ಬೆಂಗಳೂರು: ಸಸ್ಯಾಹಾರ ಬದಲಿಗೆ ಬೆಂಗಳೂರು ಮೂಲದ ದಂಪತಿಗೆ ಮಾಂಸಾಹಾರ ನೀಡಿದ್ದಕ್ಕೆ ಕೋರ್ಟ್ ದುಬೈ ಮೂಲದ ಎಮಿರೇಟ್ಸ್ ವಿಮಾನಯಾನ ಸಂಸ್ಥೆಗೆ 20 ಸಾವಿರ ರೂ. ದಂಡ ವಿಧಿಸಿದೆ.
ಲಂಡನ್ ನಲ್ಲಿ ನೆಲೆಸಿರುವ ದಂಪತಿ ಬೆಂಗಳೂರಿಗೆ ಆಗಮಿಸಿದ್ದರು. 2 ತಿಂಗಳು ನಗರದಲ್ಲಿದ್ದ ದಂಪತಿ ಮರಳಿ ಲಂಡನ್ ಗೆ ತೆರಳಲು ಎಮಿರೇಟ್ಸ್ ಕಂಪನಿಯ ವಿಮಾನ ಟಿಕೆಟ್ ಬುಕ್ ಮಾಡಿದ್ದರು.
Advertisement
Advertisement
ಬುಕ್ಕಿಂಗ್ ವೇಳೆ ಯಾವ ರೀತಿಯ ಆಹಾರ ಬೇಕು ವಿಭಾಗದಲ್ಲಿ ‘ಸಸ್ಯಾಹಾರ’ ಆಯ್ಕೆ ಮಾಡಿಕೊಂಡಿದ್ದರು. ಆದರೆ ವಿಮಾನ ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿ ಮಾಂಸಾಹಾರ ನೀಡಿದ್ದಾರೆ. ಆರಂಭದಲ್ಲಿ ಪತ್ನಿ ಆಹಾರ ಸೇವಿಸಿದ್ದಾರೆ. ನಂತರ ಪತಿ ಆಹಾರ ಸೇವಿಸುತ್ತಿದ್ದಾಗ ಅನುಮಾನ ಬಂದು ಸಿಬ್ಬಂದಿ ಜೊತೆ ಪ್ರಶ್ನಿಸಿದ್ದಾರೆ.
Advertisement
ಈ ವೇಳೆ ಮಿಸ್ ಆಗಿ ನಾನ್ ವೆಜ್ ಆಹಾರ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ. ಇಷ್ಟು ಹೊತ್ತಿಗೆ ಪತ್ನಿ ಊಟ ಸೇವಿಸಿದ್ದರೆ ಪತಿ ಕೂಡ ಸ್ವಲ್ಪ ಊಟ ಸೇವಿಸಿದ್ದರು. ಯಾವಾಗ ಇದು ನಾನ್ ವೆಜ್ ಅಂತಾ ಗೊತ್ತಾಯ್ತೋ ದಂಪತಿ ಅಲ್ಲೇ ಪ್ರಶ್ನೆ ಮಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಇಲ್ಲಿಯವರೆಗೂ ನಾವು ನಾನ್ ವೆಜ್ ತಿಂದಿಲ್ಲ, ನಾವು ಶುದ್ಧ ಸಸ್ಯಹಾರಿಗಳು. ನಿಮ್ಮ ಎಡವಟ್ಟಿನಿಂದ ನಾನ್ ವೆಜ್ ತಿನ್ನುವಂತಾಯ್ತು ಎಂದು ಆರೋಪಿಸಿ ದಂಪತಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ನೀಡಿದ್ದರು. ಅರ್ಜಿ ವಿಚಾರಣೆ ನಡೆಸಿದ ವೇದಿಕೆ ಎಮಿರೇಟ್ಸ್ ಸಂಸ್ಥೆಗೆ 20 ಸಾವಿರ ರೂ. ದಂಡ ಹಾಕಿ ಆದೇಶ ಪ್ರಕಟಿಸಿದೆ.