ಬೆಂಗಳೂರು: ಟಿಕೆಟ್ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಈಶ್ವರಪ್ಪ (Eshwarappa) ವೈಯಕ್ತಿಕವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ (Yediyurappa) ಬೇಸರ ಹೊರಹಾಕಿದರು.
ಈಶ್ವರಪ್ಪ ಅಸಮಾಧಾನ ಕುರಿತು ಮಾತನಾಡಿದ ಬಿಎಸ್‌ವೈ, ಈಶ್ವರಪ್ಪ ಬಳಿ ಕೇಂದ್ರದ ಹಿರಿಯ ನಾಯಕರು ಮಾತಾಡ್ತಾರೆ. ಟಿಕೆಟ್ ವಿಚಾರದಲ್ಲಿ ಕೇಂದ್ರ ನಾಯಕರು ತೀರ್ಮಾನ ಮಾಡಿರೋದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ – ಬಿಎಸ್‌ವೈ ವಿರುದ್ಧ ಗುಡುಗಿದ ಈಶ್ವರಪ್ಪ
- Advertisement
ಶೋಭಾ ಕರಂದ್ಲಾಜೆ ಹಾಗೂ ಬೊಮ್ಮಾಯಿಯವರಿಗೆ ಟಿಕೆಟ್ ವಿಚಾರವಾಗಿ ಮಾತನಾಡಿ, ಇವರಿಗೆ ಯಡಿಯೂರಪ್ಪ ಅಲ್ರಿ ಟಿಕೆಟ್ ಕೊಟ್ಟಿರೋದು. ಹೈಕಮಾಂಡ್ ನಾಯಕರು ಕೊಟ್ಟಿರೋದು. ಈಶ್ವರಪ್ಪ ವೈಯಕ್ತಿಕವಾಗಿ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ. ಟಿಕೆಟ್ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ತಿಳಿಸಿದರು.
- Advertisement
ಮೋದಿಯವರು ಕಲಬುರಗಿ ಕಾರ್ಯಕ್ರಮಕ್ಕೆ ಬನ್ನಿ ಎಂದಿದ್ದಾರೆ. ಪ್ರಧಾನಿಗಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಕಲಬುರಗಿಯಿಂದ ಹೈದರಾಬಾದ್ ಮೂಲಕ ವಾಪಾಸ್ ಆಗ್ತೀನಿ ಎಂದು ಹೇಳಿದರು. ಇದನ್ನೂ ಓದಿ: ಬಿಎಸ್‌ವೈ ವಿರುದ್ಧ ಈಶ್ವರಪ್ಪ ಗರಂ – ಶಿವಮೊಗ್ಗದಿಂದ ಕಾಂತೇಶ್ ಸ್ಪರ್ಧೆ?