ಚಾಮರಾಜನಗರ: ಆನೆಗಳು ಬುದ್ಧಿವಂತ ಪ್ರಾಣಿಗಳು, ಅವುಗಳ ಜೀವನ ನೋಡುವುದೇ ಸುಂದರ ಅನುಭವ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಆನೆಗಳ ಚಿನ್ನಾಟ, ಅವುಗಳ ತರಲೆ ತುಂಟಾಟದ ಅಪರೂಪದ ವೀಡಿಯೋಗಳೂ ಸದ್ದು ಮಾಡುತ್ತಿರುತ್ತವೆ.
ಅದರಲ್ಲೂ ಮರಿಯಾನೆಯೊಂದಿಗೆ ಇದ್ದಾಗ ಕಾಣಸಿಗುವ ವೀಡಿಯೋಗಳು ಸಖತ್ ಖುಷಿ ಕೊಡುತ್ತವೆ. ಇಂತಹದ್ದೇ ಘಟನೆಯೊಂದು ಈಗ ಚಾಮರಾಜನಗರ-ತಮಿಳುನಾಡು ಗಡಿ ಆಸನೂರು ಬಳಿ ಘಟನೆ. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ
Advertisement
Advertisement
ಮುಖ್ಯರಸ್ತೆಯಲ್ಲೇ ಕಬ್ಬಿನ ಲಾರಿಗಳ ಹಾಗೂ ವಾಹನಗಳ ಅಡ್ಡಗಟ್ಟಿರುವ ಆನೆಗಳು ಮಾರುದ್ದ ಸೊಂಡಿಲನ್ನು ಚಾಚಿ ಕಬ್ಬನ್ನು ಎಳೆದು ತಿನ್ನುತ್ತಿವೆ. ಆನೆಯೊಂದು ತನ್ನ ಮರಿಗೂ ಕಬ್ಬನ್ನು ಎಳೆದು ಕೊಡುತ್ತಿದೆ. ರಸ್ತೆ ಮಧ್ಯದಲ್ಲೇ ಈ ದೃಶ್ಯವನ್ನು ಕಂಡ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಪ್ರಾಂಶುಪಾಲರು, ಶಿಕ್ಷಕರು ಸೇರಿ ಐವರು ಅರೆಸ್ಟ್
Advertisement
ಇದೇ ವೇಳೆ ಆನೆಗಳು ಹತ್ತಿರದಲ್ಲೇ ಇದ್ದರೂ ಪದೇ ಪದೇ ಹಾರ್ನ್ ಮಾಡುತ್ತಿದ್ದರಿಂದ ಕಿರಿಕಿರಿಯುಂಟಾಗಿ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿವೆ.