ಬೆಂಗಳೂರು: ನಗರದ ಮಹಾದೇವಪುರದಲ್ಲಿ(Mahadevpur) ಇತ್ತೀಚೆಗೆ ಭಾರೀ ಮಳೆಯಿಂದಾಗಿ ಪ್ರವಾಹದ(Flood) ಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆ ಬಿಬಿಎಂಪಿ(BBMP) ಅಧಿಕಾರಿಗಳು ಒತ್ತುವರಿ ತೆರವಿಗೆ ಸೋಮವಾರ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
Advertisement
ಇಂದು ಮುನೇನಕೊಳಲು, ಚಿನ್ನಪ್ಪನಹಳ್ಳಿ, ಚಳ್ಳಗಟ್ಟ, ಬಸವಣನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿದೆ. 4 ಪ್ರಮುಖ ಭಾಗಗಳಲ್ಲಿ ಮೊದಲ ಹಂತದ ಆಪರೇಷನ್ ಪ್ರಾರಂಭವಾಗಿದ್ದು, ಈ ಭಾಗದ ರಾಜಕಾಲುವೆ ಒತ್ತುವರಿದಾರರಿಗೆ ಬುಲ್ಡೋಜರ್ ಶಾಕ್ ನೀಡಲು ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
Advertisement
Advertisement
ಕಂದಾಯ ಇಲಾಖೆಯ ಸರ್ವೆ ವರದಿಯಲ್ಲಿ ಮಳೆ ಹಾನಿಗೆ ಈ ಅಪಾರ್ಟ್ಮೆಂಟ್‌ಗಳೇ ಕಾರಣ ಎಂಬುದು ತಿಳಿದುಬಂದಿತ್ತು. 145 ಅಪಾರ್ಟ್ಮೆಂಟ್‌ಗಳಿಂದ ರಾಜಕಾಲುವೆ ಹಾಗೂ ಸಬ್ ಕಾಲುವೆಗಳ ಒತ್ತುವರಿಯಾಗಿತ್ತು. ಹಲವೆಡೆ ಕಾಂಪೌಂಡ್, ರಸ್ತೆ, ಮನೆ, ಪಾರ್ಟ್ಮೆಂಟ್‌ಗಳ ನಿರ್ಮಾಣ ಮಾಡಿಕೊಂಡು ಒತ್ತುವರಿ ಮಾಡಲಾಗಿದೆ. ಇಂದು 8ಕ್ಕೂ ಹೆಚ್ಚು ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದೆ. ಇದನ್ನೂ ಓದಿ: ವಿಧಾನಸಭೆ ಕಲಾಪ: ಉಮೇಶ್ ಕತ್ತಿ ಕ್ರಿಯಾಶೀಲ, ವರ್ಣರಂಜಿತ ರಾಜಕಾರಣಿ- ಸಿಎಂ