ಮುಂಬೈ: ವಿಶ್ವದ ದಢೂತಿ ಮಹಿಳೆ ಈಜಿಪ್ಟ್ ನ ಎಮಾನ್ ಅಹ್ಮದ್ ಸಹೋದರಿ ಷೈಮಾ ಸೆಲೀಮ್ ಮುಂಬೈನ ವೈದ್ಯ ಲಕ್ದವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
Advertisement
ಭಾರತಕ್ಕೆ ಬಂದು ಎಮಾನ್ ಅಹ್ಮದ್ ತೂಕ ಇಳಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳುತ್ತಿರೋದು ಸುಳ್ಳು ಅಂತಾ ಸಹೋದರಿ ಆರೋಪಿಸಿದ್ದಾರೆ. ಬರೋಬ್ಬರಿ 500 ಕೆಜಿ ತೂಕವಿದ್ದ ಎಮಾನ್ ದೇಹದ ತೂಕ ಇಳಿಸುತ್ತೇವೆ ಅಂತಾ ವೈದ್ಯರು ಭರವಸೆ ನೀಡಿ ಭಾರತಕ್ಕೆ ಕರೆತಂದಿದ್ದರು. ಆದ್ರೆ ಇಲ್ಲಿ ಆಕೆಯ ದೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಮತ್ತಷ್ಟು ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಅಂತಾ ಕಿಡಿಕಾರಿದ್ದಾರೆ.
Advertisement
ಇದನ್ನೂ ಓದಿ: ಭಾರತಕ್ಕೆ ಬಂದ 3 ವಾರದಲ್ಲಿ 120 ಕೆಜಿ ತೂಕ ಇಳಿಸಿಕೊಂಡ ವಿಶ್ವದ ದಢೂತಿ ಮಹಿಳೆ
Advertisement
Advertisement
ಷೈಮಾ ಸೆಲೀಮ್ ಏಪ್ರಿಲ್ 14ರಂದು ವೀಡಿಯೋ ಮಾಡುವ ಮೂಲಕ ಈ ಆರೋಪವನ್ನು ಮಾಡಿದ್ದಾರೆ. ಮುಂಬೈನ ಸೈಫೀ ಆಸ್ಪತ್ರೆಯ ವೈದ್ಯ ಡಾ. ಮುಫಜಲ್ ಲಕ್ದವಾಲಾ, ಸರ್ಜರಿ ಬಳಿಕ ಎಮಾನ್ ತೂಕ ಇಳಿಸಿಕೊಂಡಿದ್ದಾಳೆ ಅಂತಾ ಹೇಳುತ್ತಿದ್ದಾರೆ. ಆದ್ರೆ ಇದು ಸುಳ್ಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾದ ಬಳಿಕ ಆಕೆ ಇಲ್ಲಿವರೆಗೆ ಎಮಾನ್ ಮಾತನಾಡಿಲ್ಲ, ನಡೆದಾಡಿಲ್ಲ. ಹೀಗಾಗಿ ಭಾರತಕ್ಕೆ ಬಂದ ಬಳಿಕ ಆಕೆಯ ಆರೋಗ್ಯ ಹದಗೆಟ್ಟಿದೆಯೇ ಹೊರತು, ಚಲನವಲನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಅಂತಾ ಷೈಮಾ ವೀಡಿಯೋದಲ್ಲಿ ದೂರಿದ್ದಾರೆ. ಅಲ್ಲದೇ ಆಕೆಗೆ ಆಸ್ಪತ್ರೆಯಲ್ಲಿ ಯಾವೆಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂಬುವುದನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಸಿಎಟಿ ಸ್ಕ್ಯಾನ್ ಮೆಶಿನ್ ಕೂಡ ಇಲ್ಲ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ
ಆದ್ರೆ ಇಮಾನ್ ಸಹೋದರಿ ಆರೋಪವನ್ನು ವೈದ್ಯ ಲಕ್ದವಾಲಾ ತಳ್ಳಿ ಹಾಕಿದ್ದಾರೆ. ಇಮಾನ್ ಚಿಕಿತ್ಸೆಗೂ ಮುನ್ನ 500 ಕೆಜಿ ತೂಕವಿದ್ಲು. ಚಿಕಿತ್ಸೆ ಬಳಿಕ ಆಕೆ ತೂಕ 172 ಕೆಜಿಗೆ ಇಳಿದಿದೆ. ಆದ್ರೆ ಮುಂದಿನ ಚಿಕಿತ್ಸಾ ವೆಚ್ಚವನ್ನು ಉಳಿಸಿಕೊಳ್ಳಲು ಇಮಾನ್ ಕುಟುಂಬಸ್ಥರು ಸುಳ್ಳು ಆರೋಪ ಮಾಡ್ತಿದ್ದಾರೆಂದು ಲಕ್ದವಾಲಾ ಪ್ರತಿಕ್ರಿಯೆ ನೀಡಿದ್ದಾರೆ.