ವಾಷಿಂಗ್ಟನ್: ಟೆಸ್ಲಾ (Tesla) ಮುಖ್ಯಸ್ಥ ಹಾಗೂ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ (Elon Musk) ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ವಿಷಯ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
Advertisement
87.7 ಮಿಲಿಯನ್ ಫಾಲೋವರ್ಸ್ಗಳನ್ನ ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ (Twitter) ಅತಿ ಹೆಚ್ಚು ಫಾಲೋ ಮಾಡುತ್ತಿರುವ ವಿಶ್ವ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇದೀಗ ಮೋದಿಯನ್ನು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಫಾಲೋ ಮಾಡುತ್ತಿದ್ದಾರೆ. ಇದನ್ನೂಓದಿ: ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್
Advertisement
Elon Musk is now following Narendra Modi (@narendramodi)
— ELON ALERTS (@elon_alerts) April 10, 2023
Advertisement
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಕೇವಲ 195 ಜನರನ್ನ ಮಾತ್ರ ಫಾಲೋ ಮಾಡುತ್ತಿರುವ ಎಲೋನ್ ಮಸ್ಕ್ 134.3 ಮಿಲಿಯನ್ ಫಾಲೋವರ್ಸ್ಗಳನ್ನ ಹೊಂದಿದ್ದಾರೆ. ಮಾರ್ಚ್ ಕೊನೆಯಲ್ಲಿ ಮಸ್ಕ್, ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನ ಹಿಂದಿಕ್ಕಿ ಹೆಚ್ಚು ಫಾಲೋವರ್ಸ್ಗಳನ್ನ ಹೊಂದಿದವರು ಎನಿಸಿಕೊಂಡಿದ್ದರು. ಇದೀಗ 87.7 ಮಿಲಿಯನ್ ಫಾಲೋವರ್ಸ್ಗಳನ್ನ ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವ ಪ್ರಭಾವಿಗಳಲ್ಲಿ ಎಲೋನ್ ಮಸ್ಕ್ ಒಬ್ಬರಾಗಿದ್ದಾರೆ.
Advertisement
ಈ ವಿಚಾರ ಇದೀಗ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಕೆಲವರು ಮಸ್ಕ್ ಮೋದಿಯನ್ನ ಫಾಲೋ ಮಾಡಲು ಕಾರಣವೇನು ಎಂದು ಪ್ರಶ್ನಿಸಿದ್ದು, ಮಸ್ಕ್, ಮೋದಿಯನ್ನ ಫಾಲೋ ಮಾಡ್ತಿದ್ದಾರೆ ಅಂದ್ರೆ ಶೀಘ್ರದಲ್ಲೇ ಟೆಸ್ಲಾ ಭಾರತಕ್ಕೆ ಬರುತ್ತೆ ಎಂದರ್ಥ ಎಂದು ಮತ್ತೊಬ್ಬರು ಟಾಂಗ್ ಕೊಟ್ಟಿದ್ದಾರೆ. ಇದನ್ನೂಓದಿ: ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ಅಮಿತ್ ಶಾ