ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಸೇರಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Violent protests break out over death of class XII girl at a private residential school in Kallakurichi, Tamil Nadu#Srimathi #JusticeForDefenceStudents #justiceforsrimathi #ஶ்ரீமதிக்கு_நீதி_வேண்டும் pic.twitter.com/DegcatafzK
— Siraj Noorani (@sirajnoorani) July 17, 2022
Advertisement
ಕಲ್ಲಕುರಿಚಿಯಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬಳು ತನ್ನ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಕ್ಕೆ ಶಿಕ್ಷಕರ ಚಿತ್ರಹಿಂಸೆಯೇ ಕಾರಣ ಎಂದು ಆರೋಪಿಸಿದ ಡೆತ್‌ನೋಟ್ ಪತ್ತೆಯಾಗಿತ್ತು. ಮರೋಣತ್ತರ ಪರೀಕ್ಷೆಯಲ್ಲೂ ಹಲವು ಗಾಯದ ಗುರುತುಗಳು, ರಕ್ತಸ್ರಾವ ಆಗಿರುವುದು ಕಂಡುಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ – ಕೆಲಸದಿಂದ ಪೌರಕಾರ್ಮಿಕ ವಜಾ
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಾಲೆಯ ರಸಾಯನಶಾಸ್ತ್ರ ಶಿಕ್ಷಕಿ ಹರಿಪ್ರಿಯಾ ಹಾಗೂ ಗಣಿತ ಶಿಕ್ಷಕಿ ಕೃತಿಕಾ ಅವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಶಾಲಾ ಪ್ರಾಂಶುಪಾಲರು, ಕಾರ್ಯದರ್ಶಿ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸೆ.3ರಂದು ವಿಶ್ವದ ಮೊದಲ ರಣಹದ್ದು ಸಂರಕ್ಷಣೆ ಕೇಂದ್ರ ಉದ್ಘಾಟಿಸಲಿರುವ ಯೋಗಿ
Advertisement
ಘಟನೆ ಏನು?
ಚಿನ್ನ ಸೇಲಂ ಸಮೀಪದ ಕಣಿಯಮೂರ್‌ನಲ್ಲಿರುವ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ಬುಧವಾರ, 12ನೇ ತರಗತಿ ಶವವಾಗಿ ಪತ್ತೆಯಾಗಿದ್ದಳು. ಶಾಲೆಯ ಆಡಳಿತಾಧಿಕಾರಿಗಳು ಸಾವಿನ ಕುರಿತು ಮಾಹಿತಿ ನೀಡಿದ ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಲ್ಲಕುರಿಚಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದರು. ಶಾಲೆಯ ಶಿಕ್ಷಕರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಉಲ್ಲೇಖಿಸಿರುವ ಸೂಸೈಡ್ ನೋಟ್ ಸಹ ಪತ್ತೆಯಾಗಿತ್ತು. ಇದನ್ನೂ ಓದಿ: ಭಿನ್ನಮತಕ್ಕೆ ಬ್ರೇಕ್ ಹಾಕಲು ಉದ್ಧವ್ ಠಾಕ್ರೆ – ಶಿಂಧೆ ಸಭೆ, ಬಿಜೆಪಿ ನಾಯಕರೇ ಮಧ್ಯಸ್ಥಿಕೆ: ದೀಪಾಲಿ ಸೈಯದ್
ವರದಿಗಳ ಪ್ರಕಾರ ಘಟನೆ ನಡೆದಿರುವ ಶಾಲೆ ಹಾಗೂ ವಸತಿ ನಿಲಯದ ಬಳಿ 2,000ಕ್ಕೂ ಹೆಚ್ಚಿನ ಪ್ರತಿಭಟನಾಕಾರರು ಜಮಾಯಿಸಿದ್ದರು. ನಿನ್ನೆ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಪ್ರಾರಂಭವಾದ ಪ್ರತಿಭಟನೆ ಕೆಲವೇ ನಿಮಿಷಗಳಲ್ಲಿ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರು ಶಾಲಾ ಕಟ್ಟಡ, ತರಗತಿ ಕೊಠಡಿಗಳು ಹಾಗೂ ಪ್ರಾಂಶುಪಾಲರ ಕ್ಯಾಬಿನ್ ಅನ್ನು ಧ್ವಂಸಗೊಳಿಸಿದರು. ಶಾಲಾ ಕ್ಯಾಂಪಸ್‌ನಲ್ಲಿದ್ದ ಬಸ್‌ಗಳಿಗೆ ಬೆಂಕಿ ಹಚ್ಚಿದರು. ಟ್ರ‍್ಯಾಕ್ಟರ್‌ಗಳ ಮೂಲಕ ಶಾಲಾ ಬಸ್‌ಗಳಿಗೆ ಗುದ್ದಿಸಿ, ಆಯುಧಗಳಿಂದ ವಾಹನಗಳ ಗಾಜನ್ನು ಒಡೆದು ಹಾಕಿದರು. ಮಾತ್ರವಲ್ಲದೇ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾಲೆಯ ಪ್ರಾಂಶುಪಾಲರು ಸೇರಿ ಮೂವರನ್ನು ಬಂಧಿಸಿದ್ದರು. ಇಂದು ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ.