ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ನಡುವಿನ ಉತ್ತಮವಾದ ಕಾಂಬಿನೇಷನ್ ಇಂದಿಗೆ ಅಂತ್ಯವಾಗಿದೆ.
Advertisement
ಶಾಸ್ತ್ರಿ 2014ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಡೈರೆಕ್ಟರ್ ಆಗಿ ಆಯ್ಕೆಗೊಂಡರು. 2016ರ ಬಳಿಕ ಒಂದು ವರ್ಷಗಳ ಕಾಲ ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದರು. ನಂತರ 2017ರಲ್ಲಿ ರವಿಶಾಸ್ತ್ರಿ ಮುಖ್ಯ ಕೋಚ್ ಆಗಿ ಟೀಂ ಇಂಡಿಯಾಗೆ ನೇಮಕಗೊಂಡರು. ರವಿಶಾಸ್ತ್ರಿ ಸಾರಥ್ಯದಲ್ಲಿ ಮುನ್ನಡೆದ ಭಾರತ ತಂಡ ಚಾಂಪಿಯನ್ ಟ್ರೋಫಿ, ಆಸ್ಟ್ರೇಲಿಯಾ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸಹಿತ ಹಲವು ಮಹತ್ವದ ಪಂದ್ಯಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಕೋಚ್ ಸ್ಥಾನದಿಂದ ಕೆಳಗಿಳಿಯುವ ಹುಮ್ಮಸ್ಸಿನಲ್ಲಿದ್ದರು. ಆದರೆ ಟೀಂ ಇಂಡಿಯಾ ಸೋಲಿನಿಂದ ಈ ಅವಕಾಶ ಕೈತಪ್ಪಿತು. ಇದನ್ನೂ ಓದಿ: ಐಪಿಎಲ್‍ನ ನೂತನ ತಂಡ ಅಹಮದಾಬಾದ್‍ನ ಕೋಚ್ ಆಗಲಿದ್ದಾರೆ ರವಿಶಾಸ್ತ್ರಿ?
Advertisement
Set to end his tenure as Head Coach, @RaviShastriOfc heaps praise on #TeamIndia for what it has accomplished over the last few years. ???? ????#T20WorldCup pic.twitter.com/9o5MxhkAFw
— BCCI (@BCCI) November 8, 2021
Advertisement
ಟಿ20 ವಿಶ್ವಕಪ್ ಮುಗಿದ ಕೂಡಲೇ ಭಾರತ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‍ಬೈ ಹೇಳುದಾಗಿ ವಿಶ್ವಕಪ್ ಆರಂಭಕ್ಕೂ ಮೊದಲೇ ಹೇಳಿಕೊಂಡಿದ್ದರು. ಅದರಂತೆ ಟಿ20 ವಿಶ್ವಕಪ್‍ನ ಕಡೆಯ ಪಂದ್ಯ ನಮೀಬಿಯ ವಿರುದ್ಧ ನಾಯಕನಾಗಿ ಕಡೆಯ ಪಂದ್ಯವನ್ನು ಕೊಹ್ಲಿ ಆಡಿದರು. ವಿರಾಟ್ ಕೊಹ್ಲಿ ಟಿ20 ತಂಡದ ನಾಯಕನಾಗಿ 50 ಪಂದ್ಯವಾಡಿದ್ದು ಅದರಲ್ಲಿ 30 ಪಂದ್ಯಗಳಲ್ಲಿ ಜಯ, 16 ಸೋಲು, 2 ಪಂದ್ಯ ಟೈ ಮತ್ತು 2 ಪಂದ್ಯ ರದ್ದು ಗೊಂಡಿದೆ. ಈ ಮೂಲಕ ಟೀಂ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಿಕ ಯಶಸ್ಸಿಯಾಗಿ ಮುನ್ನಡೆಸಿದ ಗೆಲುವಿನ ರೆಕಾರ್ಡ್ ಕೊಹ್ಲಿ ಹೆಸರಿನಲ್ಲಿದೆ. ಇದನ್ನೂ ಓದಿ: ಪಂದ್ಯಕ್ಕೂ ಮೊದಲು ಅಬುಧಾಬಿ ಪಿಚ್ ಕ್ಯೂರೇಟರ್ ನಿಗೂಢ ಸಾವು
Advertisement
ವಿರಾಟ್ ಕೊಹ್ಲಿ 50 ಪಂದ್ಯಗಳಲ್ಲಿ ನಾಯನಾಗಿ ತಂಡವನ್ನು ಮುನ್ನಡೆಸಿ ನಾಯಕತ್ವಕ್ಕೆ ಗುಡ್‍ಬೈ ಹೇಳಿದರೆ, ಟಿ20 ವಿಶ್ವಕಪ್‍ನ ಕಡೆಯ ಪಂದ್ಯದ ಗೆಲುವಿನೊಂದಿಗೆ ಕೋಚ್ ರವಿಶಾಸ್ತ್ರಿ ತಂಡದಿಂದ ಬೇರ್ಪಟ್ಟಿದ್ದಾರೆ. ಈ ಇಬ್ಬರೂ ಕೂಡ ನಾಯಕ ಮತ್ತು ಕೋಚ್ ಆಗಿ ತಂಡವನ್ನು ಉತ್ತಮವಾಗಿ ಬೆಳೆಸಿದ್ದು ಇವರಿಬ್ಬರಲ್ಲಿ ಉತ್ತಮವಾದ ಕಾಂಬಿನೇಷನ್ ಮೂಡಿತ್ತು, ಇಂದಿಗೆ ಆ ಯುಗ ಅಂತ್ಯವಾಗಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್ ಬೈ ಹೇಳಲು ಮುಂದಾದ್ರಾ ಕ್ರಿಸ್ ಗೇಲ್?