ರಾಯಪುರ: ಆನೆಗಳು ಬುದ್ಧಿವಂತ ಪ್ರಾಣಿಗಳು ಎಂದು ಹೇಳಲಾಗುತ್ತದೆ. ಇದೀಗ ಕೇವಲ ಒಂದು ರಸ್ತೆ ದಾಟಲು ದೊಡ್ಡ ಗುಂಪು ರಚಿಸಿಕೊಳ್ಳುವ ಮೂಲಕ ಆನೆಗಳು ಜಾಣ್ಮೆಯನ್ನು ಪ್ರದರ್ಶಿಸಿವೆ.
ಛತ್ತಿಸ್‍ಗಢದ ಕೋಬ್ರಾ ಜಿಲ್ಲೆಯ ಹಸ್ಡಿಯೋ ಅರಾಂಡ್ ಪ್ರದೇಶದಲ್ಲಿ ಆನೆಯ ಬೃಹತ್ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಟ್ವಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆನೆಗಳ ಬೃಹತ್ ಹಿಂಡು ಶಿಸ್ತುಬದ್ಧವಾಗಿ ಹೇಗೆ ರಸ್ತೆ ದಾಟುತ್ತಿವೆ, ಇದಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
Advertisement
This video shows how #elephant herds cross through infrastructure. See how they have made a compact group. Led by strong members. All just to cross a small road. Have witnessed many such scenes. Video is from Hasdeo Arand region of Korba district, sent earlier by a friend. pic.twitter.com/xuYHBRCQ5L
— Parveen Kaswan, IFS (@ParveenKaswan) December 11, 2019
Advertisement
ಮೂಲ ಸೌಕರ್ಯಗಳನ್ನು ಬಳಸಿಕೊಂಡು ಆನೆಗಳು ಹೇಗೆ ರಸ್ತೆ ಮೂಲಕ ಹಾದು ಹೋಗುತ್ತವೆ ಎಂಬುದಕ್ಕೆ ಇದು ಉದಾಹರಣೆ. ಬಲಿಷ್ಟ ಸದಸ್ಯರನ್ನು ಹೊಂದಿದ ಆನೆಗಳು ಹೇಗೆ ಶಿಸ್ತಿನ ಗುಂಪು ರಚಿಸಿಕೊಂಡಿವೆ ನೋಡಿ. ಇದೆಲ್ಲ ಕೇವಲ ರಸ್ತೆ ದಾಟಲು ಮಾತ್ರ. ಇಂತಹ ದೃಶ್ಯಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಛತ್ತಿಸ್‍ಗಢದ ಕೋಬ್ರಾ ಜಿಲ್ಲೆಯ ಹಸ್ಡಿಯೋ ಅರಾಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತರೊಬ್ಬರು ಕಳುಹಿಸಿದ್ದರು ಎಂದು ಪೋಸ್ಟ್ ಮಾಡಿದ್ದಾರೆ.
Advertisement
ವಿಡಿಯೋದಲ್ಲಿ ಆನೆಗಳು ದೊಡ್ಡ ಗುಂಪು ರಚಿಸಿಕೊಂಡು ರಸ್ತೆ ದಾಟುತ್ತಿದ್ದು, ಬೃಹತ್ ಆನೆಗಳು ಆ ಗುಂಪನ್ನು ಮುನ್ನಡೆಸುತ್ತಿವೆ. ಆನೆಗಳ ಒಗ್ಗಟ್ಟು ಹಾಗೂ ನಾಯಕತ್ವ ಗುಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಇನ್ನೂ ಕೆಲವರು ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ಮಾನವರು ಹೇಗೆ ಅತಿಕ್ರಮಣ ಮಾಡಿಕೊಂಡಿದ್ದೇವೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
What beauty! What discipline! What harmony. A treat to eyes.
— Dr. Namita Nagpal (@namitanagpal18) December 11, 2019
ಮಾನವರು ವಿಶ್ವವನ್ನು ನರಕ ಮಾಡಿದ್ದಾರೆ. ಇದೀಗ ದೈತ್ಯರಾದ ನಾವು ಮರಳಿದ್ದೇವೆ, ಅವರ ಮನೆ ಹಾಗೂ ಅಭಿವೃದ್ಧಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಆನೆಗಳು ಹೇಳಿದಂತಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಎಂತಹ ಸೌಂದರ್ಯ, ಶಿಸ್ತು, ನೋಡಲು ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.