ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಖನ್ಯಾರ್ (Khanyar) ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಶನಿವಾರ (ನ.02) ಬೆಳಗ್ಗೆ ಕಾಶ್ಮೀರದ ಖನ್ಯಾರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?
Advertisement
Advertisement
ಒಂದು ದಿನದ ಹಿಂದೆಯಷ್ಟೇ ವಲಸೆ ಕಾರ್ಮಿಕರ ಮೇಲೆ ನಡೆದ ಗುಂಡಿನ ದಾಳಿಯ ಬಳಿಕ ಉಗ್ರರು ಖನ್ಯಾರ್ ಪ್ರದೇಶದಲ್ಲಿ ಇರುವುದಾಗಿ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಇದರಿಂದ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಈ ವೇಳೆ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ.
Advertisement
ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಮಗಮ್ ಪ್ರದೇಶದಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕರು ಶುಕ್ರವಾರ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರು ವಲಸೆ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
Advertisement
ಇದಕ್ಕೂ ಮುನ್ನ ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ವೈದ್ಯ ಮತ್ತು ಆರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರು. ಇದಾದ 12 ದಿನಗಳ ನಂತರ ದಾಳಿ ಸಂಭವಿಸಿತ್ತು. ದಾಳಿಗೊಳಗಾದ ವೈದ್ಯ ಮತ್ತು ಕಾರ್ಮಿಕರು ಸೆಂಟ್ರಲ್ ಕಾಶ್ಮೀರದ ಗಂದರ್‌ಬಾಲ್‌ನಲ್ಲಿರುವ ಗಗನೀರ್‌ನಿಂದ ಸೋನಾಮಾರ್ಗ್ಗೆ ಸಂಪರ್ಕ ಕಲ್ಪಿಸುವ Z-ಮೋರ್ಹ್ ಸುರಂಗದಲ್ಲಿ ಕೆಲಸ ಮಾಡುವ ತಂಡದಲ್ಲಿದ್ದವರಾಗಿದ್ದರು.ಇದನ್ನೂ ಓದಿ: ಹೆಚ್‌ಡಿಕೆ ಒಂದು ದಿನವೂ ರಾಷ್ಟ್ರಧ್ವಜ, ಕನ್ನಡ ಧ್ವಜಕ್ಕೆ ಗೌರವ ಕೊಟ್ಟಿಲ್ಲ: ಕುಮಾರಸ್ವಾಮಿ ವಿರುದ್ಧ ಡಿಕೆಶಿ ಕೆಂಡ