ತಿರುವನಂತಪುರಂ: ಕೇರಳದ ಎರ್ನಾಕುಲಂನ (Ernakulam, Kerala) ಕಲಮಶ್ಶೇರಿಯಲ್ಲಿ (Kalamassery) ಬಾಂಬ್ ಸ್ಫೋಟವೊಂದು ನಡೆದಿದ್ದು, ಓರ್ವ ದುರ್ಮರಣಕ್ಕೀಡಾಗಿದ್ದಾರೆ.
ಮೂರು ಪ್ರಬಲ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಇದನ್ನೂ ಓದಿ: ವೃದ್ಧ ತಾಯಿ ಮೇಲೆ ಮನಬಂದಂತೆ ಥಳಿಸಿದ ವಕೀಲ – ಪಾಪಿ ಮಗ ಅಂದರ್
Advertisement
#WATCH | Visuals from Ernakulam, Kerala where one person died, and several injured in an explosion at a Convention Centre in Kalamassery https://t.co/hir8k808v2 pic.twitter.com/305HuzA4gg
— ANI (@ANI) October 29, 2023
Advertisement
ಭಾನುವಾರದ ಪ್ರೇಯರ್ ಗಾಗಿ ಸುಮಾರು 2,500 ಮಂದಿ ಸೇರಿದ್ದರು. ಈ ವೇಳೆ ಪ್ರೇಯರ್ ಹಾಲ್ ನಲ್ಲಿ ಭಾರೀ ಸ್ಪೋಟಗೊಂಡಿದೆ. ಘಟನೆಯಿಂದ ಗಾಬರಿಗೊಂಡು ಜನ ದಿಕ್ಕಾಪಾಲಾಗಿದ್ದರು. ಪ್ರಾರ್ಥನಾ ಮಂದಿರವನ್ನೇ ಗುರಿಯಾಗಿಸಿಕೊಂಡು ಹಾಗೂ ಸ್ಫೋಟದ ಹಿಂದೆ ಭಯೋತ್ಪಾದಕ ಕೃತ್ಯ ಶಂಕೆ ಇದೆ.
Advertisement
ಈ ಸಂಬಂಧ ಕೇರಳ ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ಕಲಮಶ್ಯೆರಿಯಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸಮಾವೇಶದ ವೇಳೆ ಸಂಭವಿಸಿದ ಸ್ಫೋಟ ದುರದೃಷ್ಟಕರ. ಸ್ಫೋಟದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಎಲ್ಲ ಅಂಶಗಳನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.
Advertisement
Web Stories