ಡೆಹ್ರಾಡೂನ್: ಕೇದಾರನಾಥ (Kedarnath) ಹೆಲಿಪ್ಯಾಡ್‌ನಿಂದ ಸುಮಾರು 100 ಮೀಟರ್ ದೂರದಲ್ಲೇ ತಾಂತ್ರಿಕ ದೋಷದಿಂದಾಗಿ 7 ಮಂದಿಯನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಎಲ್ಲಾ 6 ಪ್ರಯಾಣಿಕರು ಮತ್ತು ಪೈಲಟ್ ಸುರಕ್ಷಿತವಾಗಿದ್ದಾರೆ.
ತುರ್ತು ಲ್ಯಾಂಡಿಂಗ್ ಮಾಡುವ ಮೊದಲು ಹೆಲಿಕಾಪ್ಟರ್ (Kedarnath Helicopter) ಗಿರಗಿರನೆ ತಿರುಗಿತು. ಈ ವೇಳೆ ಹೆಲಿಪ್ಯಾಡ್‌ನಲ್ಲಿ ನಿಂತಿದ್ದ ಸಿಬ್ಬಂದಿ ಹೆದರಿ ಹಿಂದಕ್ಕೆ ಓಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬುರ್ಖಾಧಾರಿ ಮಹಿಳಾ ಮತದಾರರ ವಿಶೇಷ ತಪಾಸಣೆಗೆ ಒತ್ತಾಯ – ಬಿಜೆಪಿ ಮನವಿಗೆ ಓವೈಸಿ ಕೆಂಡಾಮಂಡಲ
Advertisement
Advertisement
ಸಿರ್ಸಿಯ ಹೆಲಿಪ್ಯಾಡ್‌ನಿಂದ ಪೈಲಟ್ ಸೇರಿ 7 ಮಂದಿಯನ್ನು ಹೊತ್ತು ಕೇದಾರನಾಥ ಧಾಮಕ್ಕೆ ಬರುತ್ತಿದ್ದ ಕೆಸ್ಟ್ರೆಲ್ ಏವಿಯೇಷನ್ ಕಂಪನಿಯ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಯಿಂದಾಗಿ 7:05 ಗಂಟೆ ತುರ್ತು ಭೂಸ್ಪರ್ಶ ಮಾಡಿತು.
Advertisement
ಚಾರ್ ಧಾಮ್ ಯಾತ್ರೆಯು ಮೇ 10 ರಂದು ಆರಂಭವಾಗಿದೆ. ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ಸೇರಿದಂತೆ ಮೂರ್ನಾಲ್ಕು ದೇವಾಲಯಗಳನ್ನು ತೆರೆಯಲಾಯಿತು. ಮೇ 12 ರಂದು ಬದರಿನಾಥದ ಬಾಗಿಲು ತೆರೆಯಲಾಗಿದೆ. ಇದನ್ನೂ ಓದಿ: ಕತ್ತು ಹಿಸುಕಿ, ಚರ್ಮ ಸುಲಿದು ಬಾಂಗ್ಲಾ ಸಂಸದನ ದೇಹವನ್ನು ಕತ್ತರಿಸಿ ಹಾಕಿದ್ರು!
Advertisement
ಚಾರ್ ಧಾಮ್ ಯಾತ್ರೆಯು ಹಿಂದೂ ಧರ್ಮದಲ್ಲಿ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಯಾತ್ರೆಯು ಸಾಮಾನ್ಯವಾಗಿ ಏಪ್ರಿಲ್-ಮೇ ನಿಂದ ಅಕ್ಟೋಬರ್-ನವೆಂಬರ್ ವರೆಗೆ ನಡೆಯುತ್ತದೆ. ಯಾತ್ರೆಯು ಯಮುನೋತ್ರಿಯಿಂದ ಪ್ರಾರಂಭವಾಗಿ, ಗಂಗೋತ್ರಿ, ಕೇದಾರನಾಥ ಮೂಲಕ ಸಾಗಿ ಅಂತಿಮವಾಗಿ ಬದರಿನಾಥದಲ್ಲಿ ಕೊನೆಗೊಳ್ಳುತ್ತದೆ.
ಯಾತ್ರಿಕರ ನೂಕುನುಗ್ಗಲು ಕಾರಣ, ಉತ್ತರಾಖಂಡ ಸರ್ಕಾರವು ಚಾರ್ ಧಾಮ್ ಯಾತ್ರೆಗೆ ಬರುವ ಎಲ್ಲಾ ಯಾತ್ರಾರ್ಥಿಗಳಿಗೆ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಹರಿದ್ವಾರ ಮತ್ತು ಋಷಿಕೇಶದಲ್ಲಿ ಆಫ್‌ಲೈನ್ ನೋಂದಣಿಯನ್ನು ನಿಲ್ಲಿಸಲಾಗಿದ್ದು, ಈಗ ಭಕ್ತರು ಆನ್‌ಲೈನ್ ನೋಂದಣಿ ನಂತರವೇ ಚಾರ್ ಧಾಮ್ ಯಾತ್ರೆಗೆ ಬರಬಹುದು.