ಕಲಬುರಗಿ: ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಕಲಬುರಗಿ ಕ್ಷೇತ್ರದ ಬಿಜೆಪಿ ಟಿಕೆಟ್‍ಗಾಗಿ ಭಾರೀ ಪೈಪೋಟಿ ನಡೆದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದೆಯೇ ನಾಯಕರಿಬ್ಬರು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದ ಐವಾನ್ ಎ ಶಾಹಿ ಅತಿಥಿ ಗೃಹದಲ್ಲಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದ್ದರು. ಆಗ ಕಲಬುರಗಿ ಕ್ಷೇತ್ರದ ಟಿಕೆಟ್ ಅನ್ನು ಬಂಜಾರಾ ಸಮುದಾಯದ ಪರವಾಗಿ ಸುಭಾಷ್ ರಾಥೋಡ್ ಅವರಿಗೆ ನೀಡಬೇಕು ಎಂದು ಸುಭಾಷ್ ಬೆಂಬಲಿಗರು ಮನವಿ ಸಲ್ಲಿಸಿದರು.
Advertisement
Advertisement
ಸಭೆಯಲ್ಲಿ ಕುಳಿತ್ತಿದ್ದ ಟಿಕೆಟ್ ಆಕಾಂಕ್ಷಿ ಹಾಗೂ ಮುಖಂಡ ಬಾಬುರಾವ್ ಚವ್ಹಾಣ್, ವೈಯಕ್ತಿವಾಗಿ ಮನವಿ ಸಲ್ಲಿಸಿ, ಬಂಜಾರಾ ಸಮುದಾಯದಿಂದ ಟಿಕೆಟ್ ನೀಡಿ ಅಂತಾ ನೀವು ಕೇಳುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಜೊತೆಗೆ ಸಮೀಕ್ಷೆ ನಡೆಸಿ ಟಿಕೆಟ್ ನೀಡುವಂತೆ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.
Advertisement
ನಾಯಕರಿಬ್ಬರ ವಾಗ್ದಾಳಿಗೆ ಬೇಸತ್ತ ಬಿ.ಎಸ್.ಯಡಿಯೂರಪ್ಪ, ಸಮೀಕ್ಷೆ ನಡೆಸಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ರಾಜ್ಯಾಧ್ಯಕ್ಷರ ನಿರ್ಗಮನದ ನಂತರವೂ ಕೆಲ ಹೊತ್ತು ಸುಭಾಷ್ ರಾಥೋಡ್ ಹಾಗೂ ಬಾಬುರಾವ್ ಚವ್ಹಾಣ್ ನಡುವೆ ಮಾತಿನ ಚಕಮಕಿ ನಡೆಯಿತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv