ಶ್ರೀನಗರ: ಜಮ್ಮು-ಕಾಶ್ಮೀರ (Jammu Kashmir) ಕ್ಕೆ ಭಾರತ್ ಜೋಡೋ ಯಾತ್ರೆ (Bharat Jodo Yatre) ತಲುಪುವ ಒಂದು ದಿನದ ಮೊದಲು ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಿದೆ. ಸಂಸದ ರಾಹುಲ್ ಗಾಂಧಿ ನಡೆ ಖಂಡಿಸಿರುವ ರಾಜ್ಯ ವಕ್ತಾರೆ ದೀಪಿಕಾ ಪುಷ್ಕರ್ ನಾಥ್ (Deepika PushkarNath), ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ (Rahul Gandhi) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಥುವಾ ಅತ್ಯಾಚಾರ ಆರೋಪಿಯನ್ನು ಬೆಂಬಲಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಅವರನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಸಿಕೊಂಡಿರುವುದು, ಪಕ್ಷ ಸೇರ್ಪಡೆ ಪ್ರಸ್ತಾಪ ಗಮನಿಸಿದರೆ ರಾಜೀನಾಮೆ ಹೊರೆತು ಬೇರೆ ಆಯ್ಕೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
2018 ರಲ್ಲಿ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಕ್ರೂರ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಲಾಲ್ ಸಿಂಗ್ (Lal singh) ಅವರು ಹಿಂದಿನ ಬಿಜೆಪಿ-ಪಿಡಿಪಿ ಸರ್ಕಾರದಲ್ಲಿ ಜಮ್ಮು ಮತ್ತು ಕಾಶ್ಮೀರ ಅರಣ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಎರಡು ಬಾರಿ ಸಂಸದ ಹಾಗೂ ಮೂರು ಬಾರಿ ಶಾಸಕರಾಗಿದ್ದ ಲಾಲ್ ಸಿಂಗ್ 2014ರಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು. 2018 ರಲ್ಲಿ ಬಲವಂತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು 2019 ರಲ್ಲಿ ಬಿಜೆಪಿ ತೊರೆದು ರಾಜಕೀಯ ಸಂಘಟನೆಯಾದ ಡೋಗ್ರಾ ಸ್ವಾಭಿಮಾನ್ ಸಂಘಟನೆ (DSSP) ಸೇರಿದ್ದರು.
ಜಮ್ಮು ಮೂಲದ ಮಾನವ ಹಕ್ಕುಗಳ ವಕೀಲರಾದ ದೀಪಿಕಾ ಪುಷ್ಕರ್ ನಾಥ್, ಕಥುವಾ ಅತ್ಯಾಚಾರ ಸಂತ್ರಸ್ತೆಯ ಪರ ಪ್ರಕರಣವನ್ನು ಮುನ್ನಡೆಸಿದ್ದರು. ಆರಂಭದಲ್ಲಿ ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸಿದ್ದರು. ಇದೇ ಕಾರಣಕ್ಕೆ ದೀಪಿಕಾ ಪುಷ್ಕರ್ ನಾಥ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ಹತ್ತಿದ್ದವರಿಗೆ ನಡುಕ – ಸ್ಟೇ ತರಲು ಮುಂದಾದ ಕೆಲ ಪೊಲೀಸ್ ಅಧಿಕಾರಿಗಳು
ಜನವರಿ 2018 ರ ಮೊದಲ ವಾರದಲ್ಲಿ ಅಲೆಮಾರಿ ಮುಸ್ಲಿಂ ಬ್ಯಾಕರ್‍ವಾಲ್ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಗ್ರಾಮದಿಂದ ಅಪಹರಿಸಲಾಗಿತ್ತು. ಅವಳನ್ನು ಒಂದು ಸಣ್ಣ ಸ್ಥಳೀಯ ದೇವಸ್ಥಾನದಲ್ಲಿ ಬಂಧಿಸಿ ಮಾದಕವಸ್ತು ನೀಡಿ ಅತ್ಯಾಚಾರ ಮಾಡಲಾಯಿತು, ಬಳಿಕ ಕೊನೆಗೆ ಆಕೆಯ ಕತ್ತು ಹಿಸುಕಿ ಕೊಲ್ಲಲಾಗಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k