ಕಲಬುರಗಿ: ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಲು ಯತ್ನಿಸಿ 2ನೇ ಮಹಡಿಯಿಂದ ಜಿಗಿದು ಬಿಜೆಪಿ ಕಾರ್ಯಕರ್ತನೊಬ್ಬ (BJP Worker) ಕೈಕಾಲು ಮುರಿದುಕೊಂಡ ಘಟನೆ ಕಲಬುರಗಿ (Kalaburagi) ನಗರದಲ್ಲಿ ನಡೆದಿದೆ.
ಅಫಜಲಪುರ (Afzalpur) ತಾಲೂಕಿನ ಮಾಶಾಳ ಗ್ರಾಮದ ಮಹಾಂತೇಶ್ ಎಸ್ಕೇಪ್ ಆಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತ. ಹೋಟೆಲ್‌ನಲ್ಲಿ ಊಟ ಮಾಡಿ ಕಿಚನ್‌ನಿಂದ ಎಸ್ಕೇಪ್ ಆಗಲು ಯತ್ನಿಸಿದ್ದು, 2ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾನೆ.
ವಿದ್ಯುತ್ ಬಿಲ್ ವಿಚಾರಕ್ಕೆ ಜೆಸ್ಕಾಂ ಸಿಬ್ಬಂದಿ ಜೊತೆ ಮಹಾಂತೇಶ್ ಗಲಾಟೆ ನಡೆಸಿದ್ದ. ಜೆಸ್ಕಾಂ ಎಇಇ ಚಿದಾನಂದ ಜೊತೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನೆಲೆ ಆತನ ವಿರುದ್ಧ ದೂರು ದಾಖಲಾಗಿತ್ತು. 1 ತಿಂಗಳ ವಿದ್ಯುತ್ ಬಿಲ್ 8 ಸಾವಿರ ರೂ. ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಾದ ಹಿನ್ನೆಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಬೆಂಗ್ಳೂರಿಗರು ಭಾಗಿಯಾಗದ್ದಕ್ಕೆ ಆಕ್ರೋಶ- ಕಾವೇರಿ ನೀರು ಸರಬರಾಜು ಮಾಡೋ ಪಂಪ್ ಹೌಸ್‍ಗೆ ಮುತ್ತಿಗೆ
ಬಳಿಕ ಮಹಾಂತೇಶ್‌ನನ್ನು ಅಫಜಲಪುರ ಪೊಲೀಸರು ಬಂಧಿಸಿದ್ದು, ಕಲಬುರಗಿಗೆ ಕರೆತಂದು ಊಟಕ್ಕೆ ಕೂತಾಗ ಹೋಟೆಲ್‌ನಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ಅವಾಂತರದಿಂದ ಮಹಾಂತೇಶ್ ಕೈ ಕಾಲು ಮುರಿದುಕೊಂಡಿದ್ದಾನೆ. ಇದನ್ನೂ ಓದಿ: ಮಂಡ್ಯ ಬಂದ್‌ಗೆ ಕರೆ – ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]