ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಶೋನಲ್ಲಿ ಏನೆಲ್ಲ ಆವಾಂತರಗಳು ನಡೆಯುತ್ತಿವೆ. ಪೂನಂ ಪಾಂಡೆ ಸೇರಿದಂತೆ ಹಲವು ಕಲಾವಿದರು ನಾಲಿಗೆಗೆ ಫಿಲ್ಟರ್ ಇಲ್ಲದೇ ಮಾತನಾಡುತ್ತಿದ್ದಾರೆ. ಪೂನಂ ಈ ಹಿಂದೆ ಟಾಪ್ ಲೆಸ್ ಆಗಿ ನಿಲ್ಲುತ್ತೇನೆ ಎಂದು ಹೇಳಿಕೆ ನೀಡಿ, ಅದರಂತೆ ನಡೆದುಕೊಂಡರು. ತಮ್ಮ ಅನೈತಿಕ ಸಂಬಂಧ, ತಮಗಾದ ಮೋಸ, ಬಾಯ್ ಫ್ರೆಂಡ್, ಗರ್ಲ್ ಫೆಂಡ್ ಹೀಗೆ ಏನೇನೋ ನೆನಪುಗಳು ಈ ಶೋನಲ್ಲಿ ಬರುತ್ತಲೇ ಇರುತ್ತವೆ. ಈ ಬಾರಿ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿ ಆಯಿತು ಲಾಕ್ ಅಪ್ ಶೋ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ
ನಟಿ ಪಾಯಲ್ ರೊಹಟಗಿ ಮಾತನಾಡುತ್ತಾ, ‘ತಮಗೆ ಮಕ್ಕಳು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ನನ್ನ ಬಾಯ್ ಫ್ರೆಂಡ್ ಸಂಗ್ರಾಮ್ ಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಐವಿಎಫ್ ಮಾಡಿಸಿರುವುದು ಫೇಲ್ ಆಯಿತು. ಹಾಗಾಗಿ ನಾವು ಇನ್ನೂ ಮದುವೆ ಆಗಿಲ್ಲ. ಮಕ್ಕಳಾದ ಮೇಲೆಯೇ ಮದುವೆ ಆಗೋಣ ಅಂತ ತೀರ್ಮಾನಿಸಿದೆ. ಅಲ್ಲದೇ, ಮಕ್ಕಳಾಗುವ ಹುಡುಗಿಯೊಂದಿಗೆ ಮದುವೆಯಾಗು ಅಂತ ಸಂಗ್ರಾಮ್ ಗೆ ಹೇಳಿರುವೆ’ ಎಂದು ಹೇಳುವ ಮೂಲಕ ಇಡೀ ಶೋ ಅನ್ನು ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋದರು. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್
ತನ್ನ ಪ್ರೇಮಿಗಾಗಿ ಹುಡುಗಿಯೊಬ್ಬಳು ಏನು ಬೇಕಾದರೂ ತ್ಯಾಗಕ್ಕೆ ಸಿದ್ಧಳಾಗಿರುತ್ತಾಳೆ ಎಂದು ಮತ್ತೆ ಮಾತು ಮುಂದುವರಿಸಿದ ರೊಹಟಗಿ ‘ಸಂಗ್ರಾಮ್ ಗೆ ಮಕ್ಕಳ ಜತೆ ಹೇಗೆ ಇರುತ್ತಾರೆ ಎನ್ನುವುದನ್ನು ನಾನು ಬಲ್ಲೆ. ಅವರೊಂದಿಗೆ ಮಕ್ಕಳು ಸದಾ ಇರಬೇಕು ಎಂದು ಬಯಸುತ್ತಾರೆ. ಆದರೆ, ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ಆ ನೋವಿನೊಂದಿಗೆ ನಾನು ಇರಲಾರೆ. ಈ ಶೋ ಮೂಲಕವೂ ಅವರನ್ನು ಕೇಳಿಕೊಳ್ಳುತ್ತೇನೆ. ಮತ್ತೊಂದು ಹುಡುಗಿಯನ್ನು ನೋಡಿಕೊಂಡು ಖುಷಿಯಾಗಿರಿ’ ಎಂದು ರೊಹಟಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್
ಈ ಶೋ ಕುರಿತು ಪ್ರತಿಕ್ರಿಯೆ ನೀಡಿರುವ ಸಂಗ್ರಾಮ್ ‘ಅವಳು ಮತ್ತು ನಾನು ಈಗ ಹೇಗಿದ್ದೆವೋ ಹಾಗೆ ಇರುವುದಕ್ಕೆ ಬಯಸುತ್ತೇವೆ. ಇನ್ನೊಂದು ಮದ್ವೆ ಆಗುವುದು ಮತ್ತು ಹುಡುಗಿಯನ್ನು ನೋಡುವುದನ್ನು ನನ್ನಿಂದ ಕೇಳುವುದಕ್ಕೂ ಆಗುವುದಿಲ್ಲ. ಮಕ್ಕಳಾಗದಿದ್ದರೆ ಏನಾಯಿತು? ನಾವೇ ಮಕ್ಕಳಂತೆ ಇರೋಣ’ ಎಂದಿದ್ದಾರೆ.