ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮ ಫ್ಯಾಕ್ಟರಿಗೆ ಆರ್ಡರ್ ಕೊಟ್ಟು ಕೇಸರಿ ಶಾಲು ತರಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಹಿಜಬ್ ಹಾಗೂ ಕೇಸರಿ ಶಾಲು ಫೈಟ್ ಜೋರಾಗಿದ್ದು, ಈ ನಡುವೆ ಸೂರತ್ ನಿಂದ ಬಿಜೆಪಿಯವರು 50 ಲಕ್ಷ ಕೇಸರಿ ಶಾಲು ತರಿಸಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದರು. ಸದ್ಯ ಈ ಹೇಳಿಕೆ ಕುರಿತಂತೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಹೌದು, ಅಯೋಧ್ಯೆಯ ಶ್ರೀರಾಮ ಫ್ಯಾಕ್ಟರಿಗೆ ಆರ್ಡರ್ ಕೊಟ್ಟು ಕೇಸರಿ ಶಾಲು ತರಿಸಿದ್ದೇವೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ಶಾಲಾ, ಕಾಲೇಜುಗಳ ರಜೆ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ: ಬಿ.ಸಿ. ನಾಗೇಶ್
Advertisement
Advertisement
ಡಿಕೆಶಿಗೆ ಕೇಸರಿ ಶಾಲು ಎಲ್ಲಿಂದ ಬಂತು ಏನು ಕಥೆ ಗೊತ್ತಿಲ್ಲ. ಕನಕಪುರದಲ್ಲಿ ಡಿಕೆಶಿ ಬ್ರದರ್ಸ್ ಅವರ ಬಂಡೆ ಫ್ಯಾಕ್ಟರಿ ಇದೆ. ಬಂಡೆ ಕದ್ದು ಬೇರೆ ರಾಜ್ಯಕ್ಕೆ ಕಳಿಸುವ ಟ್ರಾನ್ಸ್ಪೋರ್ಟ್ ಇದೆ. ಆದರೆ ಅಯೋಧ್ಯೆಯ ಕೇಸರಿಯಿಂದ ದೇಶಭಕ್ತಿ ಜಾಗೃತಿ ಮೂಡಿಸುತ್ತಿದೆ. ಯುವಕರಲ್ಲಿ ದೇಶಭಕ್ತಿ ಬಗ್ಗೆ ಮೂಡುತ್ತಿರುವ ಜಾಗೃತಿಯನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಅಯೋಧ್ಯೆಯಿಂದ ಬಂದ ಕೇಸರಿ ಶಾಲು ವಿದ್ಯಾರ್ಥಿಗಳ ಹೃದಯಕ್ಕೆ ತಲುಪಿದೆ ಎಂದಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್