ಬ್ರಸೆಲ್ಸ್: ಉಕ್ರೇನ್ ಮತ್ತು ರಷ್ಯಾ ನಡುವೆ ಕಳೆದ 2 ತಿಂಗಳಿಂದ ನಿರಂತವಾಗಿ ಯುದ್ಧ ನಡೆಯುತ್ತಿದೆ. ಅದಕ್ಕೆ ಉಕ್ರೇನ್ ಆರ್ಥಿಕ ನೆರವನ್ನು ಇತರೆ ರಾಷ್ಟ್ರಗಳಿಗೆ ಕೇಳುತ್ತಿದೆ. ಈ ಹಿನ್ನೆಲೆ ಯುರೋಪಿಯನ್ ಯೂನಿಯನ್(ಇಯು) ನಾಯಕರು ಉಕ್ರೇನ್‍ನಿಗೆ 9 ಬಿಲಿಯನ್(75 ಸಾವಿರ ಕೋಟಿ ರೂ.) ಯುರೋ ಕಳುಹಿಸಲು ಒಪ್ಪಿಗೆ ನೀಡಿದ್ದಾರೆ.
Advertisement
ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‍ಗೆ ಆರ್ಥಿಕವಾಗಿ ಬೆಂಬಲಿಸಲು ಇಯು ಮುಂದಾಗಿದೆ. ಈ ಹಿನ್ನೆಲೆ ಉಕ್ರೇನ್‍ಗೆ ಒಂಬತ್ತು ಬಿಲಿಯನ್ ಯುರೋಗಳನ್ನು ಕಳುಹಿಸಲು ಒಪ್ಪಿಕೊಳ್ಳಲಾಗಿದೆ ಎಂದು ಇಯು ಮುಖ್ಯಸ್ಥ ಚಾರ್ಲ್ಸ್ ಮೈಕೆಲ್ ಸೋಮವಾರ ಘೋಷಿಸಿದ್ದಾರೆ. ಇದನ್ನೂ ಓದಿ: ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳಿಂದ ವಿಗ್ರಹ ಧ್ವಂಸ
Advertisement
Advertisement
ಬ್ರಸೆಲ್ಸ್‌ನಲ್ಲಿ ಸಭೆ ನಡೆಸಿದ ಯುರೋಪಿಯನ್ ಒಕ್ಕೂಟದ ನಾಯಕರು ಉಕ್ರೇನ್‍ಗೆ ಆರ್ಥಿಕವಾಗಿ ಬೆಂಬಲಿಸಲು ಒಂಬತ್ತು ಬಿಲಿಯನ್ ಯುರೋಗಳನ್ನು ಕಳುಹಿಸಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಮೈಕೆಲ್ ಅವರು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸುದ್ದಿಯನ್ನು ತಿಳಿಸಿದ್ದಾರೆ.