ಚಾಮರಾಜನಗರ: ಆಹಾರ ಅರಸಿ ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳಸಿದ್ದ ಆನೆಯೊಂದು ಕಬ್ಬಿಣದ ಕಂಬಿಯಡಿ ಸಿಲುಕಿದ್ದು, ಇದೀಗ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕಾಡಿನಿಂದ ಪ್ರಾಣಿಗಳು ನಾಡಿನತ್ತ ಬರಬಾರದೆಂದು ಕಾಡಿನಂಚಿನಲ್ಲಿ ಕಬ್ಬಿಣದ ಕಂಬಿಗಳನ್ನು ಅರಣ್ಯ ಇಲಾಖೆ ಅಳವಡಿಸಿತ್ತು. ಆದ್ರೆ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಆನೆಯೊಂದು ಕಾಡಿನಿಂದ ಆಚೆ ಬರಲು ಪ್ರಯತ್ನಿಸಿ ಕಬ್ಬಿಣದ ಕಂಬಿಯಲ್ಲಿ ಸಿಲುಕೊಂಡಿದ್ದ ದೃಶ್ಯ ವೈರಲ್ ಆಗಿತ್ತು.
Advertisement
Advertisement
ಇದನ್ನೂ ಓದಿ: ಬಂಡೀಪುರದಲ್ಲಿ ಕಬ್ಬಿಣದ ಕಂಬಿಗಳನ್ನು ದಾಟಿ ಆನೆ ನಾಡಿಗೆ ಬರೋದನ್ನು ನೋಡಿ
Advertisement
ಆನೆ ಕಾಡಿನಿಂದ ಆಚೆ ಬರಲು ಪ್ರಯತ್ನಿಸಿ ಕಂಬಿಯ ಬೇಲಿಯ ಕೆಳಗೆ ಸಿಲುಕಿ ನರಳಾಡುತ್ತಿತ್ತು. ಈ ವೇಳೆ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಗಮನಿಸಿ ಆನೆಯನ್ನು ರಕ್ಷಣೆ ಮಾಡಿದ್ದಾರೆ.
Advertisement
ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕಾಡು ಪ್ರಾಣಿಗಳು ಆಹಾರಕ್ಕಾಗಿ ನಾಡಿನತ್ತ ಪ್ರಯಾಣ ಬೆಳಸಿ ಜೀವವನ್ನು ಕಳೆದುಕೊಳ್ಳುತ್ತಿವೆ. ಆನೆಗಳು ನಾಡಿಗೆ ಬಾರದಂತೆ ಸೋಲಾರ್ ಬೇಲಿ, ಕಂದಕ, ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದೆ. ಆದ್ರೆ ಆನೆಗಳು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ತಮ್ಮದೇ ಮತ್ತೊಂದು ದಾರಿಯನ್ನು ಹುಡುಕುತ್ತಿವೆ.
ಇದನ್ನೂ ಓದಿ: ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಆನೆಯ ರಕ್ಷಣೆ