ನವದೆಹಲಿ: ಅಗ್ಗದ ಕಾರು ಎಂದೇ ಹೆಸರುಗಳಿಸಿದ್ದ ನ್ಯಾನೋ ಕಾರು ಸದ್ಯ ಮಾರುಕಟ್ಟೆಯಿಂದ ಮರೆಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದ್ದು, ನ್ಯಾನೋ ಮಾರಾಟದಲ್ಲಿ ದೀರ್ಘ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಉತ್ಪಾದನೆಯನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಟಾಟಾ ನ್ಯಾನೋ ಕಾರಿನ ಸ್ಥಗಿತ ಕುರಿತು ಇದುವರೆಗೂ ಯಾವುದೇ ಹೇಳಿಕೆಗಳನ್ನು ಟಾಟಾ ಕಂಪನಿ ನೀಡಿಲ್ಲ. ಆದರೆ ನ್ಯಾನೋ ಉತ್ಪಾದನೆ ಮಾಡುವ ಎಲ್ಲಾ ಘಟಕಗಳನ್ನು ಒಂದೊಂದಾಗಿ ನಿಲ್ಲಿಸುತ್ತಿರುವುದು ನ್ಯಾನೋ ಉತ್ಪಾದನೆಯ ಸ್ಥಗಿತ ಕುರಿತು ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
Advertisement
Advertisement
ಜೂನ್ ತಿಂಗಳಿನಲ್ಲಿ ಕೇವಲ 1 ನ್ಯಾನೋ ಕಾರು ಉತ್ಪಾದನೆಯಾಗಿದೆ. ಅಲ್ಲದೇ ಕಳೆದ ವರ್ಷ 2017ಕ್ಕೆ ಹೊಲಿಸಿದರೆ ಒಟ್ಟು 275 ಕಾರುಗಳನ್ನು ರಫ್ತಾಗಿದ್ದರೆ, ಈ ವರ್ಷ ಜೂನ್ ತಿಂಗಳಲ್ಲಿ ಕೇವಲ 25 ಕಾರುಗಳನ್ನು ರಫ್ತುಮಾಡಿದೆ. ಅಲ್ಲದೇ 2017ರಲ್ಲಿ ಒಟ್ಟು 167 ಕಾರುಗಳನ್ನು ಮಾರಾಟಗೊಂಡಿದ್ದವು. ಆದರೆ ಇಂದು 2018ರ ಜೂನ್ ತಿಂಗಳಲ್ಲಿ ನ್ಯಾನೋದ ಕೇವಲ ಮೂರು ಕಾರುಗಳು ಮಾರಾಟಗೊಂಡಿವೆ.
Advertisement
ಈ ಕುರಿತು ಪ್ರತಿಕ್ರಿಯಿಸಿ ಟಾಟಾ ಮೋಟಾರ್ಸ್ ಕಂಪೆನಿಯ ಅಧಿಕಾರಿಗಳು, ಸದ್ಯ ಮಾರುಕಟ್ಟೆಯಲ್ಲಿರುವ ಪರಿಸ್ಥಿತಿಯಿಂದಾಗಿ ನ್ಯಾನೋ ನಿರ್ಮಾಣವನ್ನು 2019ಕ್ಕೆ ಮುಂದುವರಿಸಲು ಸಾಧ್ಯವಿಲ್ಲ. ಅಲ್ಲದೇ ನ್ಯಾನೋ ಸ್ಥಗಿತಗೊಳಿಸುವ ಕುರಿತು ಸಂಸ್ಥೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಗ್ರಾಹಕರ ಬೇಡಿಕೆಯನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.
Advertisement
2008ರ ಆಟೋ ಎಕ್ಸ್-ಪೋನಲ್ಲಿ ಮೊದಲ ಬಾರಿ ನ್ಯಾನೋ ಕಾರು ಕಾಣಿಸಿಕೊಂಡು 2009ರಲ್ಲಿ ವಿಶ್ವದ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ರತನ್ ಟಾಟಾರವರು ಭಾರತೀಯರಿಗೆ ಕೊಟ್ಟಿದ್ದ ಮಾತಿನಂತೆ 1 ಲಕ್ಷ ರೂಪಾಯಿಗೆ ನ್ಯಾನೋ ಕಾರನ್ನು ಗ್ರಾಹಕರಿಗೆ ನೀಡಿತ್ತು. ನ್ಯಾನೋ ಕಾರು ವಿಶ್ವದಲ್ಲಿಯೇ ಅಗ್ಗದ ಕಾರು ಎಂಬ ಹೆಸರು ಸಹ ಪಡೆದುಕೊಂಡಿತ್ತು.
ಟಾಟಾ ಸನ್ಸ್ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಈ ಹಿಂದೆ, ಟಾಟಾ ನ್ಯಾನೋ ಉತ್ಪಾದನೆಯಿಂದ ಸಂಸ್ಥೆಗೆ 1,000 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ನ್ಯಾನೋ ಕಾರು ಉತ್ಪಾದನೆಯಿಂದ ಸಂಸ್ಥೆಗೆ ಯಾವುದೇ ರೀತಿಯ ಲಾಭ ಸಹ ಗಳಿಸಿಲ್ಲ. ರತನ್ ಟಾಟಾರವರ ಕನಸಿನ ಕೂಸಗಿದ್ದರಿಂದ ನ್ಯಾನೋ ಕಾರನ್ನು ಭಾವನಾತ್ಮಕ ಕಾರಣಗಳಿಂದಾಗಿ ಇನ್ನೂ ಉತ್ಪಾದನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು.