ಹೆದ್ದಾರಿಯಲ್ಲಿ ಗಜಪಡೆ ಹಾವಳಿ – ಕಾರಿನ ಮೇಲೆ ದಾಳಿ, ಚಾಲಕ ಜಸ್ಟ್ ಮಿಸ್

Advertisements

ಚಾಮರಾಜನಗರ: ಹೆದ್ದಾರಿ ನಡುವೆ ಆನೆಗಳು ಗುಂಪುಗಟ್ಟಿ ಪ್ರಯಾಣಿಕರಿಗೆ ತೊಂದರೆ ಕೊಟ್ಟಿವೆ. ವಾಹನಗಳನ್ನು ಜಖಂ ಗೊಳಿಸಿದ್ದು, ಚಾಲಕನೊಬ್ಬ ಪಾರಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಗಡಿ ಭಾಗವಾದ ಹಾಸನೂರಿನ ಬಳಿ ಘಟನೆ ನಡೆದಿದ್ದು, ತಮಿಳುನಾಡಿನ ಡಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಆನೆಗಳು ಪುಂಡಾಟ ನಡೆಸಿವೆ. ಮರಿಯಾನೆಯೊಂದಿಗೆ ಹೆದ್ದಾರಿಗೆ ಬಂದಿದ್ದ ಆನೆಗಳು ವಾಹನಗಳನ್ನು ಅಡ್ಡಗಟ್ಟಿವೆ. ಬಳಿಕ ವಾಹನಗಳನ್ನು ಜಖಂ ಗೊಳಿಸಿವೆ. ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಹಡಗು ಮುಳುಗಡೆ – ತೈಲ ಸೋರಿಕೆ ಆತಂಕದಲ್ಲಿ ದ.ಕ ಜಿಲ್ಲಾಡಳಿತ ಅಲರ್ಟ್

Advertisements

ಆನೆಗಳು ಬರುತ್ತಿದ್ದರೂ ಭಯವಿಲ್ಲದೆ ಕಾರು ಚಾಲಕ ಮುಂದಕ್ಕೆ ಸಾಗುತ್ತಿದ್ದಾಗ ಆನೆ ಅಡ್ಡಗಟ್ಟಿದೆ. ಆನೆ ದಾಳಿ ಮಾಡುವ ಆತಂಕದಿಂದ ಚಾಲಕ ಕಾರಿನಿಂದ ಕೆಳಗಿಳಿದು ಓಡಿ ಹೋಗಿದ್ದಾನೆ. ಆತ ಓಡಿ ಹೋಗುತ್ತಿದ್ದಂತೆ ಆನೆ ಕಾರಿನ ಮೇಲೆ ದಾಳಿ ನಡೆಸಿದೆ. ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಪತ್ನಿ ನಗರಸಭೆ ಅಧ್ಯಕ್ಷೆ – ಆದ್ರೆ ಗಂಡನದ್ದೇ ದರ್ಬಾರ್

ಆನೆಗಳು ಹೆದ್ದಾರಿ ಬಳಿ ಬಂದು ಪ್ರಯಾಣಿಕರಿಗೆ ಕಿರಿಕಿರಿ ಮಾಡುತ್ತಿರುವ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಈ ಹಿಂದೆ ಕೂಡ ಬಸ್ ಹಾಗೂ ಲಾರಿಗಳ ಮೇಲೆ ದಾಳಿ ಮಾಡಿದ್ದವು. ವಾಹನ ಸವಾರರು ಆನೆಗಳಿಗೆ ಕೀಟಲೆ ಕೊಡುತ್ತಿರುವುದರಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಿವೆ ಎನ್ನಲಾಗುತ್ತಿದೆ.

Live Tv

Advertisements
Advertisements
Exit mobile version