-ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ
ಬೆಂಗಳೂರು: ಬೆಂಗಳೂರಿನ ಹೈಫೈ ಏರಿಯಾ ಕಮರ್ಷಿಯಲ್ ಸ್ಟ್ರೀಟ್ (Commercial Street) ಒಳಗಡೆಗೆ ಆಟೋ (Auto) ಮತ್ತು ಸರಕು ವಾಹನಗಳ (Cargo Vehicle) ಪ್ರವೇಶವನ್ನು ನಿಷೇಧ ಹೇರಲಾಗಿದೆ.
ಶಿವಾಜಿನಗರ ಸಂಚಾರಿ ಪೊಲೀಸರು (Shivajinagr Traffic Police) ಕಮರ್ಷಿಯಲ್ ಸ್ಟ್ರೀಟ್‌ಗೆ ಎಂಟ್ರಿ ಆಗುವ ಭಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಬ್ಯಾನರ್ ಹಾಕಿದ್ದಾರೆ. ಆಟೋ ಮತ್ತು ಸರಕು ವಾಹನಗಳಿಗೆ ಪ್ರವೇಶ ನಿಷೇಧ ಆಗಿದೆ. ಆಟೋ ಮತ್ತು ಸರಕು ವಾಹನಗಳ ಓಡಾಟದಿಂದ ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣ ಆಗಿ ಟ್ರಾಫಿಕ್ ಜಾಮ್ ಆಗುತ್ತದೆ. ಇದನ್ನೂ ಓದಿ: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
ವೀಕೆಂಡ್ ಅಲ್ಲಿ ದೇಶ, ವಿದೇಶಿಗರು ಓಡಾಟ ಮಾಡುತ್ತಾರೆ. ಆದರೆ ಆಟೋ ಮತ್ತು ಸರಕು ವಾಹನಗಳ ಟ್ರಾಫಿಕ್ ಜಾಮ್ ಮತ್ತು ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಿಷೇಧದ ಮಧ್ಯೆ ಕೂಡ ಆಟೋ ಮತ್ತು ಸರಕು ವಾಹನಗಳು ಹೋದರೆ ನೋ ಎಂಟ್ರಿ ಕೇಸ್ ಹಾಕಿ 500 ರೂ. ದಂಡ ಹಾಕಲಿದ್ದಾರೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಸೇನೆಯ ಗುಂಡಿಗೆ ಉಗ್ರ ಬಲಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ