ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾನೆ. ಅವನೊಬ್ಬ ಹುಚ್ಚ. ಆ ಹುಚ್ಚನಿಗೆ ಯಾವ ಆಸ್ಪತ್ರೆಗೆ ಹೋದರೂ ಚಿಕಿತ್ಸೆ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
Advertisement
ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸುತ್ತಾ ಹುಚ್ಚ, ಹುಚ್ಚ ಎಂದು ಕರೆದಿದ್ದಾರೆ. ಚಡ್ಡಿ ಹಾಕಿದ್ದವರೇ ಇಂದು ದೇಶವನ್ನು ಆಳುತ್ತಿದ್ದಾರೆ. ಚಡ್ಡಿಯೇ ಇಂದು ನಮಗೆ ಸಾಕಷ್ಟು ಕಲಿಸಿಕೊಟ್ಟಿದ್ದು, ಚಡ್ಡಿ ದೇಶವನ್ನು ಸುಸಂಸ್ಕೃತ ದೇಶವನ್ನಾಗಿಸಿದೆ. ಸಿದ್ದರಾಮಯ್ಯ ಹುಚ್ಚಾಟದ ಹೇಳಿಕೆಗಳಿಂದ ಪ್ರಚಾರವನ್ನು ಪಡೆಯುತ್ತಿದ್ದಾರೆ. ಅವರನ್ನು ನಿಮ್ಹಾನ್ಸ್‌ಗೆ ಸೇರಿಸಿದ್ರೂ ಅಲ್ಲಿಯೂ ಕೂಡ ಔಷಧಿ ಇಲ್ಲ. ದೇಶದ ಯಾವುದೇ ಆಸ್ಪತ್ರೆಯಲ್ಲೂ ಔಷಧವಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್
Advertisement
Advertisement
ಇಂತಹ ಹುಚ್ಚನನ್ನು ಕಟ್ಟಿಕೊಂಡು ಹೇಗಪ್ಪ ನಾವು ಸರ್ಕಾರ ಮಾಡೋದು ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ತನ್ನುನ್ನು ಮುಂದಿನ ಸಿಎಂ ಎಂದು ಕರೆಯಬೇಡಿ ಎಂದು ಮುಂದೆ ಹೇಳುತ್ತಾರೆ. ಆದರೆ ಹಿಂದೆ ಹೋಗಿ ನಾನೇ ಸಿಎಂ ಎಂದು ಹೇಳಿ ಎಂದು ಹುಚ್ಚ ಬೆಂಬಲಿಗರಿಗೆ ಸಿದ್ದರಾಮಯ್ಯ ಹೇಳಿ ಕೊಡುತ್ತಿದ್ದಾರೆ. ಚಡ್ಡಿ ವಿಚಾರಕ್ಕೆ ಬಂದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿ ಇನ್ನೂ 50 ವರ್ಷ ಅಧಿಕಾರದಲ್ಲಿರಲಿದೆ: ಜಮಾಲ್ ಸಿದ್ದಿಕಿ
Advertisement
ದೇಶದಲ್ಲಿ ಕಾಂಗ್ರೆಸ್ ಮೂಲೆ ಸೇರುತ್ತಿದೆ. ಸೋನಿಯಾ ಗಾಂಧಿ ಬುದ್ಧಿ ಹೇಳಿದರೂ ಕೇಳುತ್ತಿಲ್ಲ. ರಾಹುಲ್ ಗಾಂಧಿಗೆ ಬುದ್ಧಿಯೇ ಇಲ್ಲ. ಖರ್ಗೆ ದೆಹಲಿಗೆ ಹೋಗಿ ವಾಪಸ್ ಬಂದ್ರು. ದೇಶದ ಎಲ್ಲಾ ಕಡೆ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ನಿಮಗೆ ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬುದು ಗೊತ್ತಾಗುತ್ತಿಲ್ಲ. ನೀವು 20 ಕಡೆ ನಿಂತರೂ ಅಲ್ಲಿ ಚಡ್ಡಿ ನಿಮ್ಮನ್ನು ಸೋಲಿಸುತ್ತದೆ ಎಂದರು.
ಸಿದ್ದರಾಮಯ್ಯ ಅವರಿಗೆ ಗೌರವ ಕೊಡಲು ನನಗೆ ಮನಸ್ಸು ಬರುತ್ತಿಲ್ಲ. ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ, ನಾನಲ್ಲ, ರಸ್ತೆಯಲ್ಲಿ ಹೋಗುವ ನಾಯಿಯು ಸಹ ಬೆಲೆ ಕೊಡುವುದಿಲ್ಲ. ಪ್ರತಿಪಕ್ಷ ನಾಯಕ ಸ್ಥಾನದ ಗೌರವ ಉಳಿಸದ ವ್ಯಕ್ತಿ ಸಿದ್ದರಾಮಯ್ಯ. ಆರ್‌ಎಸ್‌ಎಸ್‌ನ ಚಡ್ಡಿಯ ಭಯ ಸಿದ್ದರಾಮಯ್ಯನಿಗೆ ಶುರುವಾಗಿದೆ. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಪಕ್ಷ. ಆದರೆ ಈಗ ಕಾಂಗ್ರೆಸ್‍ನವರೇ ಸಿದ್ದರಾಮಯ್ಯನಂತ ಗೂಂಡಾಗಳು ಪಕ್ಷದಲ್ಲಿ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಬಲಹೀನ ಸಿದ್ದರಾಮಯ್ಯ ಆರ್‌ಎಸ್‌ಎಸ್ ಬಲಶಾಲಿಗೆ ಏನೂ ಮಾಡಲಾಗದೆ ಈ ರೀತಿ ಮಾತನಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಉಳಿಸುತ್ತಿರುವುದು ಆರ್‌ಎಸ್‌ಎಸ್ ಸಂವಿಧಾನಕ್ಕೆ ವಿರುದ್ಧವಾದ ಒಂದೇ ಒಂದು ಕೆಲಸವನ್ನು ಆರ್‌ಎಸ್‌ಎಸ್ ಮಾಡಿಲ್ಲ ಎಂದು ಕಿಡಿಕಾರಿದರು.