ನವದೆಹಲಿ: ಮಂಗಳವಾರ ಬೆಳಗ್ಗೆ ಸುಮಾರು 11:30ರ ವೇಳೆಗೆ ದೇಶಾದ್ಯಂತ ಲಕ್ಷಾಂತರ ಮೊಬೈಲ್ ಫೋನ್‌ಗಳಿಗೆ ಭಾರತ ಸರ್ಕಾರ ಎಚ್ಚರಿಕೆಯ ಸಂದೇಶವೊಂದನ್ನು (Message) ಕಳುಹಿಸಿದೆ. ತುರ್ತು ಎಚ್ಚರಿಕೆ (Emergency Alert) ಬಗ್ಗೆ ಜನತೆ ಕೆಲ ಕಾಲ ಆತಂಕಕ್ಕೀಡಾದರೂ ಈ ಸಂದೇಶ ಕೇವಲ ಪರೀಕ್ಷಾರ್ಥವಾಗಿ ಕೇಂದ್ರ ಸರ್ಕಾರ ಕಳುಹಿಸಿರುವುದು ಖಚಿತವಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಈ ಸಂದೇವನ್ನು ಪರೀಕ್ಷಾರ್ಥವಾಗಿ ಕಳುಹಿಸಿದೆ. ಆಂಡ್ರಾಯ್ಡ್ ಹಾಗೂ ಐಫೋನ್ ಹೊಂದಿರುವ ಬಹುತೇಕರಿಗೆ ಈ ಸಂದೇಶ ರವಾನೆಯಾಗಿದೆ. ಬೀಪ್ ಸದ್ದಿನೊಂದಿಗೆ 2 ಎಚ್ಚರಿಕೆ ಸಂದೇಶಗಳು ಬಂದಿದ್ದು, ಅವು ಕೆಲ ನಿಮಿಷಗಳ ಅಂತರದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕಳುಹಿಸಲಾಗಿದೆ.
Advertisement
Advertisement
ಇದು ತುರ್ತು ಸಮಯದಲ್ಲಿ ಎಚ್ಚರಿಕೆ ವ್ಯವಸ್ಥೆ ಪರಿಣಾಮಕಾರಿಯಾಗಿರುತ್ತದೆಯೇ ಎಂಬುದನ್ನು ನಿರ್ಣಯಿಸಲು ಹಾಗೂ ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ತಿಳಿಸಲು ನಡೆಸಿದ ಪರೀಕ್ಷೆಯ ಭಾಗವಾಗಿದೆ. ಈ ಸಂದೇಶ ಸ್ವೀಕರಿಸಿದವರಿಗೆ ಇದೊಂದು ಪರೀಕ್ಷೆಯಾಗಿದ್ದು, ಯಾವುದೇ ಎಚ್ಚರಿಕೆ ಕ್ರಮದ ಅಗತ್ಯವಿಲ್ಲ ಎಂದು ಎನ್‌ಡಿಎಂಎ ತಿಳಿಸಿದೆ. ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್
Advertisement
Advertisement
ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಏಕೆಂದರೆ ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರೀಕ್ಷಿಸಲು ಕಳುಹಿಸಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಭಾರತದ 74 ಲಕ್ಷ ವಾಟ್ಸಪ್ ಖಾತೆಗಳು ನಿಷೇಧ
Web Stories