DistrictsKarnatakaLatestLeading NewsMain PostMysuru

ಬಿಜೆಪಿ ಕಾರ್ಯಕರ್ತರೂ ಈ ಸರ್ಕಾರವನ್ನು ಮೆಚ್ಚುವುದಿಲ್ಲ: ಎಚ್.ವಿಶ್ವನಾಥ್

ಸಿಎಂ, ಸಿ.ಟಿ.ರವಿ ವಿರುದ್ಧವೂ ವಿಶ್ವನಾಥ್ ಗರಂ

ಮೈಸೂರು: ಪ್ರತಿದಿನ ಒಂದಲ್ಲ ಒಂದು ಹಗರಣಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದೆ. ಈ ಸರ್ಕಾರವನ್ನು ಯಾರು ತಾನೇ ಮೆಚ್ಚೆಕೊಳ್ತಾರೆ. ಬಿಜೆಪಿ ಕಾರ್ಯಕರ್ತರೂ ಮೆಚ್ಚುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಡಳಿತ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನಕ್ಕೊಂದು ಹಗರಣ ಬಯಲಾಗುತ್ತಿರುವಾಗ ಈ ಸರ್ಕಾರಕ್ಕೆ ಜನರಿಂದ ಒಳ್ಳೆಯ ಹೆಸರು ಬರುತ್ತದೆಯೇ? ಈ ಸರ್ಕಾರವನ್ನು ಬಿಜೆಪಿ ಕಾರ್ಯಕರ್ತರೂ ಮೆಚ್ಚುವುದಿಲ್ಲ ಎಂದು ಕೆಂಡಾಮಂಡಲವಾದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮದಲ್ಲಿ ಅಶ್ವಥ್ ನಾರಾಯಣ ಸಹೋದರನಿಗೆ ಲಿಂಕ್ : ಉಗ್ರಪ್ಪ ಆರೋಪ

H VISHWANATH

ಸಾಫ್ಟ್ ಆಗಿ ಆಡಳಿತ ಮಾಡುತ್ತಿದ್ದೇನೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಗರಂ ಆದ ಅವರು, ಇದು ಒಬ್ಬ ಮುಖ್ಯಮಂತ್ರಿ ನೀಡುವ ಹೇಳಿಕೆಯಲ್ಲ. ಆಡಳಿತದಲ್ಲಿ ಸಾಫ್ಟ್ ಅಥವಾ ಹಾರ್ಡ್ ಅಂತಾ ಇಲ್ಲ. ಇರುವ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಬೇಕು ಅಷ್ಟೇ. ನಿಮ್ಮ ಹಾರ್ಡ್ ವೆಪನ್ ಅನ್ನು ಹಗರಣ ಮಾಡಿದವರ ಮೇಲೆ ಬಳಸಿ ಎಂದು ಹೇಳಿದರು.

ಪಿಎಸ್‌ಐ ಹಗರಣದಲ್ಲಿ ಕಿಂಗ್‌ಪಿನ್ ಜೊತೆಗೆ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದಾರೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಶಾಸಕಾಂಗ, ಕಾರ್ಯಾಂಗ ಎರಡೂ ಹಗರಣದಲ್ಲಿ ಸೇರಿವೆ. ಸರ್ಕಾರಿ ತನಿಖಾ ಸಂಸ್ಥೆಗಳು ಪ್ರಾಮಾಣಿಕವಾಗಿ ವಿಚಾರಣೆ ನಡೆಸಿದಾಗ ಸಾರ್ವಜನಿಕರಿಗೆ ನಂಬಿಕೆ ಬರುತ್ತದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ 20 ಕಡೆ ಒಬ್ಬರನ್ನೇ ಚುನಾವಣೆಗೆ ನಿಲ್ಲಿಸುವ ದಾರಿದ್ರ್ಯ ಬಂದಿದೆ: ಸುನಿಲ್ ಕುಮಾರ್

BASAVARAJ BOMMAI 2

ಸಂತೋಷ್ ಹೇಳಿಕೆ ಸಮರ್ಥನೆ: ಇದೇ ವೇಳೆ ಸಚಿವ ಬಿ.ಎಲ್.ಸಂತೋಷ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಎಚ್.ವಿಶ್ವನಾಥ್, ಈ ಹಿಂದೆ ಪ್ರಧಾನಿ ನರೇಂದ್ರಮೋದಿ ಅವರು ನಾಗ್ಪುರದಲ್ಲಿ ಸಿಬಿಐ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕುಟುಂಬ ರಾಜಕಾರಣ ಜನತಂತ್ರ ವ್ಯವಸ್ಥೆಯಲ್ಲಿ ಗೆದ್ದಿಲು ರೀತಿ ತಿನ್ನುತ್ತಿದೆ. ಇದಕ್ಕೊಂದು ವಿರಾಮ ಕೊಡಬೇಕು ಎಂದು ಹೇಳಿದ್ದರು. ಅದೇ ಅರ್ಥದಲ್ಲಿ ಬಿ.ಎಲ್.ಸಂತೋಷ್ ಹೊಸ ಮುಖಗಳಿಗೆ ಆದ್ಯತೆ ಕೊಡಬೇಕು ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿಲ್ಲ. ಆದರೆ, ಇದಕ್ಕೆ ಬೇರೆ ಅರ್ಥ ಕೊಡುವುದು ಸರಿಯಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ: ಬಿಎಸ್‍ವೈ

CT Ravi

ಸಿಟಿ ರವಿ ವಿರುದ್ಧ ಕಿಡಿ:  ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ ವಿಶ್ವನಾಥ್, ನಮ್ಮ ಪಕ್ಷದವರೇ ಆದ ಸಿ.ಟಿ.ರವಿ ಓಹೋಹೋ ಎಂದು ಬಾಯಿಗೆ ಬಂದಂತೆ ಮಾತನಾಡ್ತಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಮಾನಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಬೇಕು. ನೀನು ಕಳ್ಳ-ನೀನು ಕಳ್ಳ ಎಂದರೆ ಸರಿಹೋಗುವುದಿಲ್ಲ ಎಂದು ತಿಳಿವಳಿಕೆ ನೀಡಿದರು.

Leave a Reply

Your email address will not be published.

Back to top button