ಮಡಿಕೇರಿ: ದೇವಾಲಯ ಜಾಗವನ್ನು ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಪುರಾತನ ಕಾಲದ ಈಶ್ವರ ಕೆತ್ತನೆಯ ಕಲ್ಲುಗಳು ಪತ್ತೆಯಾಗಿ ಗ್ರಾಮಸ್ಥರ ಅಚ್ಚರಿಗೆ ಕಾರಣವಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಸಮೀಪದ ಪೇರೂರಿನ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮದಲ್ಲಿನ ದೇವಾಲಯದ ಈಶ್ವರ ಇಗ್ಗುತಪ್ಪ ಸನ್ನಿಧಿಯ ಜೀರ್ಣೋದ್ಧಾರದ ಸಂದರ್ಭ ಪುರಾತನ ಈಶ್ವರನ ಕೆತ್ತನೆಯ ಕಲ್ಲುಗಳು ಪತ್ತೆಯಾಗಿದೆ. ಮಡಿಕೇರಿ ತಾಲೂಕಿನ ಬಲ್ಲಮಾವಟಿಯ(ಬಲ್ಲತ್‍ನಾಡಿನ) ಪುರಾತನ ಇತಿಹಾಸ ಹೊಂದಿರುವ ಪೇರೂರಿನ ಈಶ್ವರ ಇಗ್ಗುತಪ್ಪ ನೆಲೆಯಲ್ಲಿ ದೇವಾಲಯ ಜೀರ್ಣೋದ್ಧಾರ ಕಾರ್ಯವು ಬ್ರಹ್ಮಶ್ರೀನಿಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಂತೆ ಕಳೆದ ಮೂರು ತಿಂಗಳಿಂದ ನಡೆಯುತ್ತಿದೆ. ಇದನ್ನೂ ಓದಿ: ಹುಮ್ನಾಬಾದ್‍ನಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡಬೇಕಾದ್ರೆ ಎರಡು ಡೋಸ್ ಲಸಿಕೆ ಕಡ್ಡಾಯ
Advertisement
Advertisement
ಗರ್ಭಗುಡಿಯ ಜೀರ್ಣೋದ್ಧಾರದ ಸಂದರ್ಭ ಭೂಮಿಯೊಳಗೆ ಮೂರು ನಾಲ್ಕು ಶಿವನ ಕೆತ್ತನೆಯ ಪುರಾತನ ಕಲ್ಲುಗಳು ಪತ್ತೆಯಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ಸಹಕಾರ್ಯದರ್ಶಿ ಅಪ್ಪಚ್ಚಿರನಂದಾಮುದ್ದಪ್ಪ ಹೇಳುತ್ತಾರೆ. ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅಧಿಕಾರಿಗಳು ದೇವಾಲಯದಲ್ಲಿ ದೊರೆತ ಪುರಾತನಕಲ್ಲುಗಳನ್ನು ಪರಿಶೀಲಿದ್ದಾರೆ. ಇದನ್ನೂ ಓದಿ: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!
Advertisement
ದೇವಾಲಯದ ದೇವತಕ್ಕರು ಹಾಗೂ ಜೀರ್ಣೋದ್ಧಾರದ ಸಮಿತಿಯ ಅಧ್ಯಕ್ಷರಾದ ಬಿ.ತಮ್ಮಯ್ಯ ಅವರ ನೇತ್ರತ್ವದಲ್ಲಿ ನಡೆಯುವ ಸಮಿತಿ ಸಭೆಯ ಒಪ್ಪಿಗೆ ಪಡೆದು ದೇವಾಲಯದಲ್ಲಿ ದೊರೆತ ಪುರಾತನ ಕಲ್ಲುಗಳನ್ನು ಪುರಾತತ್ವ ಇಲಾಖೆಗೆ ನೀಡುವಂತೆ ತೀರ್ಮಾನಿಸಲಾಗುವುದೆಂದು ತಿಳಿಸಿದ್ದಾರೆ.