ವಾಷಿಂಗ್ಟನ್: ಐದು ತಿಂಗಳ ಹಿಂದೆ ನನಗೆ ಮಗು ಜನಿಸಿದೆ. ಈ ಮಗುವಿನ ತಂದೆ ಎಲಾನ್ ಮಸ್ಕ್ (Elon Musk) ಎಂದು ಅಮೆರಿಕದ ಮೇಕ್ ಅಮೆರಿಕ ಗ್ರೇಟ್ ಅಗೇನ್ (MAGA) ಲೇಖಕಿ, ಇನ್‌ಫ್ಲೂಯನ್ಸರ್ ಆಶ್ಲೇ ಸೇಂಟ್ ಕ್ಲೇರ್ (Ashley St. Clair) ಹೇಳಿದ್ದಾರೆ.
ಪ್ರೇಮಿಗಳ ದಿನಾಚರಣೆಯಂದೇ (Valentine’s Day) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಐದು ತಿಂಗಳ ಹಿಂದೆ ನಾನು ನನ್ನ ಮಗುವನ್ನು ಜಗತ್ತಿಗೆ ಸ್ವಾಗತಿಸಿದ್ದೇನೆ. ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಾನು ಇದನ್ನು ಈ ಹಿಂದೆ ಬಹಿರಂಗಪಡಿಸಿರಲಿಲ್ಲ ಎಂದು ತಿಳಿಸಿದ್ದಾರೆ.
Advertisement
Alea Iacta Est pic.twitter.com/gvVaFNTGqn
— Ashley St. Clair (@stclairashley) February 15, 2025
Advertisement
ನಮ್ಮ ಮಗು ಸಾಮಾನ್ಯ ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯಲು ನಾನು ಅವಕಾಶ ನೀಡಲು ಉದ್ದೇಶಿಸಿದ್ದೇನೆ. ಆ ಕಾರಣಕ್ಕಾಗಿ ಮಾಧ್ಯಮಗಳು ನಮ್ಮ ಮಗುವಿನ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ಟ್ಯಾಬ್ಲಾಯ್ಡ್‌ಗಳು ಆಕ್ರಮಣಕಾರಿ ವರದಿ ಮಾಡುವುದನ್ನು ನಿಲ್ಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement
ಬಲಪಂಥೀಯ ವಿಚಾರಗಳ ಧೋರಣೆ ಹೊಂದಿರುವ 31 ವರ್ಷದ ಆಶ್ಲೇ ಸೇಂಟ್ ಕ್ಲೇರ್ ಅವರಿಗೆ ಎಕ್ಸ್‌ನಲ್ಲಿ 10 ಲಕ್ಷ ಫಾಲೋವರ್ಸ್‌ಗಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಅಭಿಮಾನಿಯಾಗಿರುವ ಆಶ್ಲೇ ಟ್ರಂಪ್ ಅವರ MAGA ಕಾರ್ಯಕ್ರಮವನ್ನು ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಟಿವಿ ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸಿ ಟ್ರಂಪ್ ನಿರ್ಧಾರವನ್ನು ಸಮರ್ಥಿಸುತ್ತಿರುತ್ತಾರೆ. ಇದನ್ನೂ ಓದಿ: ಚಾಮರಾಜನಗರ| ಲವ್, ಸೆಕ್ಸ್, ದೋಖಾ – ಗಂಡನ ಬಿಟ್ಟು ಬಂದವಳ ಜೊತೆ ಲೈಂಗಿಕ ಸಂಪರ್ಕ; 3 ಬಾರಿ ಗರ್ಭಪಾತ
Advertisement
ಮಗು ಜನಿಸಿದ ಬಗ್ಗೆ ಮಸ್ಕ್ ಇಲ್ಲಿಯವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಆದರೆ ಮಗು ಜನಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪೋಸ್ಟ್‌ಗೆ ನಗುವ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.
😂
— Elon Musk (@elonmusk) February 15, 2025
5 ತಿಂಗಳ ಮಗು ಸೇರಿ ಮಸ್ಕ್ ಅವರು ಇಲ್ಲಿಯರೆಗೆ 13 ಮಕ್ಕಳ ತಂದೆಯಾಗಿದ್ದಾರೆ. ಮಸ್ಕ್‌ಗೆ ಮೂವರು ಮಹಿಳೆಯರೊಂದಿಗೆ ಸಂಬಂಧದಿಂದ 12 ಮಕ್ಕಳು ಜನಿಸಿದ್ದಾರೆ. ಮೊದಲ ಪತ್ನಿ ಜಸ್ಟಿನ್‌ಗೆ 6 ಮಕ್ಕಳು ಜನಿಸಿದ್ದರು. ಸಂಗೀತಗಾರ್ತಿ ಗ್ರೀಮ್ಸ್‌ಗೆ 3 ಮಕ್ಕಳು ಹುಟ್ಟಿದ್ದರೆ ಮಸ್ಕ್ ಅವರ ಕಂಪನಿಯಾದ ನ್ಯೂರಾಲಿಂಕ್ ಕಾರ್ಯಾಚರಣೆಗಳ ಮಾಜಿ ನಿರ್ದೇಶಕಿ ಶಿವೋನ್ ಜಿಲಿಸ್‌ಗೆ ಮೂರು ಮಕ್ಕಳಿದ್ದಾರೆ.
— Elon Musk (@elonmusk) January 7, 2025
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿ ಸಮಯದಲ್ಲಿ ಮಸ್ಕ್ ಮೂವರು ಮಕ್ಕಳನ್ನು ಕರೆದುಕೊಂಡು ಬಂದಿದ್ದರು.
ಜಾಗತಿಕ ತಾಪಮಾನ ಏರಿಕೆಗಿಂತ ಜನಸಂಖ್ಯಾ ಕುಸಿತವು ದೊಡ್ಡ ಅಪಾಯಕಾರಿ. ಜನನ ದರ ಕಡಿಮೆಯಾಗುವುದರಿಂದ ನಾಗರಿಕತೆಗೆ ಸಮಸ್ಯೆಯಾಗಲಿದೆ. ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರ ಸೇರಿದಂತೆ ಹಲವಾರು ಏಷ್ಯಾದ ದೇಶಗಳಲ್ಲಿ ಜನಸಂಖ್ಯೆ ಕುಸಿಯುತ್ತಿರುವುದಕ್ಕೆ ಮಸ್ಕ್ ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.
Population collapse due to low birth rates is a much bigger risk to civilization than global warming
— Elon Musk (@elonmusk) August 26, 2022
ಮಾನವೀಯತೆ ಬೆಳೆಯಲು, ಹೆಚ್ಚಿನ ಜನರು ಪೋಷಕರಾಗಲು ಮತ್ತು ಆದರ್ಶಪ್ರಾಯವಾಗಿ ಮೂರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ಹೆಚ್ಚಿನ ದೇಶಗಳಲ್ಲಿ ಜನಸಂಖ್ಯಾ ಕುಸಿತವು ಒಂದು ದುರಂತ. ವಯಸ್ಕ ಡೈಪರ್‌ಗಳ ಮಾರಾಟವು ಎಂದಿಗೂ ಮಗುವಿನ ಡೈಪರ್‌ಗಳ ಮಾರಾಟವನ್ನು ಮೀರಬಾರದು ಎಂದಿದ್ದರು.
ಈ ಹಿಂದೆ ಮಾಧ್ಯಮವೊಂದು ಮಸ್ಕ್ ಅವರು ತಮ್ಮ ಸ್ವಂತ ವೀರ್ಯವನ್ನು ಸ್ನೇಹಿತರು ಮತ್ತು ಪರಿಚಯಸ್ಥರಿಗೆ ನೀಡಿದ್ದಾರೆ ಎಂದು ವರದಿ ಮಾಡಿತ್ತು.