ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗ ಮೊದಲ ಬಾರಿಗೆ ಇಮೋಜಿ ಬಳಸಿಕೊಂಡಿತು. ಕೆಜಿಎಫ್ 2 ಸಿನಿಮಾದ ರಾಕಿಭಾಯ್ ಇಮೋಜಿಯಾಗಿ ಅಭಿಮಾನಿಗಳನ್ನು ರಂಜಿಸಿದ. ಅದು ಇಮೋಜಿಯಾದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ರಾಕಿಭಾಯ್ ಇಮೋಜಿ ಫೇಮಸ್ ಕೂಡ ಆಯಿತು. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ
ಇದೀಗ ರಕ್ಷಿತ್ ಶೆಟ್ಟಿ ನಟನೆಯ ‘ಚಾರ್ಲಿ 777’ ಸಿನಿಮಾದ ಇಮೋಜಿ ಕೂಡ ರೆಡಿಯಾಗಿದೆ. ಈ ಸಿನಿಮಾದ ಹೈಲೆಟ್ ಆಗಿರುವ ನಾಯಿಯ ಚಿತ್ರವನ್ನು ಇಮೋಜಿ ರೂಪದಲ್ಲಿ ಹೊರತರಲಾಗಿದೆ. ಅದು ಕೂಡ ಎರಡು ದಿನಗಳಿಂದ ಟ್ರೆಂಡಿಂಗ್ ನಲ್ಲಿದೆ. ಚಾರ್ಲಿ ಸಿನಿಮಾದ ವಿಶೇಷ ಪಾತ್ರವೇ ನಾಯಿಯದ್ದು. ಹಾಗಾಗಿ ಅದನ್ನೇ ಇಮೋಜಿಯನ್ನಾಗಿ ಮಾಡಲಾಗಿದೆಯಂತೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ
ಇಮೋಜಿ ಇದೊಂದು ವಿಶಿಷ್ಟಪದ. ‘ಇ’ ಅಂದರೆ, ಅಕ್ಷರ. ‘ಮೋಜಿ’ ಅಂದರೆ ಚಿತ್ರ. ಅಕ್ಷರಗಳು ಚಿತ್ರರೂಪದಲ್ಲಿ ಕಾಣುವ ಒಂದು ಬಗೆಗೆ ಇಮೋಜಿ ಎಂದು ಕರೆಯುತ್ತಾರೆ. ಕೆಜಿಎಫ್ ನಲ್ಲಿ ರಾಕಿಭಾಯ್ ಪದವನ್ನು ಅವರ ಚಿತ್ರವಾಗಿಸಿದ್ದರೆ, ಚಾರ್ಲಿ 777 ಸಿನಿಮಾಗಾಗಿ ನಾಯಿಯನ್ನು ಬಳಸಿಕೊಂಡಿದ್ದಾರೆ. ಈಗ ನಾಯಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.