ChamarajanagarDistrictsKarnatakaLatestLeading NewsMain Post

ಚಾಮರಾಜನಗರದಲ್ಲಿ ಪತ್ನಿ ನಗರಸಭೆ ಅಧ್ಯಕ್ಷೆ – ಆದ್ರೆ ಗಂಡನದ್ದೇ ದರ್ಬಾರ್

- ಪತಿ ಗ್ರೀನ್ ಸಿಗ್ನಲ್ ಕೊಟ್ಟರಷ್ಟೇ ಬಿಲ್ ಪಾವತಿ

Advertisements

ಚಾಮರಾಜನಗರ: ಇಲ್ಲಿನ ನಗರಸಭೆಯಲ್ಲಿ ಪತ್ನಿ ಅಧ್ಯಕ್ಷೆಯಾಗಿದ್ದರೂ ಪತಿಯದ್ದೇ ದರ್ಬಾರ್ ಜೋರಾಗಿದೆ. ಪತ್ನಿ ಅಧಿಕಾರದಲ್ಲಿದ್ದರೂ ಯಾವುದೇ ಬಿಲ್‌ಗಳಿದ್ದರೂ ಪತಿಯಿಂದಲೇ ಅನುಮತಿ ಪಡೆಯಬೇಕಿದೆ. ಅಧ್ಯಕ್ಷೆಯ ಪತಿ ಗ್ರೀನ್ ಸಿಗ್ನಲ್ ಕೊಟ್ಟರಷ್ಟೇ ಬಿಲ್ ಪಾವತಿಗೆ ಸಹಿ ಆಗುತ್ತದೆ.

ಚಾಮರಾಜನಗರ ನಗರಸಭಾಧ್ಯಕ್ಷೆ ಆಶಾ ಅವರ ಪತಿ ನಟರಾಜು ಪತ್ನಿಯ ಹೆಸರಲ್ಲಿ ಕಚೇರಿಯಲ್ಲಿ ದರ್ಬಾರ್ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ನಗರ ಸಭೆ ಸದಸ್ಯರಿಂದಲೂ ಆರೋಪ ಕೇಳಿಬಂದಿದೆ. ಇದನ್ನೂ ಓದಿ: 819 ಕೋಟಿ ವಂಚಿಸಿದ್ರಾ ಮಾಜಿ ಸಚಿವ..? – ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಗಂಭೀರ ಆರೋಪ

ಕಾಮಗಾರಿ ಬಿಲ್ ಪಾವತಿ ಕಡತಕ್ಕೆ ಸಹಿ ಹಾಕಬೇಕಾದರೆ ಗುತ್ತಿಗೆದಾರರು ಮೊದಲು ಅಧ್ಯಕ್ಷೆಯ ಪತಿಯ ಬಳಿ ಹೋಗಬೇಕಂತೆ, ಪತಿ ಗ್ರೀನ್ ಸಿಗ್ನಲ್ ಕೊಟ್ಟರಷ್ಟೇ ಬಿಲ್ ಪಾವತಿಗೆ ಸಹಿ ಆಗುತ್ತದೆ ಎನ್ನುವ ದೂರು ಕೇಳಿಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಹಾಗೂ ನಗರಸಭಾಧ್ಯಕ್ಷೆಯ ಪತಿ ನಡುವೆ ಕಚೇರಿಯಲ್ಲಿ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಹರಿದಾಡಿದೆ.  ಇದನ್ನೂ ಓದಿ: ಸರ್ಜರಿಗಾಗಿ ಸುನೀಲ್ ಶೆಟ್ಟಿ ಪುತ್ರಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟಿಗ ಕೆ.ಎಲ್ ರಾಹುಲ್

ನಗರಸಭೆ ಅಧ್ಯಕ್ಷೆಯ ಪತಿ ನನ್ನ ಬಳಿ ಬಂದು ಮಾತನಾಡಿದ್ದೀರಾ? ಚರ್ಚೆ ಮಾಡಿದ್ದೀರಾ? ಎಂದು ಹೇಳುವ ಫೋನ್ ಸಂಭಾಷಣೆಯ ಆಡಿಯೋ ಸಹ ವೈರಲ್ ಆಗಿದೆ.

ಆಡಿಯೋನಲ್ಲಿ ಏನಿದೆ?

ಗುತ್ತಿಗೆದಾರ: ಸರ್ ನಮಸ್ತೆ ನಾನು ಅಭಿಷೇಕ್ ಮಾತಾಡ್ತಾ ಇರೋದು
ನಗರಸಭೆ ಅಧ್ಯಕ್ಷೆ ಪತಿ: ಯಾರೇಳಿ?

ಗುತ್ತಿಗೆದಾರ: ನಾನು ಅಭಿಷೇಕ್ ಅದೇ ಗ್ರಾಹಕರ ವೇದಿಕೆ ಕಂಪೌಂಡ್ ವಾಲ್ ನಿರ್ಮಾಣ ಮಾಡಿದ್ವಲ್ವ ಹೇಳಿ ಸರ್ ಅದೇ ಬಿಲ್ ಗೆ ಬಂದಿದ್ದೇ ಮೇಡಂಗೆ ಫೋನ್ ಮಾಡಿದ್ದೆ
ನಗರಸಭೆ ಅಧ್ಯಕ್ಷೆ ಪತಿ: ಯಾರು ಅಂತಾನೆ ನೋಡಿಲ್ಲ ನಿಮ್ ಮುಖಾನೆ ನೋಡಿಲ್ಲ ಫೈಲ್ ಕೊಟ್ಬಿಟ್ರೆ ಬಂದುಬಿಡುತ್ತಾ ಏನಂತ ತಿಳ್ಕಂಡಿದ್ದೀರಾ ಇದನ್ನ

ನಗರಸಭೆ ಅಧ್ಯಕ್ಷೆ ಪತಿ: ನಮ್ಮತ್ರ ಬಂದು ಮಾತಾಡಿದ್ರೇನ್ರಿ ಆ ವಿಷಯನಾ ಚರ್ಚೆ ಮಾಡಿದ್ದೀರೇನ್ರಿ
ಗುತ್ತಿಗೆದಾರ: ಸರ್ ಮೇಡಂ ಅವರತ್ರ ಮಾತಾನಾಡಿದ್ದೇನೆ

ನಗರಸಭೆ ಅಧ್ಯಕ್ಷೆ ಪತಿ: ಮೇಡಂ ಅವರತ್ರ ಎನ್ ಮಾತಾಡಿದ್ದೀರಾ
ಗುತ್ತಿಗೆದಾರ: ಈ ತರ ವರ್ಕ್ ಮಾಡಿದ್ದೇವೆ ಎಲ್ಲಾ ಮಾಡಿದ್ದೇವೆ ಅಂತ ಮಾತನಾಡಿದ್ದೇನೆ

ನಗರಸಭೆ ಅಧ್ಯಕ್ಷೆ ಪತಿ: ಅಲ್ಲ ಫಸ್ಟೇ.. ಸ್ಟಾರ್ಟಿಂಗ್ ನಲ್ಲಿ ಫೋನ್ ಮಾಡ್ದಾಗ ಮಾಡ್ಬೇಡಿ ಅಂತ ಹೇಳ್ದೆ ತಾನೆ.. ಏನ್ ಹಾಗಿದ್ದರೆ ನಿಮ್ಮದೇ ಅಂತಿಮ ಡಿಸೈಡಾ? ಎಲ್ಲಾ ಕೆಲಸಗಳು, ನೀವೇಳಿದ್ದಕ್ಕೆಲ್ಲಾ ಸೈನ್ ಹಾಕಿಕೊಂಡು ಕೂತಿರೋದಾ?
ಗುತ್ತಿಗೆದಾರ: ಓಕೆ ಓಕೆ ನೀವೇಳಿದ್ದಕ್ಕೆ ನಾನು ರೆಸ್ಪಾನ್ಸ್ ಮಾಡ್ದೆ, ಟೆಂಡರ್ ನಮ್ಮ ಹೆಸರಿಗೆ ಆಗಿದೆ ಅಗ್ರಿಮೆಂಟ್ ಆದ ಮೇಲೆ ಮಾಡ್ಬೇಡಿ ಅಂದರೆ ಯಾವ್ ರೀತಿ?

ನಗರಸಭೆ ಅಧ್ಯಕ್ಷೆ ಪತಿ: ಯಾವುದು?
ಗುತ್ತಿಗೆದಾರ: ಗ್ರಾಹಕರ ವೇದಿಕೆದು

ನಗರಸಭೆ ಅಧ್ಯಕ್ಷೆ ಪತಿ: ಅಗ್ರಿಮೆಂಟ್ ಆಗಬೇಕಾದರೆ ಅಧ್ಯಕ್ಷರ ಸೈನ್ ಇರಬೇಕು ಅನ್ನೋದು ಗೊತ್ತಲ್ವಾ?
ಗುತ್ತಿಗೆದಾರ: ಆಗಿದೆಯಲ್ಲಾ ಸರ್ ಅಗ್ರಿಮೆಂಟ್ ಗೆ

ನಗರಸಭೆ ಅಧ್ಯಕ್ಷೆ ಪತಿ: ಯಾವುದಕ್ಕೆ ಆಗಿದೆ?
ಗುತ್ತಿಗೆದಾರ: ಗ್ರಾಹಕರ ವೇದಿಕೆಯದ್ದಕ್ಕೆ, ಸೈನ್ ಆಗದೆ ಹೇಗೆ ಟೆಂಡರ್ ಕಾಲ್ ಆಯ್ತು, ಅಗ್ರೆಮೆಂಟ್ ಎಲ್ಲಾ ಹೆಂಗಾಯ್ತು ಸರ್

ನಗರಸಭೆ ಅಧ್ಯಕ್ಷೆ ಪತಿ: ನಾನು ನಗರಸಭೆಯಲ್ಲಿ ಕೊಡ್ಲೇ ಬೇಡಿ ಅಂತ ಹೇಳಿದ್ದೇನೆ, ಯಾವ ರೀತಿ ಸೈನ್ ಮಾಡ್ಸಿದ್ದಾರೆ ಹಂಗಾದ್ರೆ,
ಗುತ್ತಿಗೆದಾರ: ನನಗೊತ್ತಿಲ್ ಸರ್ ಅದು ಏನು ಅಂತ ಅನ್ನಿಟ್ಟು

ನಗರಸಭೆ ಅಧ್ಯಕ್ಷೆ ಪತಿ: ಬರ್ತೀನಿ ಬಿಡಿ ನಾಳೆ ಬಂದ ಮಾತಾಡ್ತೀನಿ
ಗುತ್ತಿಗೆದಾರ: ಅಲ್ಲಾ ಸರ್ ನಾವು ಕೆಲಸ ಮಾಡ್ಬಿಟ್ಟು, ಈಗ ಕೊಡಬೇಡಿ ಮಾಡ್ಬೇಡಿ ಅಂದರೆ ಏನ್ ಮಾಡ್ಬೇಕು ನಾವು

ನಗರಸಭೆ ಅಧ್ಯಕ್ಷೆ ಪತಿ: ಆ ಫೈಲನ್ನ ನೀವು ಹೇಳಿದ ತಕ್ಷಣ ಕೊಟ್ಟು ಕಳಿಸಿಬಿಡಕ್ಕೆ ನಿಮ್ಮತ್ರ ಕಾಯ್ಕಂಡ್ ನಿಂತಿರಬೇಕಾ ನಾನು ಫೈಲ್ ತಗೊಂಡು ಬಂದಿದ್ದೀರಾ ನೀವು?
ಗುತ್ತಿಗೆದಾರ: ಸರ್ ಬಂದಿದ್ವಲ್ಲಾ ಸರ್ ಆವತ್ತು ಮನೆ ಹತ್ರಕ್ಕು. ಮೇಡಂ ಅವ್ರು ಇದ್ದರು.
ನಗರಸಭೆ ಅಧ್ಯಕ್ಷೆ ಪತಿ: ಯಾವಾಗ?

ಗುತ್ತಿಗೆದಾರ: ಆವತ್ತು ಆರಾಧ್ಯ ಸರ್ ಜೊತೆ ಈಗೊಂದು ಫಿಫ್ಟೀನ್ ಡೇಸ್ ಬ್ಯಾಕ್ ಬಂದಿದ್ವಿ, ಮೇಡಂ ಹತ್ರನಾ ಮಾತನಾಡಿದ್ದೇನೆ
ನಗರಸಭೆ ಅಧ್ಯಕ್ಷೆ ಪತಿ: ಹ್ಙಾಂ.. ಮಾತಾಡಿ ಮೇಡಂ ಹತ್ರ ಫೋನ್ ಮಾಡಿ
ಗುತ್ತಿಗೆದಾರ: ಓಕೆ.. ಓಕೆ..

Live Tv

Leave a Reply

Your email address will not be published.

Back to top button