ಬೀದರ್: ಮುಂದೊಂದು ದಿನ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಾಡಲಿದೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಬೀದರ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಸಂಪುಟದ ಹಿರಿಯ ಸದಸ್ಯರು, ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಹೇಳಿಕೆ ನೀಡಿರುವುದು ಖಂಡನೀಯ. ಅವರ ಮೇಲೆ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪಾಠ ಮುಗಿದಿಲ್ಲ, ರಿವಿಜನ್ ಆಗಿಲ್ಲ: ವಿದ್ಯಾರ್ಥಿನಿ
Advertisement
Advertisement
ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಪಕ್ಷ ಅಂದರೆ ಅದು ಬಿಜೆಪಿ. ಉದ್ಯೋಗ ಪತಿಗಳ ಪರವಾಗಿ ಎಲ್ಲಾ ನೀತಿಗಳನ್ನು ಮಾಡಿರುವ ಬಿಜೆಪಿ, ಭಾರತವನ್ನು ಬಡ ರಾಷ್ಟ್ರವನ್ನಾಗಿ ಮಾಡಿ ಮೆರೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
Advertisement
ತಮ್ಮ ಅಕ್ರಮ ಮುಚ್ಚಿಕೊಳ್ಳಲು ಆನ್‌ಲೈನ್‌ನಲ್ಲಿ ಸದಸ್ಯತ್ವ ಅಭಿಯಾನ ಎಂದು ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದೆ. ಬಿಜೆಪಿಯ ದಬ್ಬಾಳಿಕೆ ಹಾಗೂ ಸರ್ವಾಧಿಕಾರಿ ದೋರಣೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಬ್-ಕೇಸರಿ ಧರಿಸಬೇಡಿ: ರಮೇಶ್ ಜಾರಕಿಹೊಳಿ
Advertisement
ಬಾಬ್ರಿ ಮಸೀದಿಯ ಸುಪ್ರೀಂಕೋರ್ಟ್ ತಿರ್ಪುನ್ನು ದಿಕ್ಕರಿಸಿ ಅಪಹಾಸ್ಯ ಮಾಡಿ ವಿದ್ಯಾರ್ಥಿನಿಯರು ಟ್ವಿಟ್ ಮಾಡಿದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಪ್ರತಿಕ್ರಿಯೆ ನೀಡಿಲು ನಿರಾಕರಿಸಿದ್ದಾರೆ. ನಿಮ್ಮ ಪಬ್ಲಿಕ್ ಟಿವಿ ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಈಶ್ವರ ಖಂಡ್ರೆಗೆ ವಿದ್ಯಾರ್ಥಿನಿಯರು ಟ್ವಿಟ್ ಬಗ್ಗೆ ಕೇಳಿದಾಗ ಬೇಡ ಬೇಡಾ ಎಂದು ಕೈಸನ್ನೆ ಮಾಡಿದರು.
ಜೊತೆಗೆ ಯಾವುದು ಸಾಮಾಜದಲ್ಲಿ ಗೊಂದಲ ಉಂಟು ಮಾಡೋದು ಬೇಡ ಎಂದು ಹೇಳಿ ಮತ್ತೆ ಕೈ ಸನ್ನೆ ಮಾಡಿ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದ್ದರು. ಇನ್ನು ಪಕ್ಕದಲ್ಲೆ ಕುಳಿತಿದ್ದ ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್ ಕೂಡಾ ಬೇಡಾ ಬೇಡಾ ಎಂದರು.