– ವಿಷಪ್ರಾಶನದಿಂದ ಐದು ಹುಲಿಗಳು ಸಾವು; ಹಸುಗಳ ಸರ್ವೆಗೆ ಆದೇಶ
ಬೀದರ್: ರಾಜ್ಯದಲ್ಲಿ ಮಾನವ ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆ ನಾಗರಹೊಳೆ ಸಫಾರಿಯನ್ನು ಬಂದ್ ಮಾಡಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.
ಬೀದರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ವರ್ಷಗಳ ದಾಖಲೆಯ ಪ್ರಕಾರ 45ರಿಂದ 60 ಜನರು ಮಾನವ ಹಾಗೂ ಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ. ಒಂದೇ ಒಂದು ಸಾವುಗಳಾಗಬಾರದು ಎಂಬುದು ನಮ್ಮ ಉದ್ದೇಶ. ಮನುಷ್ಯ ಜೀವ ಅತ್ಯಮೂಲ್ಯವಾದದ್ದು, ಹೀಗಾಗಿ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯವ್ರು ದೇಶದಲ್ಲಿ ಸುಳ್ಳು ಸೃಷ್ಟಿಸುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ, ಅದಕ್ಕೆ ಮೋದಿ ಪ್ರಿನ್ಸಿಪಾಲ್ – ರಾಮಲಿಂಗಾರೆಡ್ಡಿ
ರಾತ್ರಿ 6 ಗಂಟೆ ನಂತರ ಸಫಾರಿ ಮಾಡುತ್ತಿದ್ರು ಇಂದ್ರಿಂದ ವನ್ಯ ಜೀವಿಗಳಿಗೆ ತೊಂದರೆಯಾಗಿ, ಪ್ರಾಣಿಗಳು ಹೊರಗಡೆ ಬರುತ್ತಿದ್ದವು. ಹೀಗಾಗಿ ನಾನು ಕೊನೆಯ ಸಫಾರಿ ಟ್ರಿಪನ್ನು ಶಾಶ್ವತವಾಗಿ ನಿಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆಯು ಹಸುಗಳ ಸರ್ವೆಗೆ ಮುಂದಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ತಮಿಳನಾಡಿನಿಂದ 20 ಸಾವಿರ ಜಾನುವಾರುಗಳು ಬಂದು ನಮ್ಮ ಅರಣ್ಯದಲ್ಲಿ ಮೇಯುತ್ತಿವೆ. ಮೊದಲಿನಿಂದಲೂ ಮೇವು ಮತ್ತು ದೊಡ್ಡಿಗಳನ್ನು ನಿರ್ಮಾಣ ಮಾಡುತ್ತಿದ್ದು, ಯಾವಾಗ ವಿಷಪ್ರಾಶನದಿಂದ ಐದು ಹುಲಿಗಳ ಸಾವಾಯಿತು. ಆ ಬಳಿಕ ನಾನು ಒಂದು ಆದೇಶ ಮಾಡಿದ್ದೇನೆ. ಅರಣ್ಯ ಅಂಚಿನಲ್ಲಿರುವ ನಮ್ಮ ರೈತರಿಗೆ ಜಾನುವಾರುಗಳನ್ನು ಮೇಯಿಸಲು ಅನುಮತಿ ಇದ್ದು, ಬೇರೆ ರಾಜ್ಯಗಳ ಜಾನುವಾರುಗಳು ಮೇಯಿಸಲು ಅನುಮತಿ ಇಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ಇಲ್ಲಿ ಜಾನುವಾರುಗಳನ್ನು ಸರ್ವೆ ಮಾಡಿ ಅಂಕಿ-ಅಂಶ ಪಡೆದು ಎಲ್ಲರೂ ಸೇರಿ ಇದಕ್ಕೆ ಒಂದು ನಿರ್ಣಯವನ್ನು ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬೆಳೆಹಾನಿ ಪರಿಹಾರ ರೈತರ ಖಾತೆಗೆ ಜಮೆ
ಬೆಳೆಹಾನಿ ಪರಿಹಾರದ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಾಖಲೆಯ ಮಳೆಗೆ 1 ಲಕ್ಷ 68 ಸಾವಿರ ಎಕ್ರೆಯ ಬೆಳೆ ಹಾನಿಯಾಗಿದೆ. ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗಿಂತ ಜಾಸ್ತಿಯ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 143 ಕೋಟಿಯಷ್ಟು ಬೆಳೆ ಹಾನಿಯಾಗಿದೆ. ಈಗಾಗಲೇ 143 ಕೋಟಿ ರೂ. ಹಣ ಮಂಜೂರಾತಿಯಾಗಿದೆ. ಗುರುವಾರ 17 ಕೋಟಿ ರೂ. ಹಣ ಬಿಡುಗಡೆಯಾಗಿದೆ. 61 ಕೋಟಿಯಷ್ಟು ಹಣ ಮೂರು ದಿನಗಳಲ್ಲಿ ರೈತರ ಅಕೌಂಟ್‌ಗೆ ಜಮೆಯಾಗುತ್ತದೆ. ಬೆಳೆಹಾನಿ ಸೇರಿದಂತೆ ಇನ್ನಿತರ ಹಾನಿಗಳು ಸೇರಿ ಬಹುತೇಕ 300 ಕೋಟಿ ರೂ. ಹಣ ಆಗಲಿದೆ ಮಾಹಿತಿ ನೀಡಿದ್ದಾರೆ.

