ತಣ್ಣಗಿನ ವಾತಾವರಣಕ್ಕೆ ಬೆಚ್ಚಗಿರಲು ಏನಾದರೂ ಹೊಸದಾಗಿ ಬಿಸಿಬಿಸಿಯಾಗಿ ಮಾಡಿ ಸವಿಯಬೇಕು ಎಂದೆನಿಸಿದರೆ ಒಮ್ಮೆ ಚಿಕನ್ ಓಟ್ಸ್ ಸೂಪ್ (Chicken Oats Soup) ಮಾಡಿ ಸವಿಯಿರಿ. ದೇಹದ ತೂಕ ಕಳೆದುಕೊಳ್ಳಬೇಕೆಂದಿದ್ದರೆ ಕೂಡಾ ಈ ರೆಸಿಪಿ ನಿಮಗೆ ತುಂಬಾ ಸಹಾಯ ಮಾಡಬಹುದು. ನೀವು ಕೂಡಾ ಚಿಕನ್ ಓಟ್ಸ್ ಸೂಪ್ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಓಟ್ಸ್ – 1 ಕಪ್
ಎಣ್ಣೆ – 1 ಟೀಸ್ಪೂನ್
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾರೆಟ್ – 3
ಹೆಚ್ಚಿದ ಬೆಳ್ಳುಳ್ಳಿ – 2
ಚಿಕನ್ ಬ್ರೆಸ್ಟ್ – 2
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಚಿಕನ್ ಸ್ಟಾಕ್ – 7 ಕಪ್
ಕೊತ್ತಂಬರಿ ಸೊಪ್ಪು – ಕಾಲು ಕಪ್
ಕರಿಬೇವಿ ಎಲೆ – 2
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಹಬೆಯಲ್ಲಿ ಬೇಯಿಸಿ ಕಬಾಬ್ ಮಾಡಿ ನೋಡಿ – ಸಖತ್ ಟೇಸ್ಟಿ ಆಗಿರುತ್ತೆ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಕ್ಯಾರೆಟ್ ಹಾಕಿ 3-4 ನಿಮಿಷ ಫ್ರೈ ಮಾಡಿ.
* ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣಬಂದ ಬಳಿಕ ಬೆಳ್ಳುಳ್ಳಿ ಸೇರಿಸಿ 1 ನಿಮಿಷ ಹುರಿಯಿರಿ.
* ಈಗ ಚಿಕನ್ ಬ್ರೆಸ್ಟ್ ಹಾಗೂ ಕರಿಮೆಣಸಿನ ಪುಡಿ ಹಾಕಿ 5 ನಿಮಿಷ ಬೇಯಿಸಿ.
* ಈಗ ಚಿಕನ್ ಸ್ಟಾಕ್, ಕರಿಬೇವಿನ ಎಲೆ, ಉಪ್ಪು ಹಾಗೂ ಓಟ್ಸ್ ಸೇರಿಸಿ, ಕಡಿಮೆ ಉರಿಯಲ್ಲಿ ಸುಮಾರು 20-25 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
* ಬಳಿಕ ಕರಿಬೇವಿನ ಎಲೆಗಳನ್ನು ತೆಗೆದುಹಾಕಿ, ಚಿಕನ್ ಬ್ರೆಸ್ಟ್ ಅನ್ನು ಸೂಪ್ನಿಂದ ನಿಧಾನಕ್ಕೆ ತೆಗೆದು, ಫೋರ್ಕ್ ಸಹಾಯದಿಂದ ಚೂರುಗಳನ್ನಾಗಿ ಮಾಡಿ.
* ಚಿಕನ್ ಚೂರುಮಾಡಿದ ಬಳಿಕ ವಾಪಾಸ್ ಸೂಪ್ಗೆ ಸೇರಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.
* ಇದೀಗ ಚಿಕನ್ ಓಟ್ಸ್ ಸೂಪ್ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಬಹುದಾದ ಚಿಕನ್ ನೂಡಲ್ ಸೂಪ್ ರೆಸಿಪಿ