ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ಪತ್ನಿ

Public TV
1 Min Read
Estranged wife murders husband in Tamil Nadu

ಚೆನ್ನೈ: ಚೆನ್ನೈನ ಗ್ರೌಂಡ್ ಏರ್‌ಪೋರ್ಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ (wife) ಕೊಲೆ ಮಾಡಿದ ಘಟನೆ ತಮಿಳುನಾಡಿನ ( Tamil Nadu) ಪುದುಕೊಟ್ಟೈನಲ್ಲಿ ನಡೆದಿದೆ.

ಆರೋಪಿ ಮಹಿಳೆಯನ್ನು ಭಾಗ್ಯಲಕ್ಷ್ಮಿ (39) ಎಂದು ಗುರುತಿಸಲಾಗಿದೆ. ವಿಲ್ಲುಪುರಂ ನಿವಾಸಿ ಜಯನಂದನ್ ಮೃತ ವ್ಯಕ್ತಿ. ಜಯನಂದನ್ ತನ್ನ ಸಹೋದರಿಯೊಂದಿಗೆ ನಂಗನಲ್ಲೂರಿನಲ್ಲಿ ವಾಸವಾಗಿದ್ದ. ಆದರೆ ಮಾ. 18ರಂದು ಆತ ತನ್ನ ಮನೆಗೆ ಹೋಗುವುದಾಗಿ ಸಹೋದರಿಗೆ ಹೇಳಿ ಮನೆಯಿಂದ ಹೋಗಿದ್ದಾನೆ.

crime

ಅದಾದ ಬಳಿಕ ಜಯನಂದನ್‍ನ ಫೋನ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಸಂಪರ್ಕಿಸಲು ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಯನಂದನ್ ಸಹೋದರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಆಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಯನಂದನ್ ಸೆಮ್ಮಲಂಪಟ್ಟಿಯಲ್ಲಿರುವ ಭಾಗ್ಯಲಕ್ಷ್ಮಿಗೆ ಕೊನೆಯ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ತನಿಖೆ ನಡೆಸಿದ್ದಾರೆ. ಈ ವೇಳೆ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವುದಾಗಿ ಭಾಗ್ಯಲಕ್ಷ್ಮಿ ಒಪ್ಪಿಕೊಂಡಿದ್ದಾಳೆ.

POLICE JEEP 1

ಘಟನೆಯೇನು?: ಜಯಂಧನ್ ಮತ್ತು ಭಾಗ್ಯಲಕ್ಷ್ಮಿ ಹಲವಾರು ವರ್ಷಗಳ ಹಿಂದೆ ತಾಂಬರಂನ ಹೋಟೆಲ್‍ನಲ್ಲಿ ಭೇಟಿಯಾಗಿದ್ದರು. ಅದಾದ ನಂತರ 2020ರಲ್ಲಿ ದೇವಸ್ಥಾನದಲ್ಲಿ ವಿವಾಹವಾದರು. ಆದರೆ ದಂಪತಿ 2021ರಲ್ಲಿ ಬೇರೆಯಾಗಿದ್ದರು. ಮಾ.19ರಂದು ಜಯಂಧನ್ ಭಾಗ್ಯಲಕ್ಷ್ಮಿ ಭೇಟಿ ಮಾಡಲು ಬಂದಿದ್ದ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

ARREST

ಜಯಂಧನನ್ನು ಭಾಗ್ಯಲಕ್ಷ್ಮಿ ಕೊಲೆಗೈದಿದ್ದಾಳೆ. ನಂತರ ಆತನ ದೇಹದ ಭಾಗಗಳನ್ನು ಕತ್ತರಿಸಿ ಸೂಟ್‍ಕೇಸ್ ಹಾಗೂ ಗೋಣಿಚೀಲದಲ್ಲಿ ಸಾಗಿಸಿದ್ದಾಳೆ. ಅದಾದ ಬಳಿಕ ಸ್ನೇಹಿತನ ಸಹಾಯ ಪಡೆದು ಕೋವಲಂ ಬಳಿಯ ನಗರದ ಹೊರವಲಯದಲ್ಲಿ ಜಯಂಧನನ್ನು ಹೂಳಿರುವುದಾಗಿ ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಸಿಸಿ ಕ್ಯಾಮೆರಾಗೆ ಬಟ್ಟೆ ಮುಚ್ಚಿ ಹುಂಡಿ ಕಳ್ಳತನ- ಅರ್ಚಕರಿಂದಲೇ ಕೃತ್ಯ ಆರೋಪ

Share This Article