ಮಂಗಳೂರು: ಮಸೂದ್ ಕೊಲೆಯಾಗಿ 10 ದಿನಗಳೇ ಕಳೆದರೂ ನಮ್ಮನ್ನು ಕೇಳಲು ಯಾರೂ ಬಂದಿಲ್ಲ ಎಂದು ಕಳಂಜದಲ್ಲಿ ಮಸೂದ್ ಸಂಬಂಧಿ ಮೊಹಮ್ಮದ್ ಹ್ಯಾರೀಸ್ ಆರೋಪ ಮಾಡಿದರು.
ಇಂದು ಕಳಂಜದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದ್ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಮ್ಮ ಕ್ಷೇತ್ರದ ಶಾಸಕರಾದ ಅಂಗಾರ ಅವರು ಬರಲಿಲ್ಲ. ಪ್ರವೀಣ್ ಮನೆಗೆ ಸಿಎಂ ಬೊಮ್ಮಾಯಿ ಬಂದ್ರು. ಯಾರೇ ಕೊಲೆಯಾದರು ನಾವು ಖಂಡಿಸುತ್ತೇವೆ ಎಂದು ಸಿಎಂ ಹೇಳಿದರು. ಆದರೆ ಪ್ರವೀಣ್ ಮನೆಗೆ ಬಂದ ಸಿಎಂ ಮಸೂದ್ ಮನೆಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರೋಪಿಗಳೊಂದಿಗೆ ಅಜಿತ್‍ಗೆ ಸಂಪರ್ಕವಿದೆ – ಆದಷ್ಟು ಬೇಗ ಇತರ ಆರೋಪಿಗಳನ್ನು ಬಂಧಿಸುತ್ತೇವೆ: ಶಶಿಕುಮಾರ್
Advertisement
ಮಸೂದ್ ಧಾರ್ಮಿಕ ರಾಜಕೀಯ ಸಂಘಟನೆಗಳ ಸದಸ್ಯ ಅಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿ ಎಂದು ಹ್ಯಾರಿಸ್ ಮನವಿ ಮಾಡಿಕೊಂಡರು.
Advertisement
Advertisement
ಜುಲೈ 26 ರಂದು ಪ್ರವಿಣ್ ಕುಮಾರ್ ನೆಟ್ಟಾರು ಹತ್ಯೆಯಾಗಿತ್ತು. ಈ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಪ್ರವೀಣ್ ಅಂತಿಮ ದರ್ಶನ ಪಡೆಯಲು ತೆರಳಿದ್ದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನೇ ಪಲ್ಟಿ ಮಾಡಲು ಯತ್ನಿಸಿದ್ದರು. ಇದಾದ ಬಳಿಕ ಸಿಎಂ ಅವರು ಪ್ರವೀಣ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದರು. ಇದನ್ನೂ ಓದಿ: ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ