ಉಡುಪಿ: ಬಿಸಿಲಿನಿಂದಾಗಿ ಉರಿಯುತ್ತಿದ್ದ ಕರಾವಳಿಗೆ ಮುಂಗಾರು ಪ್ರವೇಶವಾಗಿದೆ. ಇಂದು ಮುಂಜಾನೆಯಿಂದ ತುಂತುರು ಮಳೆ ಆರಂಭವಾಗಿದ್ದು, ಇದೀಗ ಬಿರುಸಿನ ಮಳೆ ಸುರಿಯುತ್ತಿದೆ.
Advertisement
ಜಿಲ್ಲೆಯಾದ್ಯಂತ ಕಾರ್ಮೋಡ ಮುಸುಕಿದ ವಾತಾವರಣ ಇದ್ದು ಇಂದು ದಿನಪೂರ್ತಿ ಮಳೆ ಸುರಿಯುವ ಸಾಧ್ಯತೆಯಿದೆ. ಕಳೆದ ಒಂದು ತಿಂಗಳಿಂದ ಮೋಡ ಕಣ್ಣು ಮುಚ್ಚಾಲೆ ಆಡುತ್ತಿದ್ದು, ಅಂತೂ ಇಂತೂ ಇಂದು ಮಳೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳದ ಕೆಲವು ಭಾಗಗಳಲ್ಲಿ ವಾರದ ಹಿಂದೆ ಕೊಂಚ ಮಳೆಯಾಗಿತ್ತು.
Advertisement
Advertisement
ಇಂದು ಮುಂಗಾರು ಪ್ರವೇಶದ ಭಾಸವಾಗುವಂತೆ ಬಿರುಸಿನ ಮಳೆಯಾಗುತ್ತಿದೆ. ವಾತಾವರಣ ಸಂಪೂರ್ಣ ತಂಪಾಗಿದ್ದು, ಇಂದು ಮಳೆ ದಿನಪೂರ್ತಿ ಸುರಿಯುವ ಸಾಧ್ಯತೆಯಿದೆ. ಬ್ರಹ್ಮಾವರ- ಪಡುಬಿದ್ರೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಯ್ತು. ಇದೇ ರೀತಿ ಮಳೆ ಮುಂದುವರೆದರೆ ಉಳುಮೆ ಕಾರ್ಯ ಆರಂಭವಾಗುವ ಸಾಧ್ಯತೆಯಿದೆ.
Advertisement