಿಕ ಕಾಲ್‌ಸೆಂಟರ್‌ನಲ್ಲಿ ಕೆಲಸವೂ ಸಿಕ್ಕಿತು. ಆದ್ರೆ ಆ ಕೆಲಸ ಮಾಡಲು ನನಗೆ ಆಸಕ್ತಿ ಇರಲಿಲ್ಲ. ನಂತರ ಮುಂಬೈಗೆ ಬಂದು ವಿಭಿನ್ನ ಪಾತ್ರಗಳಿಗೆ ಆಡಿಷನ್ ನೀಡಿದೆ. ನಂತರ ಟಿವಿಯಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದೆ. ಇದರಿಂದ ಹೇಗೋ ಬಿಗ್ ಬಾಸ್‌ನಲ್ಲಿ ಚಾನ್ಸ್ ಸಿಕ್ಕಿತು. ಅಲ್ಲಿಂದ ಒಂದೇ ವಾರಕ್ಕೆ ನನ್ನನ್ನ ಹೊರಹಾಕಲಾಯಿತು. ಆದರೂ ಅಲ್ಲಿ ಸಿಕ್ಕ ಅವಕಾಶದಿಂದ ನಾನು ಮತ್ತಷ್ಟು ಬೆಳೆದೆ ಎಂದು ತಮ್ಮ ಬೆಳವಣಿಗೆಯ ಹಾದಿಯನ್ನು ವಿವರಿಸಿದ್ದಾರೆ.