‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟದಲ್ಲಿ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ ಬಿಗ್ ಬಾಸ್. ಮನೆಯ ಸ್ಟ್ರಾಂಗ್ ಸ್ಪರ್ಧಿ ತ್ರಿವಿಕ್ರಮ್ ಹೊರನಡೆದಿರುವ ಹೈಡ್ರಾಮಾ ನಡೆದಿದೆ. ತ್ರಿವಿಕ್ರಮ್ (Trivikram) ನಿಜಕ್ಕೂ ಎಲಿಮಿನೇಟ್ ಆದರು ಎಂದು ಭಾವಿಸಿದ ಭವ್ಯಾ (Bhavya Gowda) ಅವರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಕಿಚ್ಚ
ಈ ವಾರ ಯಾವುದೇ ವೋಟಿಂಗ್ ಲೈನ್ ತೆರೆದಿರಲಿಲ್ಲ. ಆದರೂ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಅಂತಿಮವಾಗಿ ತ್ರಿವಿಕ್ರಮ್ ಅವರು ದೊಡ್ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ಸುದೀಪ್ ಘೋಷಣೆ ಮಾಡಿದರು. ನಿಮಗೆ ನನ್ನ ಜೊತೆ ಬಂದು ಸೇರಲು ಐದು ನಿಮಿಷ ಕಾಲಾವಕಾಶ ಇದೆ ಎಂದರು. ಎಲ್ಲರೂ ಇದು ಪ್ರ‍್ಯಾಂಕ್ ಇರಬಹುದು ಎಂದುಕೊಂಡಿದ್ದರು. ತ್ರಿವಿಕ್ರಮ್ ಕೂಡ ಹಾಗೆಯೇ ಅಂದುಕೊಂಡಂತೆ ಇತ್ತು. ಆದರೆ, ಹಾಗಾಗಲಿಲ್ಲ.
ಮನೆಯ ಗಾರ್ಡನ್ ಏರಿಯಾಗೆ ಬರುತ್ತಿದ್ದಂತೆ ಮುಖ್ಯದ್ವಾರ ಓಪನ್ ಆಯಿತು. ಆದರಿಂದ ಹೊರಕ್ಕೆ ಹೋದರು. ಆಗ ಭವ್ಯಾ ಗೌಡ ಅವರು ಅಳೋಕೆ ಆರಂಭಿಸಿದರು. ತ್ರಿವಿಕ್ರಮ್ ಎಲಿಮಿನೇಷನ್ ಶಾಕ್ ಆಗಿದೆ. ಗೆಲ್ಲಬೇಕಿದ್ದ ಸ್ಪರ್ಧಿ ಈ ರೀತಿ ಎಲಿಮಿನೇಟ್ ಆದರಲ್ಲ ಎಂದು ಎಲ್ಲರೂ ಶಾಕ್ ಆದರು. ಈ ಬಗ್ಗೆ ದೊಡ್ಮನೆ ಒಳಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇಂದಿನ ಸಂಚಿಕೆಯಲ್ಲಿ ತ್ರಿವಿಕ್ರಮ್ ಮರಳಿ ದೊಡ್ಮನೆ ಸೇರಲಿದ್ದಾರೆ.
ಈ ವಾರ ತ್ರಿವಿಕ್ರಮ್‌ರನ್ನು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ತಮ್ಮ ತಂಡದವರನ್ನು ಉಳಿಸಲು ಹೋಗಿ ಅವರು ಈ ರೀತಿ ಮಾಡಿದ್ದರು. ಈ ಬಗ್ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ, ತ್ರಿವಿಕ್ರಮ್‌ಗೆ ತಾವು ಇದ್ದೇ ಇರುತ್ತೇವೆ ಎನ್ನುವ ಓವರ್ ಕಾನ್ಫಿಡೆನ್ಸ್ ಇತ್ತು. ಅದನ್ನು ಬ್ರೇಕ್ ಮಾಡಬೇಕು ಎನ್ನುವ ಕಾರಣಕ್ಕೆ ಈ ವಾರ ಎಲಿಮಿನೇಷನ್ ಡ್ರಾಮಾ ಮಾಡಲಾಗಿದೆ.
ಭಾನುವಾರದ ಸಂಚಿಕೆಯನ್ನು ಸೋಮವಾರದವರೆಗೂ ಮುಂದುವರಿದೆ. ಅದರ ಪ್ರೋಮೋವನ್ನು ಕೂಡ ತೋರಿಸಲಾಗಿದೆ. ಸುದೀಪ್ ಅವರು, ಎಷ್ಟು ಮಂದಿಗೆ ತ್ರಿವಿಕ್ರಮ್ ಅವರು ಹೋಗಿದ್ದು ಅಚ್ಚರಿ ಮೂಡಿಸಿದೆ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಅದರರ್ಥ ಸೋಮವಾರದ ಸಂಚಿಕೆಯಲ್ಲಿ ಸುದೀಪ್ ಅವರು ಒಂದಷ್ಟು ಕ್ಲಾಸ್ ತೆಗೆದುಕೊಂಡ ಬಳಿಕ, ಪುನಃ ತ್ರಿವಿಕ್ರಮ್‌ರನ್ನು ವಾಪಸ್ ಮನೆಯೊಳಗೆ ಕಳಿಸುವ ಸಾಧ್ಯತೆ ಇದೆ. ಅಲ್ಲಿವರೆಗೂ ಕಾದುನೋಡಬೇಕು.