Connect with us

ಬರೋಬ್ಬರಿ 300 ಜಾಹಿರಾತು, ಅಹಂ ಪ್ರೇಮಾಸ್ಮಿಯಲ್ಲಿ ನಟಿಸಿದ್ದ ನಟಿ ಇಂದು ನಿರುದ್ಯೋಗಿ

ಬರೋಬ್ಬರಿ 300 ಜಾಹಿರಾತು, ಅಹಂ ಪ್ರೇಮಾಸ್ಮಿಯಲ್ಲಿ ನಟಿಸಿದ್ದ ನಟಿ ಇಂದು ನಿರುದ್ಯೋಗಿ

ಮುಂಬೈ: ಸಿನಿಮಾ ರಂಗದಲ್ಲಿ ಉಳಿದುಕೊಳ್ಳವುದು ಸರಳವಲ್ಲ. ಕೆಲವೊಮ್ಮೆ ಅದ್ಧೂರಿಯಾಗಿ ಬರಮಾಡಿಕೊಳ್ಳಲುವ ಚಿತ್ರರಂಗ, ಮತ್ತೊಮ್ಮೆ ಅಷ್ಟೇ ಕಲಾವಿದರಿಂದ ದೂರವಾಗುತ್ತಾ ಹೋಗುತ್ತದೆ. ಸಿನಿಮಾದಲ್ಲಿ ನಟಿಯರು ಹಾಗೆ ತಮ್ಮ ಚಾರ್ಮ ಕಳೆದುಕೊಳ್ಳುತ್ತಲೇ ತೆರೆಯಿಂದ ಸದ್ದಿಲ್ಲದೇ ಮಾಯವಾಗುತ್ತಾರೆ.

ಆರತಿ ಚಾಬ್ರಿಯಾ ಬರೋಬ್ಬರಿ 300ಕ್ಕೂ ಅಧಿಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡ ನಟಿ. ಜಾಹಿರಾತಿನ ಜೊತೆ ಬಾಲಿವುಡ್, ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್‍ನಲ್ಲಿಯೂ ನಟಿಸಿದ ಕಲಾವಿದೆ. ಸುಮಾರು 35 ಸಿನಿಮಾಗಳಲ್ಲಿ ನಟಿಸಿದೆ ಆರತಿ ಇಂದು ಅವಕಾಶ ವಂಚಿತತಾಗಿದ್ದಾರೆ.

ತಮ್ಮ ಮೂರನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡ ಆರತಿ, ಮುಂದೆ ಮಾಡೆಲಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಮಾಡೆಲಿಂಗ್‍ನಲ್ಲಿ ಗುರುತಿಸಿಕೊಂಡ ಆರತಿ ಚಾಬ್ರಿಯಾಗೆ ಅಂದು ಎಲ್ಲಡೆಯಿಂದ ಅವಕಾಶಗಳ ಸುರಿಮಳೆ ಸಿಕ್ಕಿತ್ತು. 1999ರಲ್ಲಿ ಮಿಸ್ ಇಂಡಿಯಾ ವಲ್ರ್ಡ್ ವೈಡ್ 2000ರ ಪ್ರಶಸ್ತಿಯನ್ನು ಸಹ ಆರತಿ ತಮ್ಮ ಮಡಿಗೇರಿಸಿಕೊಂಡಿದ್ದರು. ಮ್ಯಾಗಿ, ಪೆಪ್ಸೊಡೆಂಟ್, ಕ್ಲೀನ್ ಆ್ಯಂಡ್ ಕ್ಲಿಯರ್, ಅಮೂಲ್ ಐಸ್‍ಕ್ರೀಮ್, ಕಲ್ಯಾಣ್ ಜ್ಯುವೆಲ್ಲರ್ಸ್ ಸೇರಿದಂತೆ ಹಲವು ಕಮರ್ಷಿಯಲ್ ಜಾಹಿರಾತುಗಳಲ್ಲಿ ಆರತಿ ನಟಿಸಿದ್ದಾರೆ. ಇದನ್ನೂ ಓದಿ: 2018ಕ್ಕೆ ಈ 10 ಬಾಲಿವುಡ್ ಸ್ಟಾರ್‍ಗಳ ಕೈಯಲ್ಲಿ ಯಾವ ಸಿನಿಮಾ ಕೂಡ ಇಲ್ಲ!

2001ರಲ್ಲಿ ಸಿನಿ ಕೆರಿಯರ್: 2001ರಲ್ಲಿ ತೆರೆಕಂಡ ಹಿಂದಿಯ ‘ಲಜ್ಜಾ’ ಸಿನಿಮಾದ ಮೂಲಕ ಆರತಿ ತಮ್ಮ ಸಿನಿ ಕೆರಿಯರ್ ಆರಂಭಿಸಿದರು. ಮುಂದೆ 2006ರಲ್ಲಿ ಸಲ್ಮಾನ್ ಖಾನ್ ನಟನೆ ‘ಪಾರ್ಟ್ ನರ್’ ಚಿತ್ರದಲ್ಲಿ ಸಹನಟಿಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ತುಮಸೆ ಅಚ್ಚಾ ಕೌನ್ ಹೈ, ರಾಜಾ ಬೈಯಾ, ಅನಾಮಿಕಾ, ಶೂಟ್‍ಔಟ್ ಆ್ಯಟ್ ವಡಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆರತಿ ನಟಿಸಿದ್ದಾರೆ.

ಕನ್ನಡದಲ್ಲೂ ನಟನೆ: ಆರತಿ ಚಾಬ್ರಿಯಾ ಕೇವಲ ಹಿಂದಿ ಸಿನಿಮಾಗಳಿಗೆ ಸೀಮಿತವಾಗಿರದೇ ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ನಟನೆಯ ‘ಅಹಂ ಪ್ರೇಮಾಸ್ಮಿ’ಯಲ್ಲಿ ಅಪ್ಸರಾ ಪಾತ್ರದಲ್ಲಿ ನಟಿಸಿ ವಿಮರ್ಶಕರಿಂದಲೂ ಸೈ ಅನ್ನಿಸಿಕೊಂಡಿದ್ರು. ಮುಂದೆ ಉಪೇಂದ್ರ ಅಭಿನಯದ `ರಜಿನಿ’ಯಲ್ಲೂ ಆರತಿಗೆ ನಟಿಸುವ ಅವಕಾಶ ಸಿಕ್ಕಿತ್ತು.

ಹೀಗೆ ಸಿಕ್ಕ ಒಳ್ಳೆಯ ಅವಕಾಶಗಳನ್ನು ಮಿಸ್ ಮಾಡದೇ ಎಲ್ಲವನ್ನು ಬಳಸಿಕೊಂಡ ಆರತಿ ಚಾಬ್ರಿಯಾ ಖಾಸಗಿ ಚಾನೆಲ್‍ವೊಂದರ ‘ಖತರೋಂಕಿ ಕಿಲಾಡಿ’ ರಿಯಾಲಿಟಿ ಶೋನಲ್ಲಿ ವಿಜೇತರಾಗಿದ್ದರು. ಇಷ್ಟೆಲ್ಲಾ ಸಿನಿಮಾ, ರಿಯಾಲಿಟಿ ಶೋ, ಜಾಹಿರಾತು, ಶಾರ್ಟ್ ಫಿಲ್ಮ್‍ಗಳಲ್ಲಿ ನಟಿಸಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡ ನಟಿಗೆ ಇಂದು ಅವಕಾಶಗಳು ಇಲ್ಲದಾಗಿದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Advertisement
Advertisement