– ಕೊನೆಯ ಪಂದ್ಯದಲ್ಲಿ ಭಾರತಕ್ಕೆ 142 ರನ್‌ಗಳ ಭರ್ಜರಿ ಗೆಲುವು
ಅಹಮದಾಬಾದ್: ಸಂಘಟಿತ ಬೌಲಿಂಗ್, ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 142 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲೇ 3-0ನಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 356 ರನ್ ಪೇರಿಸಿತ್ತು. 357 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಟೀಂ ಇಂಡಿಯಾ ಬೌಲರ್‌ಗಳ ಆರ್ಭಟಕ್ಕೆ ನಲುಗಿತು. 34.2 ಓವರ್‌ಗಳಲ್ಲೇ 214 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಫೆ.8 ರಂದು ಭಾರತ- ಶ್ರೀಲಂಕಾ ಕ್ರಿಕೆಟ್ ಮ್ಯಾಚ್
Advertisement
Advertisement
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 356 ರನ್ ಪೇರಿಸಿತ್ತು. 357 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಟೀಂ ಇಂಡಿಯಾ ಬೌಲರ್‌ಗಳ ಆರ್ಭಟಕ್ಕೆ ನಲುಗಿತು. 34.2 ಓವರ್‌ಗಳಲ್ಲೇ 214 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು.
Advertisement
Advertisement
ಬೃಹತ್ ರನ್ ಟಾರ್ಗೆಟ್ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಇದರ ಹೊರತಾಗಿಯೂ ಇಂಗ್ಲೆಂಡ್ ಒಂದೆಡೆ ರನ್ ಗಳಿಸುತ್ತಿದ್ದರೆ, ಮತ್ತೊಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲಿ ಬಟ್ಲರ್, ಲಿವಿಂಗ್‌ಸ್ಟೋನ್, ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರ ಬ್ಯಾಟಿಂಗ್ ವೈಫಲ್ಯ ಇಂಗ್ಲೆಂಡ್‌ಗೆ ದೊಡ್ಡ ಪೆಟ್ಟು ನೀಡಿತು. ಪರಿಣಾಮ 214 ರನ್‌ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್ ಪರ ಟಾಮ್ ಬ್ಯಾನ್‌ಟನ್, ಗಸ್ ಅಟ್ಕಿನ್‌ಸನ್ ತಲಾ 38 ರನ್ ಗಳಿಸಿದ್ರೆ, ಬೆನ್ ಡಕೆಟ್ 34 ರನ್, ಜೋ ರೂಟ್ 24 ರನ್, ಫಿಲ್ ಸಾಲ್ಟ್ 23 ರನ್, ಬ್ರೂಕ್ 19 ರನ್ ಗಳಿಸಿದ್ರೆ ಉಳಿದವರು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: ಆಸೀಸ್‌ಗೆ ಬಹುದೊಡ್ಡ ಆಘಾತ – ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ ಸ್ಟಾರ್ಕ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಭರ್ಜರಿ ಮೊತ್ತವನ್ನೇ ಪೇರಿಸಿತು. ಉಪನಾಯಕ ಶುಭಮನ್ ಗಿಲ್ ಅಮೋಘ ಶತಕ ಸಿಡಿಸುವ ಮೂಲಕ ತಂಡಕ್ಕೆ ಅಡಿಪಾಯ ಹಾಕಿದರು. ಇನ್ನೂ ಆರಂಭಿಕ ರೋಹಿತ್ ಒಂದೇ ರನ್ನಿಗೆ ಔಟಾಗುತ್ತಿದ್ದಂತೆ ಅಖಾಡಕ್ಕಿಳಿದ ಕೊಹ್ಲಿ ಬಹುದಿನಗಳ ಬಳಿಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಇದರೊಂದಿಗೆ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಕಾರಣವಾಯಿತು.
ಟೀಂ ಇಂಡಿಯಾ ಪರ ಶುಭಮನ್ ಗಿಲ್ 112 ರನ್ (102 ಎಸೆತ, 14 ಬೌಂಡರಿ, 3 ಸಿಕ್ಸರ್), ಶ್ರೇಯಸ್ ಅಯ್ಯರ್ 78 ರನ್ (64 ಎಸೆತ, 8 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ 52 ರನ್ (55 ಎಸೆತ, 7 ಬೌಂಡರಿ, 1 ಸಿಕ್ಸರ್), ಕೆ.ಎಲ್ ರಾಹುಲ್ 40 ರನ್ (29 ಎಸೆತ, 3 ಬೌಂಡರಿ, 1 ಸಿಕ್ಸರ್), ಹಾರ್ದಿಕ್ ಪಾಂಡ್ಯ 17 ರನ್, ಅಕ್ಷರ್ ಪಟೇಲ್ 13 ರನ್, ವಾಷಿಂಗ್ಟನ್ ಸುಂದರ್ 14 ರನ್, ಹರ್ಷಿತ್ ರಾಣಾ 13 ರನ್, ಅರ್ಷ್‌ದೀಪ್ ಸಿಂಗ್ 2 ರನ್ ಹಾಗೂ ರೋಹಿತ್ ಶರ್ಮಾ 1 ರನ್ ಗಳಿಸಿದ್ರು,
ಇಂಗ್ಲೆಂಡ್ ಪರ ಆದಿಲ್ ರಶೀದ್ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು. ಮಾರ್ಕ್ ವುಡ್ 2 ವಿಕೆಟ್ ಪಡೆದರು. ಉಳಿದಂತೆ ಶಕೀಬ್ ಮಸೂದ್, ಜೋ ರೂಟ್, ಗಸ್ ಅಟ್ಕಿನ್‌ಸನ್ ತಲಾ ಒಂದು ವಿಕೆಟ್ ಪಡೆದರು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಫಿಫ್ಟಿ – ಕೊಹ್ಲಿ ಬ್ಯಾಟಿಂಗ್ ಮೋಡಿಗೆ ಸಚಿನ್, ಸಂಗಕ್ಕಾರ ದಾಖಲೆ ಉಡೀಸ್