ನವದೆಹಲಿ: ಮಾರ್ಚ್ 8 ರಿಂದ ಮಣಿಪುರದ (Manipur) ಎಲ್ಲಾ ರಸ್ತೆಗಳಲ್ಲಿ ಜನರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಅದಕ್ಕೆ ಬೇಕಾದ ಸೂಕ್ತ ವ್ಯವಸ್ಥೆ ಮಾಡುವಂತೆ ಉನ್ನತ ಮಟ್ಟದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ (Amit Shah) ಸೂಚನೆ ನೀಡಿದ್ದಾರೆ.
ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಂಘರ್ಷ ಪೀಡಿತ ರಾಜ್ಯದ ಭದ್ರತಾ ಪರಿಸ್ಥಿತಿಯ ಕುರಿತು ಅಮಿತ್ ಶಾ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳ ಎಫೆಕ್ಟ್ – 45 ದಿನಗಳಲ್ಲಿ 3 ಕೋಟಿ ಭಕ್ತರಿಂದ ಕಾಶಿ ವಿಶ್ವನಾಥನ ದರ್ಶನ
2023ರ ಮೇ ತಿಂಗಳಿಂದ ಜನಾಂಗೀಯ ಹಿಂಸಾಚಾರದಿಂದ ಬಳಲುತ್ತಿರುವ ಈಶಾನ್ಯ ರಾಜ್ಯದಲ್ಲಿ ಜನಜೀವನವನ್ನು ಸಹಜ ಸ್ಥಿತಿಗೆ ತರುವ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರ ನಡೆದ ಮೊದಲ ಪರಿಶೀಲನಾ ಸಭೆ ಇದಾಗಿದೆ. ಮಣಿಪುರ ಸುಮಾರು ಎರಡು ವರ್ಷಗಳಿಂದ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದು, ಘರ್ಷಣೆಗಳಲ್ಲಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಜನವರಿಯಲ್ಲಿ ಕಾಂಗ್ಪೋಕ್ಪಿ ಜಿಲ್ಲೆಯ ಮೂಲಕ ಹಾದುಹೋಗುವ NH-2 (ಇಂಫಾಲ್-ದಿಮಾಪುರ್) ಉದ್ದಕ್ಕೂ ಕುಕಿ ಗುಂಪಿನಿಂದ ಆರ್ಥಿಕ ದಿಗ್ಬಂಧನ ವಿಧಿಸಿತ್ತು. ನಂತರ ದಿಗ್ಬಂಧನವನ್ನು ತೆಗೆದುಹಾಕಲಾಯಿತು. ಇದನ್ನೂ ಓದಿ: ಪ್ರಪಂಚದಾದ್ಯಂತ ಜನ ಭಾರತಕ್ಕೆ ಬರಲು ಇಚ್ಛಿಸುತ್ತಾರೆ, ತಿಳಿದುಕೊಳ್ಳಲು ಬಯಸುತ್ತಾರೆ – ಮೋದಿ
ಮಣಿಪುರವನ್ನು ಮಾದಕ ವಸ್ತುವಿನಿಂದ ಮುಕ್ತಗೊಳಿಸಲು, ಮಾದಕ ವಸ್ತು ವ್ಯಾಪಾರದಲ್ಲಿ ತೊಡಗಿರುವ ಜಾಲವನ್ನು ಸಂಪೂರ್ಣ ಕಿತ್ತುಹಾಕಬೇಕು ಎಂದು ಗೃಹ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ. ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ, ಮಣಿಪುರ ಸರ್ಕಾರದ ಉನ್ನತ ಅಧಿಕಾರಿಗಳು, ಸೇನೆ ಮತ್ತು ಅರೆಸೈನಿಕ ಪಡೆಗಳು ಸಭೆಯಲ್ಲಿ ಭಾಗವಹಿಸಿದ್ದರು.