ಹಾವೇರಿ: ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಇಂದು ಪಾಕಿಸ್ತಾನದಿಂದ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಎಂಜಿನಿಯರಿಂಗ್ ಕಾಲೇಜು ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಸಿಹಿ ಹಂಚಿ ಸಂಭ್ರಮ ಆಚರಿಸಿದ್ದಾರೆ.
ಜಿಲ್ಲೆಯ ನೇತಾಜಿ ನಗರದಲ್ಲಿರುವ ವಸತಿ ನಿಲಯದ ಮುಂಭಾಗದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಮತ್ತು ಭಾರತ ಮಾತೆಗೆ ಜೈಕಾರ ಹಾಕಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಮುಖಂಡ ಬಸವರಾಜ ಟೀಕಿಹಳ್ಳಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸಂಭ್ರಮ ಆಚರಿಸಿದರು.
Advertisement
Advertisement
ಇಂದು ತುಂಬಾ ಸಂಭ್ರಮದ ದಿನವಾಗಿದೆ. ಭಾರತ ಪೈಲಟ್ ಅಭಿನಂದನ್ ವರ್ತಮಾನ್ ಅವರು ಪಾಕಿಸ್ತಾನಕ್ಕೆ ಹೋಗಿ ಭಾರತದ ಜೈಕಾರ ಹಾಕಿದ್ದಾರೆ. ಜೊತೆಗೆ ಅವರಲ್ಲಿದ್ದ ಎಫ್ 19 ವಿಮಾನವನ್ನು ಹೊಡೆದು ಉರುಳಿಸಿದ್ದಾರೆ. ಆದರೆ ಅವರು ಪಾಕಿಸ್ತಾನದವರ ಕೈಯಲ್ಲಿ ಸಿಕ್ಕಿದ್ದು, ಅವರನ್ನು ಇಂದು ನಮ್ಮ ಕೇಂದ್ರ ಸರ್ಕಾರ ಹೊರ ಕರೆದುಕೊಂಡು ಬರುತ್ತಿದೆ. ನಿಜಕ್ಕೂ ಇದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದು ವಿದ್ಯಾರ್ಥಿ ಮುಖಂಡ ಬಸವರಾಜ್ ಟೀಕಿಹಳ್ಳಿ ಹೇಳಿದ್ದಾರೆ.
Advertisement
https://www.youtube.com/watch?v=MiFS_D76l_A
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv