ಬೀದರ್: ನಮ್ಮವರು ಯಾರೂ ಆಪರೇಷನ್ ಕಮಲಕ್ಕೆ ಬಲಿಯಾಗಲ್ಲ. ಪಾತಾಳಕ್ಕೆ ಹೋಗಿ ಯಾರಾದರೂ ಬೀಳ್ತಾರಾ ಎಂದು ಆಪರೇಷನ್ ಹಸ್ತದ ವಿಚಾರಕ್ಕೆ ಬೀದರ್ ನಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ವ್ಯಂಗ್ಯವಾಡಿದ್ದಾರೆ.
ಬಿಜೆಪಿ (BJP) ಈಗಾಗಾಲೇ ಮುಳುಗುವ ಹಡಗಾಗಿದ್ದು, ಮುಳುಗುವ ಹಡುಗಿನಲ್ಲಿ ಯಾರಾದರೂ ಕುಳಿತುಕೊಳ್ತಾರಾ, ನಾವು ಆಹ್ವಾನ ಮಾಡಿದ್ರೆ ಬಿಜೆಪಿಗೆ ಬಿಜೆಪಿ, ಜೆಡಿಎಸ್‍ಗೆ ಜೆಡಿಎಸ್ ಕಿತ್ಕೊಂಡು ಬರುತ್ತೆ. ಆದರೆ ನಾವು ಹಾಗೇ ಮಾಡಲ್ಲ ಎಂದರು. ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿವಿಎಸ್
Advertisement
Advertisement
ನಮ್ಮ ತತ್ವ ಸಿದ್ಧಾಂತಕ್ಕೆ ಯಾರು ಒಪ್ಪಿಗೆ ಕೊಡುತ್ತಾರೆ, ನಾಯಕತ್ವಕ್ಕೆ ಯಾರು ಒಪ್ಪಿಗೆ ಕೊಡುತ್ತರೋ ಅಂತವರನ್ನು ಪರಿಶೀಲನೆ ಮಾಡಿ ಸೇರಿಸುಕೊಳ್ಳುತ್ತೇವೆ ಎಂದ್ರು ಖಂಡ್ರೆ ಬಿಜೆಪಿಗೆ ಟಾಂಗ್ ನೀಡಿದರು. ಇನ್ನೂ ಆರ್‍ಡಿ ಪಾಟೀಲ್ ಎಸ್ಕೇಪ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖಂಡ್ರೆ ಸರ್ಕಾರ ಕಾನುನುಬದ್ಧವಾಗಿ ಕ್ರಮ ಕೈಗೊಳ್ಳಿ ಅಂತಾ ತನಿಖಾಧಿಕಾರಿಗಳಿಗೆ ಹೇಳುತ್ತೆನೆ ಎಂದು ಹೇಳಿದರು.
Advertisement
ಯಾರನ್ನು ಬಂಧಿಸಬಾರದು ಎಂಬುದು ತನಿಖಾಧಿಕಾರಿ ಜವಾಬ್ದಾರಿ. ಉದ್ದೇಶಪೂರ್ವಕವಾಗಿ ಏನಾದ್ರೂ ಆಗಿದೆ ಅಂದ್ರೆ, ಪರಿಶೀಲನೆ ಮಾಡುತ್ತೇವೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಜಾರಿಕೊಂಡರು. ಇದನ್ನೂ ಓದಿ: ನವೆಂಬರ್ ಒಳಗೆ ಜಾತಿ ಜನಗಣತಿ ಬಿಡುಗಡೆ ಮಾಡದಿದ್ರೆ ಸಿಎಂಗೆ ಸಾಧು ಸಂತರ ಶಾಪ: ಈಶ್ವರಪ್ಪ
Advertisement
ಇನ್ನೂ ಕಿಯೋನಿಕ್ಸ್ ಎಮ್‍ಡಿಗೆ ಕಡ್ಡಾಯ ರಜೆ ವಿಚಾರವಾಗಿ ಮಾತನಾಡಿದ ಖಂಡ್ರೆ, ಆಡಳಿತಾತ್ಮಕ ವಿಷಯ ಜನರಿಗೆ ಹೇಗೆ ತಲುಪಿಸಬೇಕೋ ಸುಧಾರಣೆ ಮಾಡುತ್ತೇವೆ. ಸತ್ಯಾಂಶಗಳನ್ನ ತನಿಖೆ ಮಾಡಿ ಸುಧಾರಣೆ ಮಾಡುವ ಕೆಲಸ ಮಾಡುತ್ತೇವೆ. ಹಿಂದಿನ ಸರ್ಕಾರ ಮಾಡಿದ ಪಾಪದ ಕೆಲಸಗಳನ್ನು ತೊಳಿಯಲಿಕ್ಕೆ ಸಮಯ ಹಿಡಿಯುತ್ತದೆ ಎಂದು ಬಿಜೆಪಿ ನಾಯಕರಿಗೆ ಈಶ್ವರ ಖಂಡ್ರೆ ಟಾಂಗ್ ನೀಡಿದರು.