ಬ್ಯಾಂಕಾಕ್: ಆನೆಗಳು ಅಸಾಧಾರಣವಾದ ಬುದ್ಧಿವಂತ ಪ್ರಾಣಿಗಳಾಗಿದ್ದು, ಅವುಗಳಿಗೂ ಭಾವನೆಗಳಿವೆ ಎಂದು ಈ ವೀಡಿಯೋ ನೋಡಿದರೆ ಅರ್ಥವಾಗುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.
ಟ್ವಿಟ್ಟರ್ ನಲ್ಲಿ ಬ್ಯುಟೆಂಗೆಬೀಡೆನ್ ಅವರು ವೀಡಿಯೋವನ್ನು ಹಂಚಿಕೊಂಡಿದ್ದು, ಆನೆಗಳು 14 ತಿಂಗಳ ನಂತರ ತಮ್ಮ ಪಾಲಕರೊಂದಿಗೆ ಮತ್ತೆ ಒಂದಾಗುತ್ತಿವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಈ ಭಾವನಾತ್ಮಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
Advertisement
ಈ ಘಟನೆಯು ಥೈಲ್ಯಾಂಡ್‍ನ ಎಲಿಫೆಂಟ್ ನೇಚರ್ ಪಾರ್ಕ್‍ನಲ್ಲಿ ನಡೆದಿದ್ದು, ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ವಿಶೇಷ ಬಾಂಧವ್ಯವನ್ನು ಬಿಂಬಿಸುವ ಈ ಹೃದಯಸ್ಪರ್ಶಿ ವೀಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕವಾಗಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ನನಗೆ ಮೂರು ಬಾರಿ ಕಚ್ಚಿತು : ಹಾವು ಕಡಿತದ ಬಗ್ಗೆ ವಿವರಿಸಿದ ಸಲ್ಲು
Advertisement
Elephants reunite with their caretaker after 14 months..
Sound on pic.twitter.com/wSlnqyuTca
— Buitengebieden (@buitengebieden_) December 23, 2021
Advertisement
ವೀಡಿಯೋದಲ್ಲಿ, ಥಾಯ್ಲೆಂಡ್‍ನ ಅಭಯಾರಣ್ಯದಲ್ಲಿ ಆನೆಗಳ ಹಿಂಡು 14 ತಿಂಗಳ ನಂತರ ಹಿಂತಿರುಗಿದ್ದು, ಆನೆಗಳನ್ನು ಪಾಲಕ ಡೆರಕ್ ಥಾಂಪ್ಸನ್ ಸಂತೋಷದಿಂದ ಸ್ವಾಗತಿಸುತ್ತಾನೆ. ಆಗ ಎಲ್ಲ ಆನೆಗಳು ಅವನ ಸುತ್ತ ಬಂದು ನಿಂತುಕೊಳ್ಳುತ್ತವೆ. ಆಗ ಥಾಂಪ್ಸನ್ ಅವುಗಳನ್ನು ಅಪ್ಪಿಕೊಳ್ಳುತ್ತಾನೆ. ಆನೆಗಳು ಥಾಂಪ್ಸನ್ ನನ್ನು ತಮ್ಮ ಸೊಂಡಿಲಿನಿಂದ ಅಪ್ಪಿಕೊಂಡು ಅವುಗಳ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಈ ವೀಡಿಯೋ ನೋಡಿದರೆ ಮನುಷ್ಯ ಮತ್ತೆ ಪ್ರಾಣಿಗಳ ನಡುವೆ ಯಾವ ರೀತಿಯ ಬಾಂಧವ್ಯವಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತೆ.
ವೀಡಿಯೋ ನೋಡಿದ ನೆಟ್ಟಿಗರು, ಪ್ರೀತಿಯು ಸಾರ್ವತ್ರಿಕ ಭಾವನೆಯಾಗಿದೆ. ಪ್ರೀತಿ ಮಾಡುವುದನ್ನು ನಾವು ಪ್ರಾಣಿಗಳಿಂದ ಕಲಿಯಬೇಕು ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು, ದೇವರ ಅತ್ಯಂತ ಅದ್ಭುತ ಸೃಷ್ಟಿ ಎಂದರೆ ವನ್ಯಜೀವಿಗಳು. ನಾನು ಚಿಕ್ಕಂದಿನಿಂದಲೂ ಆನೆಗಳನ್ನು ಪ್ರೀತಿಸುತ್ತೇನೆ. ನಾನು ಪ್ರತಿ ಬಾರಿ ಆನೆಗಳ ವೀಡಿಯೋವನ್ನು ನೋಡುತ್ತೇನೆ. ಅದರಿಂದ ನನಗೆ ಶಾಂತಿ ಸಿಗುತ್ತೆ ಎಂದು ಕಮೆಂಟ್ ಮಾಡಿದ್ದಾರೆ.