ರಾಮನಗರ: ಪದೇ ಪದೇ ರೈತರ ಬೆಳೆಗಳನ್ನು ನಾಶ ಮಾಡುತ್ತಿದ್ದ ಕಾಡಾನೆಗಳ ಸೆರೆಗೆ ದುಬಾರೆ ಆನೆ ಬಿಡಾರದಿಂದ ಚನ್ನಪಟ್ಟಣಕ್ಕೆ ದಸರಾ ಆನೆಗಳನ್ನು ಕರೆತರಲಾಗಿದೆ.
ಚನ್ನಪಟ್ಟಣ ತಾಲೂಕಿನ ಬಿವಿ ಹಳ್ಳಿ, ಅರಳಾಳುಸಂದ್ರ, ಕಾಡನಕುಪ್ಪೆ, ತೆಂಗಿನಕಲ್ಲು ಸೇರಿದಂತೆ 10 ಹಳ್ಳಿಗಳಲ್ಲಿ ಕಾಡಾನೆಗಳ ಹಾವಳಿ ಜೋರಾಗಿರುವ ಹಿನ್ನೆಲೆಯಲ್ಲಿ ಕೊಡಗಿನ ದುಬಾರೆ ಆನೆ ಕ್ಯಾಂಪಿನಲ್ಲಿರುವ ದಸರಾ ಆನೆಗಳಾದ ಅರ್ಜುನ, ದ್ರೋಣ, ಅಭಿಮನ್ಯು, ಹರ್ಷ, ಸೇರಿದಂತೆ ಐದು ಸಾಕಾನೆಗಳನ್ನು ಕರೆತರಲಾಗಿದೆ.
Advertisement
Advertisement
ತೆಂಗಿನಕಲ್ಲು, ಕಬ್ಬಾಳು ಹಾಗೂ ಮುತ್ತತ್ತಿ ಅರಣ್ಯ ಪ್ರದೇಶದಿಂದ ಪದೇ ಪದೇ ನಾಡಿನತ್ತ ಬರುತ್ತಿದ್ದ ಕಾಡಾನೆಗಳು ರೈತರ ಬೆಳೆ ನಾಶ ಮಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ರೈತರ ದೂರನ್ನು ಪರಿಗಣಿಸಿ ಅರಣ್ಯ ಇಲಾಖೆ ಈಗ ಆನೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.
Advertisement
ನಾಲ್ಕು ಕಾಡಾನೆಗಳು ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಸದ್ಯಕ್ಕೆ ಎರಡು ಆನೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ದಸರಾ ಬಳಿಕ ಮತ್ತೆರಡು ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv