ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಎರಡು ಆನೆಗಳ ಕಾಳಗ ಅಧಿಕಾರಿಗಳಿಗೆ ರಸದೌತಣ ನೀಡಿದರೆ ಮತ್ತೊಂದೆಡೆ ಅಧಿಕಾರಿಗಳ ಎದೆ ಬಡಿತ ಹೆಚ್ಚಿಸಿತ್ತು.
ಆಪರೇಷನ್ ಉಬ್ರಾಣಿ ಹೆಸರಿನಲ್ಲಿ ಅಧಿಕಾರಿಗಳು ಪುಂಡಾನೆ ಸೆರೆ ಹಿಡಿಯಲು ಉಬ್ರಾಣಿ ಅರಣ್ಯದಲ್ಲಿ ಕೂಂಬಿಗ್ ನಡೆಸುತ್ತಿದ್ದರು. ಈ ವೇಳೆ ಕಾಡಾನೆ ಅಧಿಕಾರಿಗಳ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಸಾಕಾನೆ ಅಭಿಮನ್ಯು ಹಾಗೂ ಕೃಷ್ಣ ಅಧಿಕಾರಿಗಳಿಗೆ ರಕ್ಷಣೆ ನೀಡಿದ್ದಲ್ಲದೇ ಕಾಡಾನೆಯೊಂದಿಗೆ ಕಾಳಗಕ್ಕೆ ಇಳಿದವು.
ಈ ವೇಳೆ ಅಭಿಮನ್ಯು ಕಾಡಾನೆ ಮೇಲೆ ದಾಳಿ ಮಾಡಿ ಅದರ ಸೊಕ್ಕು ಅಡಗಿಸಿದೆ. ಅಲ್ಲದೇ ಅಭಿಮನ್ಯು ದಾಳಿಗೆ ಕಾಡಾನೆಯ ಒಂದು ದಂತ ಕೂಡ ಕಟ್ ಆಗಿ, ಕಾಡಾನೆ ಅಭಿಮನ್ಯುವಿನ ಪರಾಕ್ರಮದ ಮುಂದೆ ಮಂಡಿಯೂರಿ ಕಾಡಿನಲ್ಲಿ ಮರೆಯಾಗಿದೆ.
ಅಧಿಕಾರಿಗಳು ತುಂಡಾದ ದಂತವನ್ನು ಸಂಗ್ರಹಿಸಿದ್ದು ಅಲ್ಲಿ ಜಿಪಿಎಸ್ ಮಾಡಿ ಕಾನೂನು ಪ್ರಕಾರ ಅದನ್ನು ಸುಟ್ಟುಹಾಕುವುದಾಗಿ ತಿಳಿಸಿದ್ದಾರೆ.
https://www.youtube.com/watch?v=2Tl7R78eA_Y