– ಇಂದು ಕೋಟೆಹೊಂಡ ರವೀಂದ್ರ ಪೊಲೀಸರಿಗೆ ಶರಣು
-ನಾಳೆ ನಕ್ಸಲ್ ಲಕ್ಷ್ಮಿ ಶರಣಾಗತಿಗೆ ಸಿದ್ಧತೆ
ಚಿಕ್ಕಮಗಳೂರು: ನಕ್ಸಲ್ (Naxal) ಕೋಟೆಹೊಂಡ ರವೀಂದ್ರ ಶರಣಾಗತಿಗೆ ಸಿದ್ಧನಾಗಿದ್ದು, ಕರ್ನಾಟಕದಲ್ಲಿ ಕೆಂಪು ಉಗ್ರರ ಇತಿಹಾಸ ಯುಗಾಂತ್ಯವಾಗುತ್ತಿದೆ.
ಇಂದು (ಶನಿವಾರ) ಎಸ್ಪಿ ಕಚೇರಿಯಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರ ಸಮ್ಮುಖದಲ್ಲಿ ಶರಣಾಗಲಿದ್ದಾನೆ. ಕಳೆದೊಂದು ದಶಕದಿಂದ ಈತ ಭೂಗತನಾಗಿದ್ದ. ಆತನ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ (Police) ಠಾಣೆಯಲ್ಲಿ ಒಟ್ಟು 14 ಪ್ರಕರಣಗಳಿವೆ.
ರವೀಂದ್ರ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವನು.
ಜನವರಿ 8 ರಂದು 6 ಜನ ನಕ್ಸಲರು ಸಿಎಂ ಎದುರು ಶರಣಾಗಿದ್ದರು. ಆದರೆ ಈತ ಕಾಡಲ್ಲಿ ಒಬ್ಬನೇ ಉಳಿದು ಕೊಂಡಿದ್ದ. ಇನ್ನೂ ತಲೆಮರೆಸಿಕೊಂಡಿದ್ದ ನಕ್ಸಲ್ ಲಕ್ಷ್ಮಿ ಸಹ ನಾಳೆ (ಭಾನುವಾರ) ಪೊಲೀಸರ ಮುಂದೆ ಶರಣಾಗಲು ತಯಾರಾಗಿದ್ದು ರಾಜ್ಯದಲ್ಲಿ ಕೆಂಪು ಉಗ್ರರ ಯುಗ ಕೊನೆಯಾಗಲಿದೆ.