ನವದೆಹಲಿ: ಭಾರತದ ಮಹಿಳಾ ಯುವ ಉದ್ಯಮಿ ಹಾಗೂ ಮಹಿಳಾ ಕೇಂದ್ರಿತ ಸಾಮಾಜಿಕ ಉದ್ಯಮದ ಸಂಸ್ಥಾಪಕಿ ಪಂಖೂರಿ ಶ್ರೀವಾಸ್ತವ ಅವರು ಹೃದಯ ಸ್ತಂಭನದಿಂದ (ಕಾರ್ಡಿಯಾಕ್ ಅರೆಸ್ಟ್) ಮೃತಪಟ್ಟಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ.
32 ವರ್ಷ ವಯಸ್ಸಿನ ಪಂಖೂರಿ ಅವರು ಡಿ.24ರಂದು ಹೃದಯ ಸ್ತಂಭನದಿಂದ ನಿಧನರಾದರು. ಸಿಇಒ ಪಂಖೂರಿ ಇನ್ನಿಲ್ಲ ಎನ್ನುವ ದುಃಖ ನಮ್ಮನ್ನು ಆವರಿಸಿದೆ ಎಂದು ಪಂಖೂರಿ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿ ಟ್ವೀಟ್ ಮಾಡಲಾಗಿದೆ.
Advertisement
Advertisement
ಭಾರತದ ಮಹಿಳೆಯರು ಲೈವ್ ಸ್ಟ್ರೀಮಿಂಗ್, ಚಾಟ್ ಮತ್ತು ಮೈಕ್ರೋ-ಕೋರ್ಸ್‌ಗಳ ಮೂಲಕ ಆನ್‌ಲೈನ್ ಶಾಪಿಂಗ್ ಮಾಡಲು ಪಂಖೂರಿ ಅವರ ಸಿಕ್ವೊಯಾ ಕ್ಯಾಪಿಟಲ್-ಬೆಂಬಲಿತ ಸಾಮಾಜಿಕ ಸಮುದಾಯವು ವೇದಿಕೆಯಾಗಿದೆ.
Advertisement
ಪಂಖೂರಿ ಅವರು 2016ರಲ್ಲಿ ಆನ್‌ಲೈನ್ ಜಾಹೀರಾತು ಕಂಪನಿ ಕ್ವಿಕರ್ ಅನ್ನು ಸ್ವಾಧೀನಪಡಿಸಿಕೊಂಡು ರೀಟೈಲ್ ಸ್ಟಾರ್ಟ್-ಅಪ್ ಗ್ರಾಬ್ ಹೌಸ್ ಸ್ಥಾಪಿಸಿದ್ದರು.
Advertisement
With profound grief and sorrow, we regret to inform the sad demise of our beloved CEO, Pankhuri Shrivastava. We lost her on 24th December 2021 due to a sudden cardiac arrest. May her soul obtain Sadgati. Om Shanti.@pankhuri16
— Pankhuri (@askpankhuri) December 27, 2021
ಪಂಖೂರಿ ಅವರು, ಝಾನ್ಸಿ ಮೂಲದವರು. ರಾಜೀವ್ ಗಾಂಧಿ ತಾಂತ್ರಿಕ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು.